twitter
    For Quick Alerts
    ALLOW NOTIFICATIONS  
    For Daily Alerts

    ನಿಜ ಜೀವನದ ಹೀರೋ ಯಾರು? ಕಿಶೋರ್ ಕೇಳಿ

    By ಸುನೀತಾ ಗೌಡ
    |

    ಕೇವಲ ಕನ್ನಡಕ್ಕಷ್ಟೇ ಸೀಮಿತವಾಗದ ಪ್ರತಿಭಾವಂತ ನಟ ಕಿಶೋರ್ ಅವರು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

    ಸದ್ಯಕ್ಕೆ ಕೈ ತುಂಬಾ ಪ್ರಾಜೆಕ್ಟ್ ಗಳನ್ನು ಹಿಡಿದು ಓಡಾಡುತ್ತಿರುವ ಕಿಶೋರ್ ಅವರ ಜೊತೆ ನಡೆಸಿದ ಚಿಟ್ ಚಾಟ್ ನ ಮುಂದುವರಿದ ಭಾಗ ಇಲ್ಲಿದೆ.

    * ಚಿತ್ರರಂಗಕ್ಕೆ ಬರೋಕೆ ಮುಂಚೆ ಯಾವ ಕಾಲೇಜಿನಲ್ಲಿ ಕೆಲಸ ಮಾಡ್ತಾ ಇದ್ರಿ?

    - ಬೆಂಗಳೂರಿನ ಶಾರದಾ ಕಾಲೇಜು (6th block) ಅಲ್ಲಿ ಡಿಗ್ರಿ ಕಾಲೇಜು ಮಕ್ಕಳಿಗೆ ನಾನು ಪಾಠ ಮಾಡುತ್ತಿದ್ದೆ.

    * ನೀವು ಟೀಚಿಂಗ್ ಫೀಲ್ಡ್ ನಿಂದ ಸಿನಿಮಾ ಫೀಲ್ಡ್ ಗೆ ಬಂದಿದ್ದು ಹೇಗೆ?

    - ನಾನು ಮೊದಲು 'ಕಂಠಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಆನಂತರ ಹೀಗೆ ಅವಕಾಶಗಳು ಸಿಗ್ತಾನೇ ಹೋಯಿತು. ಸೋ ಆಮೇಲೆ ಲೆಕ್ಚರಿಂಗ್ ಮಾಡೋಕೆ ಟೈಮ್ ಸಿಗ್ಲಿಲ್ಲಾ ಹಾಗೆ ಆ ಕೆಲಸ ಬಿಟ್ಟು ಇಲ್ಲೇ ಸೆಟಲ್ ಆದೆ.[ಕಾಲೇಜುಗಳಿಗೆ ವಾಸ್ಕೋಡಿಗಾಮನಾಗಿ ಕಿಶೋರ್ ಎಂಟ್ರಿ]

    * ಚಿತ್ರಕ್ಕೆ 'ವಾಸ್ಕೋಡಿಗಾಮ' ಅಂತ ಯಾಕೆ ಟೈಟಲ್?

    - ಪೋರ್ಚುಗೀಸ್ ದೊರೆ ವಾಸ್ಕೋಡಿಗಾಮ ಸಮುದ್ರ ಮಾರ್ಗ ಕಂಡುಹಿಡಿದ ಆದ್ರೆ ಈ 'ವಾಸ್ಕೋಡಿಗಾಮ' ಅವನ ದಾರಿಯಲ್ಲೇ ಒಂದು ಹೊಸ ದಾರಿ ಹುಡುಕೋಕೆ ಶುರು ಮಾಡ್ತಾನೆ.

    * ಮುಂದಿನ ಪ್ರಾಜೆಕ್ಟ್ ಬಗ್ಗೆ ಹೇಳಿ.

    - ಸದ್ಯಕ್ಕೆ 'ಆಕ್ಟೋಪಸ್' ರೆಡಿಯಾಗಿದೆ, ನಂತರ ಸುಮನಾ ಕಿತ್ತೂರು ಅವರ 'ಕಿರಗೂರಿನ ಗಯ್ಯಾಳಿಗಳು' ಆಲ್ ಮೋಸ್ಟ್ ರೆಡಿಯಾಗ್ತ ಇದೆ.

    * ಮುಂದಿನ ಪ್ರಾಜೆಕ್ಟ್ ನಲ್ಲಿ ನಿಮ್ಮದು ಮುಖ್ಯ ಪಾತ್ರಗಳಿವೆಯೇ?

    - ನಾನು ನನ್ನ ಚಿತ್ರರಂಗದ ಬದುಕಿನಲ್ಲಿ ಯಾವತ್ತೂ ಹೀರೋ ವಿಲನ್ ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವನಲ್ಲ, ನನ್ನ ಪ್ರಕಾರ ಹೀರೋ ಅಂದ್ರೆ ತನ್ನೆಲ್ಲಾ ಸ್ವಾರ್ಥವನ್ನು ಬಿಟ್ಟು ಸಮಾಜಕ್ಕೆ ಏನಾದ್ರೂ ಮಾಡುವವನೇ ನಿಜ ಜೀವನದ ಹೀರೋ. ಇನ್ನುಳಿದಂತೆ ನಾವು ಸಿನಿಮಾಗಳಲ್ಲಿ ಕರೆಯುವವನು ಕೇವಲ ಕಥೆಗೆ ಮಾತ್ರ ಹೀರೋ.

    ಅಂದಹಾಗೆ 'ವಾಸ್ಕೋಡಿಗಾಮ' ಸೇರಿದಂತೆ 'ಆಕ್ಟೋಪಸ್' ಚಿತ್ರದಲ್ಲೂ ನಾನು ಮುಖ್ಯ ಪಾತ್ರ ವಹಿಸುತ್ತಿದ್ದೇನೆ. ಜೊತೆಗೆ 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಒಂಥರಾ ಊರು ಕಥಾ ನಾಯಕ ಇದ್ದ ಹಾಗೆ ಊರಿನ ಎಲ್ಲಾ ಗಂಡಸರ ಸಮಸ್ಯೆಗಳನ್ನು ಸರಿಪಡಿಸೋ ಪಾತ್ರ. ಇನ್ನು ಈ ಚಿತ್ರದಲ್ಲಿ ಎಲ್ಲರಿಗೂ ಸಮಾನ ಪಾತ್ರವಿದೆ.

    English summary
    Kannada films most acclaimed actor Kishore spoke to Filmibeat. Here is the interview. His best known films include Duniya, Akash, Raakshasa, Polladhavan, Happy, Huli, 'Ulidavaru Kandanthe', 'Vascodigama'. He reveals his upcoming project.
    Tuesday, September 8, 2015, 18:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X