twitter
    For Quick Alerts
    ALLOW NOTIFICATIONS  
    For Daily Alerts

    ಗಿನ್ನಿಸ್ ದಾಖಲೆ ಕಡೆಗೆ ಅರ್ಜುನ್ ಜನ್ಯ ತ್ರಿವಿಕ್ರಮ ಹೆಜ್ಜೆ

    By ಜೀವನರಸಿಕ
    |

    ಐದು ವರ್ಷದ ಹಿಂದೆ ಇದೇ ಸಂಗೀತ ನಿರ್ದೇಶಕ ನನ್ನ ಸಂಗೀತ ಚೆನ್ನಾಗಿದೆ, ಆದರೆ ಜನರು ಗುರುತಿಸ್ತಾ ಇಲ್ಲ ಅಂತ ಪತ್ರಕರ್ತರ ಮುಂದೆ ಬಂದು ಕುಳಿತಿದ್ದರು. ತಮ್ಮ ಅಳನನ್ನ ತೋಡಿಕೊಂಡರು. ಆದರೆ ಈಗ ಕಾಲ ಬದಲಾಗಿದೆ. ಅರ್ಜುನ್ ಜನ್ಯ ಸಾಧಿಸಿದ್ದಾರೆ, ಗೆದ್ದಿದ್ದಾರೆ.

    ಈಗ ಅವರ ಅಭಿಮಾನಿಗಳು ಅವರ ಸಂಗೀತವನ್ನ ಮೆಚ್ಚಿದ್ದಾರೆ. ಪತ್ರಕರ್ತರು ಕೂಡ ವರ್ಷದ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅಂದಿದ್ದಾರೆ. ಕನ್ನಡದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯಾಜಿಕ್ ಮಾಡಿದ್ದಾರೆ. ಯಾಕಂದ್ರೆ ಈಗ ಅವರ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದೆ.

    ಸಂಗಿತಕ್ಕೆ ಅಭಿಮಾನಿಗಳು ಸಹಜ ಆದರೆ ಸಂಗಿತಗಾರನಿಗೆ ಅಭಿಮಾನಿಗಳು, ಅಭಿಮಾನಿ ಸಂಘ ಹುಟ್ಟಿರೋದು ವಿಶೇಷ. ಎ ಆರ್ ರೆಹಮಾನ್ ಅವರ ದೊಡ್ಡ ಅಭಿಮಾನಿಯಾಗಿರೋ ಅರ್ಜುನ್ ಜನ್ಯ ಅವರು ರೆಹಮಾನ್ ಹುಟ್ಟುಹಬ್ಬದ ದಿನಕ್ಕಾಗಿ ಕಾದು ತಮ್ಮ ಅಭಿಮಾನಿ ಸಂಘಕ್ಕೆ ಓಪನಿಂಗ್ ಕೊಟ್ಟರು.

    ಮೋಸ್ಟ್ ಬಿಜಿಯೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್

    ಮೋಸ್ಟ್ ಬಿಜಿಯೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್

    ಇನ್ನು ಅರ್ಜುನ್ ಜನ್ಯ ಕನ್ನಡದ ಮೋಸ್ಟ್ ಬಿಜಿಯೆಸ್ಟ್ ಸಂಗೀತ ನಿರ್ದೇಶಕ. ರಾತ್ರಿ ಹಗಲು ಕಂಪೋಸ್ ಮಾಡಿದ್ರೂ ಮುಗಿಯದಷ್ಟು ಸಿನಿಮಾಗಳು ಅರ್ಜುನ್ ಜನ್ಯ ಕೈಯ್ಯಲ್ಲಿವೆ.

