»   » ನನ್ನ ಮಗಳೇ ನಂಗೆ ಬಿಗ್ ಗಿಫ್ಟ್ - ರಾಧಿಕಾ ಕುಮಾರಸ್ವಾಮಿ

ನನ್ನ ಮಗಳೇ ನಂಗೆ ಬಿಗ್ ಗಿಫ್ಟ್ - ರಾಧಿಕಾ ಕುಮಾರಸ್ವಾಮಿ

Posted by:
Subscribe to Filmibeat Kannada

ಲಾಂಗ್ ಗ್ಯಾಪ್ ನಂತ್ರ 'ಸ್ವೀಟಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡಿರುವ ರಾಧಿಕಾ ಕುಮಾರಸ್ವಾಮಿಗಿಂದು ಹುಟ್ಟುಹಬ್ಬದ ಸಂಭ್ರಮ. 29ನೇ ವರ್ಷದ ಹುಟ್ಟುಹಬ್ಬವನ್ನ ರಾಧಿಕಾ, ತಮ್ಮ ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡ್ತಿದ್ದಾರೆ. ರಾಧಿಕಾಗೆ ಸರ್ಪ್ರೈಸ್ ನೀಡ್ಬೇಕು ಅಂತ 'ರುದ್ರತಾಂಡವ' ಚಿತ್ರತಂಡ ಇಂದು ರಾಧಿಕಾ ಮೇಡಂ ಗಾಗಿ ಸ್ಪೆಷಲ್ ಟ್ರೇಲರ್ ಲಾಂಚ್ ಮಾಡ್ತಿದೆ. ಇನ್ನೂ 'ನಮಗಾಗಿ' ಚಿತ್ರತಂಡ ರಾಧಿಕಾ ಇಷ್ಟಪಡುವ ಅನಾಥಾಶ್ರಮದಲ್ಲೇ ಇಂದು ಶೂಟಿಂಗ್ ಫಿಕ್ಸ್ ಮಾಡಿದೆ. ಹಲವಾರು ಸರ್ಪ್ರೈಸಸ್ ಗಳ ಮಧ್ಯೆ ರಾಧಿಕ ಹುಟ್ಟುಹಬ್ಬದ ಸಂಭ್ರಮ ಹೇಗಿದೆ..? ಅಂದಿನ ರಾಧಿಕಾ ಮತ್ತು ಇಂದಿನ ರಾಧಿಕಾರ ಲೈಫ್ ಹೇಗಿದೆ..? ಅನ್ನೋದರ ಕುರಿತು 'ಫಿಲ್ಮಿಬೀಟ್ ಕನ್ನಡ'ಗೆ ರಾಧಿಕಾ ಕುಮಾರಸ್ವಾಮಿ ಸಂದರ್ಶನ ನೀಡಿದ್ದಾರೆ.

* ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ರಾಧಿಕಾ...

ರಾಧಿಕಾ ಕುಮಾರಸ್ವಾಮಿ - ಥ್ಯಾಂಕ್ ಯ್ಯೂ ಸೋ ಮಚ್.


* 29ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ತಿದ್ದೀರಾ. ಹೇಗಿದೆ ಸಂಭ್ರಮ?

