»   » 'ಅಭಿಮನ್ಯು'ವಿಗೆ ಬೆನ್ನುತಟ್ಟಿದ ನಡೆದಾಡುವ ದೇವರು

'ಅಭಿಮನ್ಯು'ವಿಗೆ ಬೆನ್ನುತಟ್ಟಿದ ನಡೆದಾಡುವ ದೇವರು

Posted by:
Subscribe to Filmibeat Kannada

ಕನ್ನಡದ 'ಅಟ್ಟಹಾಸ' ಚಿತ್ರದಲ್ಲಿ ಡಿಜಿಪಿ ವಿಜಯ್ ಕುಮಾರ್ ಪಾತ್ರ ಪೋಷಿಸಿದ್ದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹೊಸ ಇನ್ನಿಂಗ್ಸ್ ಗೆ ರೆಡಿಯಾಗಿದ್ದಾರೆ. ಅದಕ್ಕೂ ಮುನ್ನ ಬಂದಂತಹ 'ಪ್ರಸಾದ್' ಚಿತ್ರ ಸಾಮಾನ್ಯ ಪ್ರೇಕ್ಷಕನಿಗೆ ತಲುಪದಿದ್ದರೂ ಉತ್ತಮ ವಿಮರ್ಶೆಗಂತೂ ಪಾತ್ರವಾಯಿತು.

ಇದೀಗ ಅವರು ಕನ್ನಡ, ತೆಲುಗು ಮತ್ತು ತಮಿಳು ತ್ರಿಭಾಷಾ 'ಅಭಿಮನ್ಯು' ಚಿತ್ರದ ಮೂಲಕ, ವಿಭಿನ್ನ ಕಥಾವಸ್ತುವನ್ನಿಟ್ಟುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅರ್ಜುಜ್ ಸರ್ಜಾ ಚಿತ್ರ ಎಂದರೆ ಏನೋ ವಿಶೇಷ, ಇನ್ನೇನೋ ಕುತೂಹಲ ಇದ್ದೇ ಇರುತ್ತದೆ. [ಜೀ ಕನ್ನಡ ಟಿವಿ ಶೋನಲ್ಲಿ ಕಣ್ಣೀರಿಟ್ಟ ಅರ್ಜುನ್ ಸರ್ಜಾ]

ಅಕ್ಟೋಬರ್ 21ರ ಮಂಗಳವಾರ ತುಮಕೂರಿನಲ್ಲಿ 'ಅಭಿಮನ್ಯು' ಚಿತ್ರದ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ನಡೆದಾಡುವ ದೇವರು ಎಂದೇ ಹೆಸರಾಗಿರುವ ಸಿದ್ದಗಂಗಾ ಮಠಾಧೀಶರಾದ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳು ಆಡಿಯೋ ಬಿಡುಗಡೆ ಮಾಡಿದರು.

ನನ್ನ ಪಾಲಿಗೆ ಸಂಭ್ರಮದ ದಿನ: ಅರ್ಜುನ್ ಸರ್ಜಾ

ನನ್ನ ಪಾಲಿಗೆ ಸಂಭ್ರಮದ ದಿನ: ಅರ್ಜುನ್ ಸರ್ಜಾ

ಅರ್ಜುನ್ ಸರ್ಜಾ ಮಾತನಾಡುತ್ತಾ, "ಶ್ರೀಗಳ ಸನ್ನಿಧಿಯಲ್ಲಿ ಆಡಿಯೋ ಬಿಡುಗಡೆ ಮಾಡುತ್ತಿರುವುದು ನನ್ನ ಪಾಲಿಗೆ ಸಂಭ್ರಮದ ದಿನ. ತ್ರಿವಿಧ ದಾಸೋಹಗಳ ಪುಣ್ಯಕ್ಷೇತ್ರದಲ್ಲಿ ಆಡಿಯೋ ಬಿಡುಗಡೆ ಮಾಡಿದ್ದು ಮಹಾ ಭಾಗ್ಯ" ಎಂದರು.

