twitter

    ರುದ್ರತಾಂಡವ ಕಥೆ

    ರುದ್ರತಾಂಡವ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರು ನಾಯಕನಾಗಿ ಮತ್ತು ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಿರೀಶ್ ಕಾರ್ನಾಡ್, ರವಿಶಂಕರ್, ಸುನಿಲ್ ನಾಗಪ್ಪ, ಕುಮಾರ್ ಗೋವಿಂದ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

    ಗುರು ದೇಶಪಾಂಡೆ ಅವರ ನಿರ್ದೇಶನದಲ್ಲಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರ ತೆರೆ ಮೇಲೆ ಮುಡಿ ಬರಲಿದೆ.

    ಕಥೆ:

    ಸಾಮಾನ್ಯ ವ್ಯಕ್ತಿಯೊಬ್ಬ ತಿಳಿದುಕೊಂಡರೆ ಸಮಾಜ ಘಾತುಕ ವ್ಯಕ್ತಿಯೊಬ್ಬನನ್ನು ಹೇಗೆ ಮಟ್ಟಹಾಕಬಹುದು ಎಂಬುದೇ ಚಿತ್ರದ ಕಥಾಹಂದರ. ತನ್ನ ಅಣ್ಣನ (ಕುಮಾರ್ ಗೋವಿಂದ್) ಸಾವಿಗೆ ಕಾರಣನಾದ ನರಸಿಂಹ (ರವಿಶಂಕರ್) ಎಂಬ ನರರೂಪದ ರಾಕ್ಷಸನನ್ನು ಶಿವರಾಜ್ (ಚಿರಂಜೀವಿ ಸರ್ಜಾ) ಕೊಲ್ಲಲು ಮುಂದಾಗುತ್ತಾನೆ.

    ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಾನೆ. ಆದರೆ ನರಸಿಂಹನನ್ನು ಮುಗಿಸಲು ಇನ್ನೊಬ್ಬರು ಸುಪಾರಿ ಕೊಟ್ಟಿರುವುದು ಗೊತ್ತಾಗುತ್ತದೆ. ಆ ವ್ಯಕ್ತಿ ಬೇರಾರು ಅಲ್ಲ ತನ್ನ ತಂದೆಯೇ (ಗಿರೀಶ್ ಕಾರ್ನಾಡ್) ಎಂಬುದು ಗೊತ್ತಾಗುತ್ತದೆ.

    ಅಲ್ಲಿಂದ ಕಥೆ ನಾನಾ ಮಗ್ಗುಲುಗಳನ್ನು ಬದಲಾಯಿಸುತ್ತಾ ಹಂತಹಂತಕ್ಕೂ ರೋಚಕವಾಗಿ ಸಾಗುತ್ತದೆ. ಪ್ರೇಕ್ಷಕರು ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ನಿರೀಕ್ಷಿಸುವಂತಾಗುತ್ತದೆ. ನರಸಿಂಹನ ಆಟಕ್ಕೆ ಶಿವರಾಜ್ ಹೇಗೆ 'ರುದ್ರತಾಂಡವ'ನಾಗುತ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.

    ಇನ್ನು ರಾಧಿಕಾ ಕುಮಾರಸ್ವಾಮಿ ಅವರು ಮಿಡ್ಲ್ ಸ್ಕೂಲ್ ಟೀಚರ್ ಜಾನ್ವಿಯಾಗಿ ತಮ್ಮ ಆಕರ್ಷಕ ಮೈಮಾಟದಿಂದ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತದೆ. ಚಿತ್ರದ ಕಥೆ ಆಕ್ಷನ್ ಅಂಶಗಳಿಂದ ಕೂಡಿದ್ದರೂ ರಾಧಿಕಾ ಅವರ ಕಥೆಗೆ ಹೊದ ಗ್ಲಾಮರ್ ಟಚ್ ತಂದುಕೊಟ್ಟಿದೆ. ಬಹುಶಃ ಅವರ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗುತ್ತಿತ್ತು.

    ಮಗನನ್ನು ಕಳೆದುಕೊಂಡು ಅತ್ತ ಡಾನ್ ನನ್ನು ಎದುರಿಸಲಾಗದೆ, ಇತ್ತ ನೋವನ್ನು ಅನುಭವಿಸಲಾಗದ ಹತಾಶ ತಂದೆಯಾಗಿ ಗಿರೀಶ್ ಕಾರ್ನಾಡ್ ಅವರು ಪಾತ್ರದಲ್ಲಿ ಲೀನವಾಗಿರುವುದನ್ನು ಕಾಣಬಹುದು. ಕುಮಾರ್ ಗೋವಿಂದ್ ಅವರು ಚಿರುಗೆ ಅಣ್ಣನಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

    ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಾ ತಮ್ಮ ಎಂದಿನ ಅಬ್ಬರ, ದರ್ಪದ ನರಸಿಂಹನ ಪಾತ್ರದಲ್ಲಿ ರವಿಶಂಕರ್ ಡಾನ್ ಆಗಿ ಮಿಂಚಿದ್ದಾರೆ. ನರಸಿಂಹನ ತಮ್ಮನಾಗಿ ವಸಿಷ್ಠ ಸಿಂಹ ಅವರದು ಸಹ ಅಷ್ಟೇ ದರ್ಪದ, ದೌಲತ್ತಿನ ಪಾತ್ರ. ಚಿತ್ರದಲ್ಲಿ ಸಾಕಷ್ಟು ಹಾಸ್ಯ ಕಲಾವಿದರಿದ್ದರೂ ನಕ್ಕು ನಲಿಸುವುದು ಮಾತ್ರ ಚಿಕ್ಕಣ್ಣ.

    ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಅಂತಹ ವಿಶೇಷವೇನು ಇಲ್ಲ. ಮೂಲ ಚಿತ್ರದ ಟ್ಯೂನ್ ಗಳನ್ನೇ ಬಳಸಿಕೊಳ್ಳಲಾಗಿದೆ. ಹಿನ್ನೆಲೆ ಸಂಗೀತ ಮಾತ್ರ ಭರ್ಜರಿಯಾಗಿ ಮೂಡಿಬಂದಿದೆ. ಜಗದೀಶ್ ವಾಲಿ ಅವರ ಛಾಯಾಗ್ರಹಣ, ಕೆಎಂ ಪ್ರಕಾಶ್ ಅವರ ಸಂಕಲನ ಚುರುಕಾಗಿದೆ.

    ಚಿರಂಜೀವಿ ಸರ್ಜಾ ಅವರ ಗಮನಾರ್ಹ ಅಭಿನಯ, ರಾಧಿಕಾ ಕುಮಾರಸ್ವಾಮಿ ಅವರ ಸೊಗಸಾದ ಅಭಿನಯ, ತಾಳತಪ್ಪದ ಅವರ ಗ್ಲಾಮರ್, ತಾಂತ್ರಿಕವಾಗಿ ಚಿತ್ರ ನೀಟಾಗಿದ್ದು, ಕಾಮಿಡಿ, ಆಕ್ಷನ್, ರೊಮ್ಯಾಂಟಿಕ್ ಅಂಶಗಳ ಫುಲ್ ಮೀಲ್ಸ್ 'ರುದ್ರತಾಂಡವ'.
    **Note:Hey! Would you like to share the story of the movie ರುದ್ರತಾಂಡವ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X