- ಸಂಭ್ರಮ ಜೋರಾಗಿದೆ. ಇಷ್ಟು ಗ್ರ್ಯಾಂಡಾಗಿ ಈ ವರ್ಷದ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡ್ತೀನಿ ಅಂದುಕೊಂಡಿರ್ಲಿಲ್ಲ. 'ರುದ್ರತಾಂಡವ' ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಮಧ್ಯಾಹ್ನ 'ನಮಗಾಗಿ' ಚಿತ್ರದ ಶೂಟಿಂಗ್ ಇದೆ. ಬರ್ತಡೇ ದಿನ ಖಾಲಿ ಕೂರಬಾರದು ಅಂತ ಶೂಟಿಂಗ್ ಮಾಡ್ತಿದ್ದೀವಿ. ಸ್ಪೆಷಲ್ ಅಂದ್ರೆ, ನಾನು ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನ ಅನಾಥಾಶ್ರಮದಲ್ಲಿ ಆಚರಿಸಿಕೊಳ್ಳುತ್ತಿದೆ. ಇವತ್ತೂ 'ನಮಗಾಗಿ' ಚಿತ್ರತಂಡ ಅನಾಥಾಶ್ರಮದಲ್ಲೇ ಶೂಟಿಂಗ್ ಇಟ್ಟುಕೊಂಡಿದೆ. ಅಲ್ಲೂ ಒಂದು ಸರ್ಪ್ರೈಸ್ ಇದೆ ಅಂತಿದ್ದಾರೆ. ಈ ವರ್ಷದ ಬರ್ತಡೆ ಇಷ್ಟೊಂದು ಗ್ರ್ಯಾಂಡಾಗಿ ನಡೀತಿದೆ. ಆದ್ರೆ, ಅದೇ ಮೂರು ವರ್ಷದ ಹಿಂದೆ ನನ್ನ ಫ್ಯಾಮಿಲಿ ಜೊತೆ ಮಾತ್ರ ಬರ್ತಡೇ ಸೆಲೆಬ್ರೇಟ್ ಮಾಡ್ತಿದ್ದೆ. ಕಳೆದ ವರ್ಷ 'ಸ್ವೀಟಿ' ಟೀಂ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದೆ. ಈ ವರ್ಷ ಎರೆಡೆರಡು ಟೀಂ ಜೊತೆ ಸೆಲೆಬ್ರೇಟ್ ಮಾಡೋ ಅವಕಾಶ ಸಿಕ್ಕಿದೆ. ಇದಕ್ಕಿಂತ ಮತ್ತೇನು ಬೇಕು ನಂಗೆ!* ಹಾಗಾದ್ರೆ, ಈ ವರ್ಷ ನಿಮ್ಮ ಜೀವನದ ಬೆಸ್ಟ್ ಬರ್ತಡೆ ಅನ್ನಬಹುದಾ..?

- ಇಲ್ಲಾ..! ನನ್ನ ಜೀವನದ ಬೆಸ್ಟ್ ಬರ್ತಡೇ, ನನ್ನ ಮಗಳು ಶಮಿಕಾ ಹುಟ್ಟಿದ ವರ್ಷ. ನಾವಿಬ್ಬರೂ ನವೆಂಬರ್ ನಲ್ಲೇ ಹುಟ್ಟಿದ್ದು. ಸೋ, ಅವಳೇ ನಂಗೆ ಬಿಗ್ ಬರ್ತಡೇ ಗಿಫ್ಟ್.

* ವರ್ಷಗಳು ಕಳೆದಷ್ಟು ರಾಧಿಕಾ ಕುಮಾರಸ್ವಾಮಿ ಯಂಗ್ ಅಂಡ್ ಎನರ್ಜಿಟಿಕ್ ಆಗ್ತಿದ್ದಾರಲ್ಲಾ?

- ವಯಸ್ಸಾಗ್ತಿದೆ. ಏಜ್ ಆಗ್ತಿದೆ ಅನ್ನೋವಾಗ್ಲೇ ನಾನು ಸಿನಿಮಾಗೆ ರೀಎಂಟ್ರಿ ಕೊಟ್ಟೆ. ಬಟ್ ನಂಗೆ ಪಾಸಿಟೀವ್ ರೆಸ್ಪಾನ್ಸ್ ಸಿಕ್ತು. ಎಲ್ಲರು ಚೆನ್ನಾಗಿ ಕಾಣ್ತೀರಾ, ಗ್ಲಾಮರ್ ಆಗಿದ್ದೀರಾ ಅಂತ ಹೇಳೋವಾಗ ಖುಷಿ ಅನ್ಸುತ್ತೆ. ಇದನ್ನೇ ನಾನು ಮೇನ್ಟೇನ್ ಮಾಡಬೇಕು. [ರಾಧಿಕಾ ಕುಮಾರ ಸ್ವಾಮಿ ಫೋನಿಲ್ಲ, ಮೆಸೇಜಿಲ್ಲ]

* ನಿಮ್ಮ ಬರ್ತಡೇ ರೆಸೊಲ್ಯೂಶನ್ ಏನು?