ಶಿಕ್ಷಣದ ಕಥಾಹಂದರದ ಚಿತ್ರ

ಶಿಕ್ಷಣದ ಕಥಾಹಂದರದ ಚಿತ್ರ

ಆಡಿಯೋ ಬಿಡುಗಡೆ ಎಂದರೆ ಸಾಮಾನ್ಯವಾಗಿ ಯಾವುದೋ ಒಂದು ಪಂಚತಾರಾ ಹೋಟೆಲ್ ನಲ್ಲಿ ನಡೆದುಹೋಗುತ್ತದೆ. ಆದರೆ ಅರ್ಜುನ್ ಸರ್ಜಾ ಅವರು ಶಿಕ್ಷಣದ ಕಥಾ ಎಳೆಯನ್ನು ಹೊಂದಿರುವ ಅಭಿಮನ್ಯು ಚಿತ್ರದ ಆಡಿಯೋಗೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ, ಮಾಡುತ್ತಿರುವ ಸಿದ್ದಗಂಗಾ ಕ್ಷೇತ್ರ.

ಸುಮಾರು ರು.20 ಕೋಟಿ ಬಜೆಟ್ ಚಿತ್ರ

ಸುಮಾರು ರು.20 ಕೋಟಿ ಬಜೆಟ್ ಚಿತ್ರ

ಇನ್ನೊಂದು ವಿಶೇಷ ಎಂದರೆ ಅರ್ಜುನ್ ಸರ್ಜಾ ಅವರ ತವರು ಜಿಲ್ಲೆ ತುಮಕೂರು ಎಂಬುದು. ಅವರ ತಂದೆ ಶಕ್ತಿ ಪ್ರಸಾದ್ ಅವರು ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯವರು. ಇವೆಲ್ಲಾ ಕಾರಣಗಳಿಗಾಗಿ ಸರ್ಜಾ ಅವರ ಸಂಭ್ರಮ ಇಮ್ಮಡಿಸಿದ್ದವು. ಸುಮಾರು ರು.20 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.

ನವೆಂಬರ್ 7 ರಂದು ರಾಜ್ಯದಾದ್ಯಂತೆ ಬಿಡುಗಡೆ

ನವೆಂಬರ್ 7 ರಂದು ರಾಜ್ಯದಾದ್ಯಂತೆ ಬಿಡುಗಡೆ

ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಅಭಿಮನ್ಯು ಚಿತ್ರ ನವೆಂಬರ್ 7 ರಂದು ರಾಜ್ಯದಾದ್ಯಂತೆ ಬಿಡುಗಡೆಯಾಗುತ್ತಿದೆ. ಮಕ್ಕಳಿಂದ ಮಕ್ಕಳಿಗಾಗಿ ಅಭಿಮನ್ಯು ಹೋರಾಡಲಿದ್ದಾರೆ. ಇದೇ ಸಂದರ್ಭದಲ್ಲಿ ನಟರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಅವರು ಪಂಚಿಂಗ್ ಡೈಲಾಗ್ ಗಳ ಮೂಲಕ ಎಲ್ಲರನ್ನೂ ರಂಜಿಸಿದರು.

'ಅಭಿಮನ್ಯು'ಗೆ ತಾಯಿಯ ಆಶೀರ್ವಾದ

'ಅಭಿಮನ್ಯು'ಗೆ ತಾಯಿಯ ಆಶೀರ್ವಾದ

ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ದೇವಮ್ಮ, ಧ್ರುವ ಸರ್ಜಾ ಅವರ ತಾಯಿ ಚಿಕ್ಕರಾಜಮಂಡಿ, ಅಭಿಮನ್ಯು ಚಿತ್ರದ ನಾಯಕಿ ಸಿಮ್ರಾನ್ ಕಪೂರ್, ಬಹದ್ದೂರ್ ಚಿತ್ರದ ನಿರ್ದೇಶಕ ಚೇತನ್ ಕುಮಾರ್, ನಿರ್ದೇಶಕ ಸಂತೂ ಉಪಸ್ಥಿತರಿದ್ದರು.

English summary
Sree Siddaganga Mutt seer Sri Sri Sri Dr Shivakumara Swamiji released the songs of the Kannada film 'Abhimanyu' on 21st October at Tumkur. Along with acting Action King Arjun Sarja produced and directed the movie. The songs composed by Arjun Janya.
Please Wait while comments are loading...

Kannada Photos

Go to : More Photos