»   » ಉಪೇಂದ್ರ ಅಭಿನಯದ ’ಬ್ರಹ್ಮ’ಧ್ವನಿಸುರುಳಿ ವಿಮರ್ಶೆ

ಉಪೇಂದ್ರ ಅಭಿನಯದ ’ಬ್ರಹ್ಮ’ಧ್ವನಿಸುರುಳಿ ವಿಮರ್ಶೆ

Written by: ಬಾಲರಾಜ್ ತಂತ್ರಿ
Subscribe to Filmibeat Kannada

Rating:
4.0/5
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಚಿತ್ರವೆಂದರೆ ಸಿನಿರಸಿಕರಿಗೆ ಕುತೂಹಲ ಸಹಜ. ಜೊತೆಗೆ ಹಿಟ್ ಚಿತ್ರಗಳನ್ನೇ ನೀಡುತ್ತಿರುವ ಆರ್ ಚಂದ್ರು ನಿರ್ದೇಶನದ ಚಿತ್ರವೆಂದರೆ ಕೇಳಬೇಕೇ?

'The Leader' ಎನ್ನುವ ಅಡಿಬರಹದಲ್ಲಿ ಮೂಡಿ ಬರುತ್ತಿರುವ ಬ್ರಹ್ಮ ಚಿತ್ರದ ಮೇಕಿಂಗ್ ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ಎಲ್ಲಾ ಅಂದು ಕೊಂಡಂತೆ ನಡೆದರೆ ಬರುವ ತಿಂಗಳು ಅಂದರೆ ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. (ಟ್ರೇಲರ್ ನಲ್ಲಿ 'ಬ್ರಹ್ಮ' ರಿಯಲ್ ಸ್ಟಾರ್ ಉಪ್ಪಿ ಸೂಪರ್)

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬ್ರಹ್ಮ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಯಿತು, ಜೊತೆಗೆ ಗುರುಕಿರಣ್ ನೈಟ್ಸ್ ಕಾರ್ಯಕ್ರಮ ಕೂಡಾ ಕಲರ್ ಫುಲ್ ಆಗಿ ನಡೆದಿತ್ತು.

ಹರಿಕೃಷ್ಣ ಮತ್ತು ಅರ್ಜುನ ಜನ್ಯಾ ಅಬ್ಬರದ ನಡುವೆ, ಗುರುಕಿರಣ್ ಸಂಗೀತ ನೀಡಿರುವ ಬ್ರಹ್ಮ ಚಿತ್ರದ ಆಡಿಯೋ ಹೇಗಿದೆ? ನಮ್ಮ ವಿಮರ್ಶೆ ಸ್ಲೈಡಿನಲ್ಲಿ...

ಮೊದಲು ಚಿತ್ರದ ಇತರ ಮಾಹಿತಿ ನೋಡೋಣ
  

ಮೊದಲು ಚಿತ್ರದ ಇತರ ಮಾಹಿತಿ ನೋಡೋಣ

ಬ್ಯಾನರ್: ಮೈಲಾರಿ ಎಂಟರ್ಪ್ರೈಸಸ್
ನಿರ್ಮಾಪಕರು: ಪಿ ಬಿ ಮಂಜುನಾಥ್, ಬಾಬು
ನಿರ್ದೇಶನ: ಆರ್ ಚಂದ್ರು
ಸಂಗೀತ: ಗುರುಕಿರಣ್
ತಾರಾಗಣದಲ್ಲಿ : ಉಪೇಂದ್ರ, ಪ್ರಣೀತಾ, ರಂಗಾಯಣ ರಘು, ಸೋನು ಸೂದ್, ಸಾಧು ಕೋಕಿಲ, ನಾಸರ್, ಸಯ್ಯಾಜಿ ಶಿಂಧೆ, ರಾಹುಲ್ ದೇವ್, ಗಿರೀಶ್ ಕಾರ್ನಾಡ್, ಸುಮಿತ್ರ, ಬುಲೆಟ್ ಪ್ರಕಾಶ್, ಸುಚೇಂದ್ರ ಪ್ರಸಾದ್
ಸಿನಿಮಟೋಗ್ರಾಫಿ: ಶೇಖರ್ ಚಂದ್ರ
ಎಡಿಟರ್: ಕೆ ಎಂ ಪ್ರಕಾಶ್

 

 

ಆಲ್ಬಮಿನ ಮೊದಲ ಹಾಡು
  

ಆಲ್ಬಮಿನ ಮೊದಲ ಹಾಡು

ಹಾಡು: ಪೆಸಲ್ಲಾಗಿ ಆರ್ಡರ ಕೊಟ್ಟೆ
ಸಾಹಿತ್ಯ: ಗುರುಕಿರಣ್
ಹಾಡಿರುವವರು : ಗುರುಕಿರಣ್

ಫಾಸ್ಟ್ ಪಿಚ್ ನಲ್ಲಿ ಸಾಗುವ ಟಪಂಗೋಚಿ ಹಾಡು. ನಾಯಕನ್ನು ಉತ್ಪ್ರೇಕ್ಷಿಸುವ ಹಾಡು ಇದಾಗಿದ್ದು ಹಾಡಿನ ಸಾಹಿತ್ಯ ವಿಭಿನ್ನವಾಗಿದೆ. 'ಬಾಲಿವುಡ್ ಹಿರೋಯಿನ್ ಗಳು ಬ್ಯೂಟಿಯಲ್ಲಿ ಫಸ್ಟ್ ಅಂತೆ, ನಿನ್ನ ಮುಂದರೆ ನಿಂತರವರು ಜ್ಯೂನಿಯರ್ ಆರ್ಟಿಸ್ಟ್' ಹೀಗೆ ಸಾಗುವ ಹಾಡಿನ ಸಾಹಿತ್ಯ ಮತ್ತು ಹಾಡು ಸೂಪರ್ ಹಿಟ್ ಆಗುವುದರಲ್ಲಿ ಡೌಟೇ ಬೇಡ.