- ಒಳ್ಳೊಳ್ಳೆ ಸಿನಿಮಾಗಳನ್ನ ಮಾಡಬೇಕನ್ನೋದೇ ನನ್ನ ರೆಸೊಲ್ಯೂಶನ್.

* ನಿಮ್ಮ ಹುಟ್ಟುಹಬ್ಬದ ಪ್ರಯುಕ್ತ, 'ರುದ್ರತಾಂಡವ' ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದೆ. ಯಾರ ಐಡಿಯಾ ಇದು?

- ನನಗಿದು ಗೊತ್ತೇಯಿಲ್ಲ. ಡೈರೆಕ್ಟರ್ ಗುರು ದೇಶ್ ಪಾಂಡೆ ಸಡನ್ ಆಗಿ ಫೋನ್ ಮಾಡಿ ನಿಮಗೊಂದು ಸರ್ಪ್ರೈಸ್ ಬರ್ತಡೆ ಗಿಫ್ಟ್ ಇದೆ ಅಂದ್ರು. ನನ್ನ ಬರ್ತಡೇ ದಿನ, ನನ್ನ ಚಿತ್ರದ ಟ್ರೇಲರ್ ಲಾಂಚ್ ಮಾಡಿರೋದು ನನಗೆ ತುಂಬಾ ಖುಷಿ ಕೊಟ್ಟಿದೆ. ಎಸ್ಪೆಷಲಿ, ನನ್ನ ಫೇವರೇಟ್ ಸಾಂಗ್ ಕೂಡ ರಿಲೀಸ್ ಆಗಿದೆ.''ಯಾರೀ ಯಾರೀ ಈ ಹುಡುಗಿ, ಬೆಳ್ಳಿ ಮೈಯ ಹುಡುಗಿ, ನೋಡಿ ನೋಡಿ ತಲೆ ಚಕ್ಕರ್ ಆಗಿ....'' ಅಂತ ಕೆ.ಕಲ್ಯಾಣ್ ಬರೆದಿರೋ ಲಿರಿಕ್ಸ್ ನನಗಿಷ್ಟ. ಸೋ ಡಬಲ್ ಗಿಫ್ಟ್ ನನಗೆ..!

* ಸಾಮಾನ್ಯವಾಗಿ ದೊಡ್ಡ ದೊಡ್ಡ ಹೀರೋಗಳ ಬರ್ತಡೆಯಂದು, ಅವ್ರು ಅಭಿನಯಿಸಿರುವ ಚಿತ್ರಗಳ ಮುಹೂರ್ತ ಆಗುತ್ತೆ, ಇಲ್ಲಾ ಚಿತ್ರದ ಟ್ರೇಲರ್ ಲಾಂಚ್ ಆಗುತ್ತೆ. ಆದರೆ, ಹೀರೋಯಿನ್ ಮಟ್ಟಿಗೆ ನೀವೇ ಲಕ್ಕಿ ಅಲ್ವಾ..?

- ಖಂಡಿತಾ..! ಈಗಿನ ಕಾಲದಲ್ಲಿ ಹೀರೋಯಿನ್ಸ್ ಬಗ್ಗೆ ಯಾರೂ ತಲೆನೇ ಕೆಡಿಸಿಕೊಳ್ಳೋದಿಲ್ಲ. ಅಂತದ್ರಲ್ಲಿ ಹೀರೋಯಿನ್ ಬರ್ತಡೆ ದಿನ ಟ್ರೇಲರ್ ಲಾಂಚ್ ಮಾಡ್ತಿದ್ದಾರೆ ಅಂದ್ರೆ ನಾನ್ ಲಕ್ಕಿ. ನಾನು ಮಾತ್ರ ಅಲ್ಲ, ಎಲ್ಲಾ ಹೀರೋಯಿನ್ಸು ಖುಷಿ ಪಡ್ಬೇಕು. [ಕ್ಲೋಸ್ ಲುಕ್ ನಲ್ಲಿ ರಾಧಿಕಾ ಕುಮಾರಸ್ವಾಮಿ]