    ಅರ್ಜುನ್ 25ನೇ ಚಿತ್ರ ಕೇಸ್ ನಂ 18/9

    ಅರ್ಜುನ್ 25ನೇ ಚಿತ್ರ ಕೇಸ್ ನಂ 18/9

    ಕಳೆದ ವರ್ಷ ತೆರೆಗೆ ಬಂದ 'ಕೇಸ್ ನಂ 18/9' ಚಿತ್ರ ಅರ್ಜುನ್ ಜನ್ಯ ಅವರ 25 ಸಿನಿಮಾ. ಆದರೆ ಅದಾದ 1 ವರ್ಷದಲ್ಲಾಗಲೇ ಮತ್ತೆ 25 ಸಿನಿಮಾಗಳು ಅರ್ಜುನ್ ಜನ್ಯ ಕ್ಕೈಯ್ಯಲ್ಲಿ.

    ಒಂದೇ ವರ್ಷದಲ್ಲಿ 25 ಸಿನಿಮಾಗೆ ಸಂಗೀತ

    ಒಂದೇ ವರ್ಷದಲ್ಲಿ 25 ಸಿನಿಮಾಗೆ ಸಂಗೀತ

    ನಾಲ್ಕು ವರ್ಷಕ್ಕೆ 25 ಸಿನಿಮಾ ಕಾಂಪೋಸ್ ಮಾಡಿದ ಅರ್ಜುನ್ ಜನ್ಯ ಒಂದೇ ವರ್ಷದಲ್ಲಿ 25 ಸಿನಿಮಾಗೆ ಸಂಗೀತ ನೀಡ್ತಿದ್ದಾರೆ. ವಿ ಮನೋಹರ್ ಹಾಗೂ ಕೆ ಕಲ್ಯಾಣ್ ಅವರ ಬಳಿಕ ಸಹಾಯಕರಾಗಿ ವೃತ್ತಿಜೀವನ ಆರಂಭಿಸಿದ ಅರ್ಜುನ್ ಈಗ ಬಲು ಎತ್ತರಕ್ಕೆ ಏರಿದ ಸಂಗೀತ ನಿರ್ದೇಶಕ.

    ಯಾರೂ ಮಾಡದ ಸಾಧನೆ ಅರ್ಜುನ್ ರದ್ದು

    ಯಾರೂ ಮಾಡದ ಸಾಧನೆ ಅರ್ಜುನ್ ರದ್ದು

    ಹಾಗೆ ನೋಡಿದ್ರೆ ವಿಶ್ವದ ಬೇರ್ಯಾವ ಭಾಷೆಯಲ್ಲೂ ಒಬ್ಬ ಸಂಗೀತ ನಿರ್ದೇಶಕ ವರ್ಷಕ್ಕೆ 25 ಸಿನಿಮಾಗಳಿಗೆ ಸಂಗೀತ ನೀಡೋದು ಡೌಟು. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ಮೊದಲ ಚಿತ್ರ 'ಆಟೋಗ್ರಾಫ್ ಪ್ಲೀಸ್' (2006).

    ಲಕ್ಕು ಬದಲಾಯಿಸಿದ ಚಿತ್ರ ಕೆಂಪೇಗೌಡ

    ಲಕ್ಕು ಬದಲಾಯಿಸಿದ ಚಿತ್ರ ಕೆಂಪೇಗೌಡ

    ಅರ್ಜುನ್ ಜನ್ಯ ಹಾಗೊಂದು ಗಿನ್ನಿಸ್ ದಾಖಲೆಗೆ ಪ್ರಯತ್ನಿಸಬಹುದು ಅನ್ನೋದು ಚಿತ್ರ ಚಿಂತಕರ ಚಾವಡಿಯಲ್ಲಿ ಕೇಳಿಬಂದ ಮಾತು. ಕೆಂಪೇಗೌಡ ಚಿತ್ರದ ಮೂಲಕ ಅರ್ಜುನ್ ಲಕ್ ಬದಲಾಯಿತು. ಅರ್ಜುನ್ ಎಂದಿದ್ದ ಅವರ ಹೆಸರಿನಲ್ಲಿ ಜನ್ಯಾ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದೂ ಸುದೀಪ್ ಎಂಬುದು ವಿಶೇಷ.

    English summary
    Who is the most busiest music composer in Kannada? The answer is very simple he is none other than the youngest music director Arjun Janya. This year he is composing 25 movies and to attempt for Guinness World Records.
    Wednesday, January 8, 2014, 11:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X