 

ಆಲ್ಬಮಿನ ಎರಡನೇ ಹಾಡು ಸೂಪರ್
  

ಆಲ್ಬಮಿನ ಎರಡನೇ ಹಾಡು ಸೂಪರ್

ಹಾಡು: ತುಂಟ ತುಂಟ ಹರ್ಟ್
ಸಾಹಿತ್ಯ: ಗುರುಕಿರಣ್
ಹಾಡಿರುವವರು : ಶ್ವೇತಾ

ಆಲ್ಬಮಿನ ಡಿಫರೆಂಟ್ ಪಿಚ್ ನಲ್ಲಿ ಸಾಗುವ ಹಾಡು. ಗುರುಕಿರಣ್ ಸಾಹಿತ್ಯ ಹಾಡಿಗೆ ಪೂರಕವಾಗಿದ್ದು, ಶ್ವೇತಾ ಸಾಹಿತ್ಯಕ್ಕೆ ಚೆನ್ನಾಗಿ ಧ್ವನಿಗೂಡಿಸಿದ್ದಾರೆ. ಹಾಡು ಮೆಲೋಡಿಯಸ್ ಆಗಿ ಮೂಡಿ ಬಂದಿದೆ.

 

ಮೂರನೇ ಹಾಡು ಟಿಪಿಕಲ್ ಉಪೇಂದ್ರ ಚಿತ್ರದ ಹಾಡಿನಂತೆ
  

ಮೂರನೇ ಹಾಡು ಟಿಪಿಕಲ್ ಉಪೇಂದ್ರ ಚಿತ್ರದ ಹಾಡಿನಂತೆ

ಹಾಡು: ಟಿಂಗ್ ಟಿಂಗ್ ಸಮ್ ತಿಂಗ್ ಹ್ಯಾಪನಿಂಗ್
ಸಾಹಿತ್ಯ: ಕವಿರಾಜ್
ಹಾಡಿರುವವರು: ನಕಶ್ ಅಜೀಜ್, ಚೈತ್ರಾ ಎಚ್ ಜಿ

ಆಲ್ಬಮಿನ ಡ್ಯೂಯಟ್ ಹಾಡು. ಹಾಡಿನ ಸಾಹಿತ್ಯ ಟಿಪಿಕಲ್ ಉಪೇಂದ್ರ ಚಿತ್ರದಲ್ಲಿರುವ ಸಾಹಿತ್ಯದಂತೇ ಇದೆ. ಹಾಡಿನ ಪಲ್ಲವಿಗೆ ಗುರುಕಿರಣ್ ಬಳಸಿದ ಟ್ಯೂನ್ ಈ ಹಿಂದೆ ಎಲ್ಲೋ ಗುನುಗಿದಂತಿದೆ. ಮೆಲೋಡಿಯಸ್ ಟ್ರ್ಯಾಕ್ ನಲ್ಲಿ ಸಾಗುವ ಆಲ್ಬಮಿನ ಮತ್ತೊಂದು ಹಾಡು.

 

ಬ್ರಹ್ಮ ಟೈಟಲ್ ಸಾಂಗ್
  

ಬ್ರಹ್ಮ ಟೈಟಲ್ ಸಾಂಗ್

ಹಾಡು: ನಮ್ಮಪ್ಪ, ಎಲ್ಲರಪ್ಪ, ಬ್ರಹ್ಮ

ಸಾಹಿತ್ಯ: ಹೃದಯಶಿವ
ಹಾಡಿರುವವರು: ರಂಜಿತ್

ಚಿತ್ರದ ಟೈಟಲ್ ಸಾಂಗ್. ಇಂಗ್ಲಿಶ್ ಸಾಹಿತ್ಯದೊಂದಿಗೆ ಆರಂಭವಾಗುವ ಹಾಡು ಫಾಸ್ಟ್ ಬೀಟ್ ನಲ್ಲಿ ಸಾಗುತ್ತದೆ. ಹಾಡಿನ ಅನುಪಲ್ಲವಿಯಲ್ಲಿ ಗುರುಕಿರಣ್ ಬಳಸಿಕೊಂಡ ಸಂಗೀತ ಪರಿಕರ ವಿಭಿನ್ನವಾಗಿದೆ.

English summary
Audio review of Real Star Upendra starer Brahma movie. R Chandru has directed this movie and Guru Kiran composed the songs. Album has four songs
Please Wait while comments are loading...

Kannada Photos

Go to : More Photos