* 'ಸ್ವೀಟಿ' ಚಿತ್ರದಲ್ಲಿ ಅಲ್ಟ್ರಾ ಮಾಡರ್ನ್ ಆಗಿ ಕಾಣಿಸಿಕೊಂಡಿದ್ರಿ, ಆದ್ರೆ 'ರುದ್ರತಾಂಡವ' ಚಿತ್ರದಲ್ಲಿ ರಾಧಿಕಾ ಸೀರೆಯುಟ್ಟು ಡಲ್ ಆಗ್ಬಿಟ್ರಾ?

- ಇಲ್ಲಾ. ಇಲ್ಲಿ ಗ್ಲಾಮರ್ ಮತ್ತು ಹೋಮ್ಲಿ, ಎರಡೂ ಲುಕ್ ಇದೆ. ಚಿತ್ರದ ಸಬ್ಜೆಕ್ಟ್ ಡಿಮ್ಯಾಂಡ್ ಮಾಡೋದೇ ಹಾಗೆ. 'ರುದ್ರತಾಂಡವ' ಚಿತ್ರದಲ್ಲಿ ಎಂದಿನ ರಾಧಿಕಾ ಪರ್ಫಾಮೆನ್ಸ್ ನ ನೀವು ನೋಡಬಹುದು.

* ನಟನೆ ಮಾಡ್ತಿದ್ದೀರಾ..ನಿಮ್ಮದೆ ಪ್ರೊಡಕ್ಷನ್ ಕಂಪನಿ ಕೂಡ ಇದೆ. ನಟನೆ ಇಷ್ಟನಾ ಅಥವಾ ಪ್ರೊಡಕ್ಷನ್ ಓ.ಕೆ.ನಾ..?

- ನಂಗೆ ನಟನೆ ತುಂಬಾ ಇಷ್ಟ. ಅದರಲ್ಲಿ ಎರಡು ಮಾತಿಲ್ಲ. ಪ್ರೊಡ್ಯೂಸರ್ ಕೆಲಸ ಸ್ವಲ್ಪ ರಿಸ್ಕ್ ಅನ್ಸುತ್ತೆ.

* ಗಂಡ, ಮನೆ, ಮಗು ಜೊತೆಗೆ ಆಕ್ಟಿಂಗ್ ಮತ್ತು ಪ್ರೊಡಕ್ಷನ್..! ಎಲ್ಲಾ ಹೇಗೆ ಮ್ಯಾನೇಜ್ ಮಾಡ್ತೀರಾ..? ಕಷ್ಟ ಅನಿಸೋಲ್ವಾ..?

- ಎಲ್ಲರನ್ನ ಒಬ್ಬಳೇ ನೋಡಿಕೊಳ್ಳುವುದು ಕಷ್ಟ. ಅದಕ್ಕೆ ತುಂಬಾ ಸಿನಿಮಾಗಳನ್ನ ಒಪ್ಪಿಕೊಳ್ತಿಲ್ಲ. ಒಂದು ಸಿನಿಮಾ ನನ್ನ ಬ್ಯಾನರ್ ನಲ್ಲಿ ಮಾಡಿದ್ರೆ, ಬೇರೆ ಬ್ಯಾನರ್ ನಲ್ಲಿ ವರ್ಷಕ್ಕೆ ಮಿನಿಮಂ ಎರಡು ಸಿನಿಮಾ ಮಾಡಬಹುದು ಅಷ್ಟೆ. ಆದ್ರೆ, ಯಾವುದೇ ಕಾರಣಕ್ಕೂ ಚಿತ್ರರಂಗದಿಂದ ನಾನು ದೂರ ಅಂತೂ ಉಳಿಯಲ್ಲ. ಸಿನಿಮಾ ಮಾಡುವುದರಲ್ಲಿ ನನಗೆ ಸಿಗುವ ಖುಷಿ ಮತ್ತಿನ್ಯಾವುದರಲ್ಲಿಯೂ ಸಿಕ್ಕಲ್ಲ. ಅದಕ್ಕೆ ಫ್ಯಾಮಿಲಿ ಸಪೋರ್ಟ್ ನಂಗೆ ತುಂಬಾ ಇದೆ. ಅದೇ ನನ್ನ ಅದೃಷ್ಟ. [ಏಳು ವರ್ಷಗಳ ನಂತ್ರ ಬಣ್ಣ ಹಚ್ಚಿದ ರಾಧಿಕಾ]

