twitter
    For Quick Alerts
    ALLOW NOTIFICATIONS  
    For Daily Alerts

    ಗಜಲ್ ಕಿಂಗ್ ಜಗಜೀತ್ ಸಿಂಗ್ ನಿಧನ

    By Mahesh
    |

    Jagjit Singh
    ಹೆಸರಾಂತ ಗಜಲ್ ಗಾಯಕ ಜಗಜೀತ್ ಸಿಂಗ್ ಅವರು ಸೋಮವಾರ(ಅ.10) ಮುಂಜಾನೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಸೆ.23 ರಿಂದ ಅವನ್ನು ಐಸಿಯುನಲ್ಲಿರಿಸಲಾಗಿತ್ತು. ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಅವರಿಗೆ 70 ವರ್ಷ ವಯಸ್ಸಾಗಿತ್ತು. ಪತ್ನಿ ಚಿತ್ರಾ ಸಿಂಗ್ ಹಾಗೂ ಅಪಾರ ಅಭಿಮಾನಿ ವರ್ಗವನ್ನು ಜಗಜೀತ್ ಸಿಂಗ್ ಅಗಲಿದ್ದಾರೆ.

    ಗಜಲ್ ಕಿಂಗ್ : ಫೆ.8, 1941ರಲ್ಲಿ ಜನಿಸಿದ ಜಗಜೀತ್ ಸಿಂಗ್ ಅವರು ಹಿಂದಿ, ಉರ್ದು, ಪಂಜಾಬಿ ಹಾಗೂ ನೇಪಾಳಿ ಭಾಷೆಯಲ್ಲಿ ಹಾಡುತ್ತಿದ್ದರು. ಪಾಕಿಸ್ತಾನಿ ಗಾಯಕರಿಂದ ತುಂಬಿದ್ದ ಗಜಲ್ ಲೋಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದವರು ಜಗಜೀತ್ ಸಿಂಗ್.

    ಗಜಲ್ ಗಾಯನದ ಜೊತೆಗೆ ಹಿಂದಿ ಸಿನಿಮಾಗಳಿಗೂ ಹಿನ್ನೆಲೆ ಗಾಯಕರಾಗಿದ್ದರು. ಪ್ರೇಮ್ ಗೀರ್, ಸಾಥ್ ಸಾಥ್, ಅರ್ಥ್, ತುಮ್ ಬಿನ್ , ಸರ್ಫರೋಷ್ ಸೇರಿದಂತೆ ಹಲವು ಚಿತ್ರಗಳಲ್ಲಿ ಹಾಡಿದ್ದರು.

    ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಜಗಜೀತ್ ಅವರು 'ಕಾಗಜ್ ಕಿ ಕಷ್ತಿ', 'ಚಾಕ್ ಜಿಗರ್ ಕೆ' ಕಲ್ ಚೌಧ್ವಿಕಿ ರಾತ್ ಹೆ ಹಾಗೂ 'ಶಾಮ್ ಸೆ ಆಂಕ್ ಮೆ ನಾಮ್ ಸಿ ಹೆ', 'ತುಮ್ ಕೊ ದೇಖಾ ತೋ ಹೇ ಖಯಾಲ್ ಆಯಾ' ಮುಂತಾದ ಹಾಡುಗಳಿಗೆ ದನಿ ನೀಡಿದ್ದರು.

    ಗಾಲಿಬ್, ಖಾತೀಲ್ ಶಿಫೈ, ಫಿರಾಖ್ ಗೋರಖ್ ಪುರಿ, ನಿದಾ ಫಜಿಲ್ ಹಾಗೂ ಸುದರ್ಶನ್ ಫಾಕೀರ್ ಅವರ ಶಾಯರಿಗಳನ್ನು ಬಳಸಿಕೊಂಡು ಗಜಲ್ ಪ್ರಸುತಪಡಿಸುತ್ತಿದ್ದ ಪರಿ ಅವಿಸ್ಮರಣೀಯ.

    ಮ್ಯೂಸಿಕ್ ಆಲ್ಬಂಗಳು: ಫೇಸ್ ಟು ಫೇಸ್, ಮಾರಾಸಿಮ್, ಆಯಿನಾ, ದಿಲ್ ಕಹೀ ಹೋಶ್ ಕಹೀ ಅಲ್ಲದೆ ಅಟಲ್ ಬಿಹಾರಿ ವಾಜಪೇಯಿ ಅವರ ಕವನಗಳನ್ನು ನಯಿ ದಿಶಾ ಮತ್ತು ಸಂವೇದನ ಅಲ್ಬಮ್ ಗಳಲ್ಲಿ ಬಳಸಿಕೊಂಡಿದ್ದರು.

    English summary
    Famous Ghazal singer Jagjit Singh has passed away. He breathed his last at the Lilavati hospital on Monday morning. He was hospitalised after he suffered from a deadly brain haemorrage. He was aged 70.
    Monday, October 10, 2011, 11:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X