ಏ.16ರಿಂದ ಕೇಳಿ ಆನಂದಿಸಿ ಕಠಾರಿವೀರ ಹಾಡುಗಳು

Posted by:

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಗೊಲ್ಡನ್ ಗರ್ಲ್ ರಮ್ಯಾ ಅಭಿನಯದ ಕಠಾರಿವೀರ ಸುರ ಸುಂದರಾಂಗಿ ಚಿತ್ರದ ಆಡಿಯೋ ಏ.16ಕ್ಕೆ ಮಾರುಕಟ್ಟೆ ಪ್ರವೇಶಿಸಲಿದೆ. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ.

ವಿ ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಚಿತ್ರದ ಬಗ್ಗೆ ಸಹಜವಾಗಿಯೇ ಕುತೂಹಲವಿದೆ. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ನಿರ್ಮಿಸಿರುವ ಈ ಚಿತ್ರಕ್ಕೆ ಸುರೇಶ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ.

ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ದೂರಿ ಸೆಟ್ ಹಾಕಿ ವಿಶೇಷವಾಗಿ ಚಿತ್ರವನ್ನು ತೆರೆಗೆ ತಂದಿದ್ದಾರೆ. ಒಂದೇ ಹಾಡಿನ ಚಿತ್ರೀಕರಣ ಬಾಕಿ ಉಳಿದಿದ್ದು ಜೋರ್ಡಾನ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ.

ಬಾಕಿ ಉಳಿದಿರುವ ಹಾಡಿನ ಚಿತ್ರೀಕರಣದಲ್ಲಿ ಉಪೇಂದ್ರ ಹಾಗೂ ಬಾಲಿವುಡ್ ತಾರೆ ನೈನಾ ಖೇರ್ ಪಾಲ್ಗೊಂಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಇನ್ನು ಕಠಾರಿವೀರ ಚಿತ್ರ ಏ.27ರಂದು ತೆರೆ ಕಾಣಲಿದೆ. (ಒನ್‌ಇಂಡಿಯಾ ಕನ್ನಡ)

Read more about: ಉಪೇಂದ್ರ, ರಮ್ಯಾ, ವಿ ಹರಿಕೃಷ್ಣ, ಸಂಗೀತ, ಮುನಿರತ್ನ, ಆಡಿಯೋ, upendra, ramya, v harikrishna, audio

English summary
Real Star Upendra and Golden girl Ramya lead Kannada movie Kataari Veera Sura Sundaraangi audio will be release on 16th April at Chowdaiah Memorial Hall, Bangalore. The movie planning to release on 27th April.
Please Wait while comments are loading...

Kannada Photos

Go to : More Photos