* ಶೂಟಿಂಗ್ ಟೈಮ್ಮಲ್ಲಿ ಮಗಳು ಶಮಿಕಾ, ನಿಮ್ಮನ್ನ ಮಿಸ್ ಮಾಡಿಕೊಳ್ಳೋದಿಲ್ವಾ..?

- ಶಮಿಕಾ ಸ್ಕೂಲ್ ಗೆ ಹೋಗ್ತಿದ್ದಾಳೆ. ನನ್ನನ್ನ ಮಿಸ್ ಮಾಡಿಕೊಳ್ಳದೇ ಇರುವಷ್ಟು ಚೆನ್ನಾಗಿ ನನ್ನ ತಂದೆ ತಾಯಿ ಅವಳನ್ನ ನೋಡಿಕೊಳ್ತಾರೆ. ಪ್ರತಿ ಸಿನಿಮಾ ಒಪ್ಪಿಕೊಳ್ಳೊಕೆ ಮುಂಚೆ ನಾನು ಕಂಡೀಷನ್ ಹಾಕ್ತಿದ್ದೀನಿ. 9-6 ಮಾತ್ರ ನನ್ನ ಕಾಲ್ ಶೀಟ್. ಬಾಕಿ ಸಮಯ ನನ್ನ ಮಗಳ ಜೊತೆ ಕಳೆಯೋಕೆ ಮೀಸಲು.

* ಯಾವ ನಟಿಗೂ ಸಿಗದೇ ಇರುವಷ್ಟು ರೆಸ್ಪಾನ್ಸ್ ನಿಮ್ಮ ಕಮ್ ಬ್ಯಾಕ್ ಗೆ ಸಿಕ್ತು. ಇದಕ್ಕೆ ನಿಮ್ಮ ಪ್ರತಿಕ್ರಿಯೆ.

- ಅಭಿಮಾನಿಗಳು ನನಗೆ ಅವಕಾಶ ಕೊಟ್ಟಿದ್ದಕ್ಕೆ ಸಿನಿಮಾ ಮಾಡ್ತಾಯಿದ್ದೀನಿ. ಅಭಿಮಾನಿಗಳು ನನ್ನನ್ನ ಒಪ್ಪಿಕೊಂಡಿದ್ದಕ್ಕೆ ನನಗೆ ಒಳ್ಳೆ ಚಾನ್ಸ್ ಸಿಗ್ತಿದೆ. ಅವ್ರು ಎಲ್ಲಿವರೆಗೂ ನನ್ನನ್ನ ನೋಡೋಕೆ ಇಷ್ಟ ಪಡುತ್ತಾರೋ ಅಲ್ಲಿವರೆಗೂ ಸಿನಿಮಾ ಮಾಡ್ತೀನಿ. ಅಭಿಮಾನಿಗಳಿಗೆ ಸಾಕು ಅನಿಸಿದಾಗ ಹೀರೋಯಿನ್ ಆಗೋದನ್ನ ಬಿಟ್ಟು ನಿರ್ಮಾಪಕಿಯಾಗ್ತೀನೇ ಹೊರತು ಚಿತ್ರರಂಗವನ್ನ ಬಿಟ್ಟು ಹೋಗೋದಿಲ್ಲ.

* ಇದುವರೆಗೂ ಬಿಗ್ ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡುತ್ತಾ ಬಂದಿದ್ದೀರಾ. ಮತ್ತಿನ್ಯಾವ ಕನ್ನಡದ ಹೀರೋ ಜೊತೆ ನಿಮಗೆ ವರ್ಕ್ ಮಾಡ್ಬೇಕು ಅಂತ ತುಂಬಾ ಆಸೆ ಇದೆ?

- ಪುನೀತ್, ಸುದೀಪ್, ಯಶ್ ಜೊತೆ ನಾನಿನ್ನೂ ಆಕ್ಟ್ ಮಾಡಿಲ್ಲ. ಅವರೆಲ್ಲರ ಜೊತೆ ವರ್ಕ್ ಮಾಡೋ ಆಸೆ ಇದೆ. ಚಾನ್ಸ್ ಗಾಗಿ ವೇಯ್ಟ್ ಮಾಡ್ತಿದ್ದೀನಿ.

* ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹೇಳೋದಾದ್ರೆ.?

- 'ರುದ್ರತಾಂಡವ' ರಿಲೀಸ್ ಗೆ ರೆಡಿಯಾಗ್ತಿದೆ. ರಘುರಾಮ್ ನಿರ್ದೇಶನದಲ್ಲಿ ನಾನು ಮತ್ತು ವಿಜಯ್ ರಾಘವೇಂದ್ರ ನಟಿಸುತ್ತಿರುವ 5ನೇ ಸಿನಿಮಾ 'ನಮಗಾಗಿ' ಶೂಟಿಂಗ್ ನಡೀತಾಯಿದೆ. ಬೇರೆ ಬೇರೆ ಪ್ರಾಜೆಕ್ಟ್ಸ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಕಳೆದ ವರ್ಷದ ಹುಟ್ಟುಹಬ್ಬಕ್ಕೆ ಒಂದು ಸಿನಿಮಾ ಇತ್ತು. ಈ ವರ್ಷ ಮೂರಾಗಿದೆ. ಖುಷಿಯ ವಿಷಯ ಅಲ್ವಾ. [ನಟಿ ರಾಧಿಕಾ ಈಗ ರಾಧಿಕಾ ಕುಮಾರಸ್ವಾಮಿ]

* ಅಂದು 'ನಿನಗಾಗಿ', ಇಂದು 'ನಮಗಾಗಿ'. ಈ ಚಿತ್ರದ ಬಗ್ಗೆ ಹೇಳೋದಾದರೆ..?

- ನಿನಗಾಗಿ ಮಾಡುವಾಗ ತುಂಬಾ ಚಿಕ್ಕವಯಸ್ಸು. ಕಾಲೇಜ್ ಗೋಯಿಂಗ್ ಕ್ಯಾರೆಕ್ಟರ್ಸ್. ಆದ್ರೆ ನಮಗಾಗಿ ಮೆಚ್ಯೂರ್ಡ್ ಕ್ಯಾರೆಕ್ಟರ್ಸ್. ಆ ಚಿತ್ರಕ್ಕೂ, ಈ ಚಿತ್ರಕ್ಕೂ ಕಂಪೇರ್ ಮಾಡೋಕೆ ಆಗಲ್ಲ. ಸಬ್ಜೆಕ್ಟ್ ತುಂಬಾ ಚೆನ್ನಾಗಿದೆ. ತುಂಬಾ ಎಮೋಷನಲ್ಲಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತೆ. ನನಗೆ ಕಥೆ ಹೇಳೋವಾಗ್ಲೇ ಕಣ್ಣೀರು ಹಾಕಿದ್ದೆ. ತುಂಬಾ ಇಷ್ಟ ಆಯ್ತು ಸ್ಟೋರಿ ನಂಗೆ. ಇಲ್ಲಿವರೆಗೂ ನಾನು ಮಾಡಿರುವ ಪಾತ್ರಗಳಿಗಿಂತಲೂ ಇದು ತುಂಬಾ ವಿಭಿನ್ನವಾಗಿದೆ. ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ.

* 'ವಿಭಿನ್ನ' ಅಂದ್ರೆ ರಾಧಿಕರಿಂದ ಅಭಿಮಾನಿಗಳು ಏನ್ ಎಕ್ಸ್ ಪೆಕ್ಟ್ ಮಾಡಬಹುದು..?

- ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಮತ್ತು ನನ್ನದು ಒಂದು ಹಾಡಿದೆ. ಅದ್ರಲ್ಲಿ ಮಕ್ಕಳು ನಮ್ಮಲ್ಲಿ ಯಾರು ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ ಅಂತ ಕಾಂಪಿಟೇಷನ್ ಇಡ್ತಾರೆ. ಸೋ, ಈ ಚಿತ್ರದಲ್ಲಿ ನನಗೆ ಡ್ಯಾನ್ಸಿಂಗ್ ನಲ್ಲಿ ಒಳ್ಳೆ ಅವಕಾಶ ಸಿಕ್ಕಿದೆ. ವಿಜಯ್ ರಾಘವೇಂದ್ರ ಕೂಡ ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾರೆ. ನಮ್ಮಿಬ್ಬರಿಗೂ ಒಳ್ಳೆಯ ಡ್ಯಾನ್ಸ್ ಜುಗುಲ್ಬಂದಿ ಇದೆ. ಖಂಡಿತವಾಗ್ಲೂ ಫ್ಯಾನ್ಸ್ ಎಂಜಾಯ್ ಮಾಡ್ತಾರೆ.

* ಎಮೋಷನಲ್ ಅಂದ್ರಿ, 'ನಮಗಾಗಿ' ಮೂಲಕ ರಾಧಿಕಾ ಮತ್ತೆ ಸೆಂಟಿಮೆಂಟ್ ಆಗಿ ಅಳಿಸ್ತಾರಾ..?

- ಸಿನಿಮಾದಲ್ಲಿ ಬರೀ ಸೆಂಟಿಮೆಂಟ್, ಎಮೋಷನ್ ಮಾತ್ರ ಅಲ್ಲ. ಕಾಮಿಡಿಯಿದೆ, ಲವ್ ಇದೆ. ಎಲ್ಲಾ ರಸಗಳನ್ನ ನೀಟ್ ಆಗಿ ಮಿಕ್ಸ್ ಮಾಡಿದ್ದಾರೆ ನಿರ್ದೇಶಕ ರಘುರಾಮ್. ಈಗಿನ ಜನರೇಷನ್ ನ ಮೈಂಡ್ ನಲ್ಲಿಟ್ಟುಕೊಂಡು ಸಿನಿಮಾ ಮಾಡಿರೋದ್ರಿಂದ ಸೆಂಟಿಮೆಂಟ್ ಎಷ್ಟು ಬೇಕೋ ಅಷ್ಟಿದೆ. ನನ್ನ ಗ್ಲಾಮರ್ ಆಗಿ, ಹೋಮ್ಲಿಯಾಗಿ, ನನ್ನ ಡ್ಯಾನ್ಸ್, ನನ್ನ ಕೋಪವನ್ನ ಚಿತ್ರದಲ್ಲಿ ನೋಡ್ಬಹುದು.

* 'ನಮಗಾಗಿ' ಚಿತ್ರದಲ್ಲಿ ರಾಧಿಕಾಗೆ ತುಂಬಾ ಇಂಪ್ರೆಸ್ ಆಗಿರುವ ಅಂಶ..?

- ಈಗೋ ಪ್ರಾಬ್ಲಂನಿಂದ ಅನೇಕ ಜೋಡಿಗಳು ಚಿಕ್ಕಚಿಕ್ಕ ವಿಷಯಕ್ಕೆ ಬೇರೆಬೇರೆ ಆಗ್ತಾರೆ. ಹಾಗೆ ಮಾಡಿಕೊಳ್ಳೋರು 'ನಮಗಾಗಿ' ಚಿತ್ರದ ಕ್ಲೈಮ್ಯಾಕ್ಸ್ ನೋಡ್ಲೇಬೇಕು. ಸಿನಿಮಾ ನೋಡಿದವರಾರೂ ಜಗಳವಾಡೋದಿಲ್ಲ. ಚಿತ್ರದಲ್ಲಿರೋ ಮೆಸೇಜ್ ನನಗೆ ತುಂಬಾ ಇಷ್ಟ ಆಯ್ತು. ವರ್ಷಗಳಾದ್ಮೇಲೆ ವಿಜಯ್ ರಾಘವೇಂದ್ರ ಜೊತೆ ವರ್ಕ್ ಮಾಡ್ತಿದ್ದೀನಿ. ರಘುರಾಮ್ ಡೈರೆಕ್ಟ್ ಮಾಡ್ತಿದ್ದಾರೆ. ಒಳ್ಳೇ ಸಿನಿಮಾ ಆಗುತ್ತೆ ಅನ್ನೋ ನಂಬಿಕೆ ಇದೆ.

* ಬೇರೆ ಭಾಷೆಯಲ್ಲಿ ನಟಿಸೋಕೆ ಇಂಟ್ರೆಸ್ಟ್ ಇದ್ಯಾ..?

- ಮಾಡಬಾರದು ಅಂತೇನಿಲ್ಲ. ಅವತಾರಂ ಸಿನಿಮಾ ತೆಲುಗಿನಲ್ಲಿ ಮಾಡಿದ್ದೆ. ಒಳ್ಳೆ ಸಬ್ಜೆಕ್ಟ್ ಬಂದ್ರೆ ಮಾಡಬಹುದು.

* ರಾಜಕೀಯಕ್ಕೆ ಬರುವ ಪ್ಲಾನ್ಸ್ ಏನಾದ್ರೂ..?

- ಸದ್ಯಕ್ಕೆ ರಾಜಕೀಯ ಬೇಡ. ರಾಜಕೀಯ ಕೇಳ್ತಾಯಿದ್ರೇನೆ ಭಯ ಆಗುತ್ತೆ. ನನಗೇನಿದ್ರೂ ಕಲರ್ ಫುಲ್ ಫೀಲ್ಡ್ ಇಷ್ಟ. ಅದಕ್ಕೆಲ್ಲಾ ಇನ್ನೂ ಟೈಮ್ ಇದೆ. ಮುಂದಕ್ಕೆ ಆದರೆ ನೋಡೋಣ.

* ಕುಮಾರಣ್ಣನ ಸಪೋರ್ಟ್ ಹೇಗಿದೆ ?

- ಅವ್ರು ಸಪೋರ್ಟ್ ಇಲ್ಲದೆ ಇದ್ದಿದ್ರೆ, ಇವತ್ತು ನಿಮ್ಮೆಲ್ಲರ ಮುಂದೆ ನಾನು ಬರ್ತಿರ್ಲಿಲ್ಲ. ಅವ್ರು ಹೇಳಿದಕ್ಕೆ ನಾನು ಮತ್ತೆ ವಾಪಸ್ ಬಂದು ಸಿನಿಮಾ ಮಾಡ್ತಿರೋದು.

* ಕುಮಾರಣ್ಣನಲ್ಲಿ ನಿಮಗೆ ತುಂಬಾ ಇಷ್ಟವಾಗುವಂತಹ ಕ್ವಾಲಿಟಿ ಯಾವುದು.?

- ಅವ್ರ ಗುಣ ನಂಗೆ ತುಂಬಾ ಇಷ್ಟ. ತುಂಬಾ ಸೈಲೆಂಟ್. ನನ್ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

ಸಂದರ್ಶನ - ಹರ್ಷಿತಾ.ಎನ್

English summary
Actress Radhika kumaraswamy is celebrating her 29th birthday on november 12. On this occasion, actress turned producer Radhika Kumaraswamy has shared few instances of her life to FilmiBeat Kannada exclusively. Here is her detailed interview.
Please Wait while comments are loading...

Kannada Photos

Go to : More Photos