twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಅಭಿನಯದ ’ಅಂಬರೀಶ’ ಆಡಿಯೋ ವಿಮರ್ಶೆ

    By ಪ್ರಶಾಂತ್ ಇಗ್ನೇಷಿಯಸ್
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರವೆಂದರೆ ಅವರ ಅಭಿಮಾನಿಗಳಿಗೆ ಪಾಲಿಗೆ ಅದೇ ಹಬ್ಬ. ಇನ್ನೂ ಕನ್ನಡ ಚಿತ್ರರಂಗದಲ್ಲಿ 'ಅಂಬರೀಶ' ಎಂಬ ಪದಕ್ಕೆ ತನ್ನದೇ ಆದ ವಿಶೇಷತೆ, ಆತ್ಮೀಯತೆಯಿದೆ. ಮಾಸ್ ಹಿಟ್ ಗಳನ್ನು ನೀಡುತ್ತಾ ಬಾಕ್ಸ್ ಆಫೀಸಿನ ಡಾರ್ಲಿಂಗ್ ಆಗಿರುವ ದರ್ಶನ್, ಮಹೇಶ್ ಸುಖಧರೆ ನಿರ್ದೇಶನದ ಅಂಬರೀಶ ಚಿತ್ರದ ಮೂಲಕ ತಮ್ಮ ಅಭಿಮಾನಿಗಳ ಬಳಿಗೆ ಬರುತ್ತಿದ್ದಾರೆ.

    ದರ್ಶನ್ ಹಾಗೂ ಅಂಬಿ ಇಬ್ಬರ ಅಭಿಮಾನಿಗಳೂ ಕಾತರದಿಂದ ಕಾಯುತ್ತಿರುವ ಚಿತ್ರದ ಧ್ವನಿಸುರುಳಿ ಇತ್ತೀಚೆಗೆ ಬಿಡುಗಡೆ ಆಗಿದ್ದು, ಯಶಸ್ಸನ್ನೂ ಕಂಡಿದೆ. ಚಿತ್ರದ ಎಲ್ಲಾ ಹಾಡುಗಳನ್ನು ಬರೆದವರು ಡಾ. ನಾಗೇಂದ್ರ ಪ್ರಸಾದ್. ವಿ ಹರಿಕೃಷ್ಣ ಸಂಗೀತ ನೀಡಿರುವ ಚಿತ್ರದ ಹಾಡುಗಳು ಹೇಗಿದೆ? ಮುಂದೆ ಓದಿ.

    Rating:
    4.0/5

    ವಾಲೆಕುಂ
    ಗಾಯಕರು: ಹೇಮಂತ್
    ಚಿತ್ರದಲ್ಲಿ ನಾಯಕ ಶ್ರಮಜೀವಿ ಆಗಿದ್ದರೆ ಇಂಥ ಹಾಡು ಕಟ್ಟಿಟ್ಟ ಬುತ್ತಿ. ಸಾರಥಿ ಚಿತ್ರದ 'ಅತಿರಥ ಮಹಾರಥ' ಹಾಡನ್ನು ನೆನಪಿಸುವಂಥ ಗುಣ ಈ ಹಾಡಿನ ಸಾಹಿತ್ಯ, ಸಂಗೀತದಲ್ಲಿ ಬೆರೆತು ಹೋಗಿದೆ. ನಾಗೆಂದ್ರ ಪ್ರಸಾದ್ ರ ಸಾಹಿತ್ಯ, ಸಂಗೀತಕ್ಕೆ ಪೂರಕವಾಗಿದ್ದು, ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ರಸದೌತಣ ನೀಡಬಹುದು. ಹೇಮಂತ್ ಗಾಯನದಲ್ಲೂ ಲವಲವಿಕೆಯಿದೆ.

    ’ಕಣ್ಣಲ್ಲೇ ’ ಆಲ್ಬಂನ ಎರಡನೇ ಹಾಡು

    ’ಕಣ್ಣಲ್ಲೇ ’ ಆಲ್ಬಂನ ಎರಡನೇ ಹಾಡು

    ಗಾಯಕರು: ಶ್ರೇಯಾ ಘೋಷಾಲ್ ಹಾಗೂ ಸೋನು ನಿಗಮ್

    ಹರಿಕೃಷ್ಣ ಸಂಗೀತದ ಆಲ್ಬಂಗಳಲ್ಲಿ ಈ ರೀತಿಯ ಹಾಡಿಲ್ಲದಿದ್ದರೆ ಆಲ್ಬಂ ಪೂರ್ಣವಾಗುವುದಿಲ್ಲವೇನೋ ಎಂಬಂತೆ, ನಿರೀಕ್ಷೆಯಂತೆ ಎದುರಾಗುವ ಡ್ಯೂಯಟ್ ಗೀತೆ. ಶ್ರೇಯಾ ಹಾಗೂ ಸೋನು ನಿಗಂ ಉತ್ತಮವಾಗಿ ಹಾಡಿದ್ದಾರೆ. ಕ್ಲಾಸ್ ಮಾಸ್ ಎರಡೂ ರೀತಿಯ ಸಾಹಿತ್ಯ ನೀಡಬಲ್ಲ ನಾಗೇಂದ್ರ ಪ್ರಸಾದ್ ತಮ್ಮ ಮೇಲಿನ ನಿರೀಕ್ಷೆಯನ್ನು ಸುಳ್ಳು ಮಾಡುವುದಿಲ್ಲ. ಇಂಪಾದ ಗೀತೆ.

    ’ಗಂಡರ ಗಂಡ’ ಎಂದು ಆರಂಭವಾಗುವ ಹಾಡು

    ’ಗಂಡರ ಗಂಡ’ ಎಂದು ಆರಂಭವಾಗುವ ಹಾಡು

    ಗಾಯಕರು: ಡಾ. ಎಸ್ಪಿ ಬಾಲಸುಬ್ರಮಣ್ಯಂ

    ಬಹಳ ದಿನಗಳ ನಂತರ ಕೇಳಿ ಬರುವ ಎಸ್ಪಿಬಿ ಧ್ವನಿ ಆತ್ಮೀಯವಾಗಿ ತಾಕುತ್ತಲೇ, ಇನ್ನೂ ತನ್ನ ಮಾಂತ್ರಿಕತೆಯನ್ನು ಉಳಿಸಿಕೊಂಡಿದೆ. ನಾಗೇಂದ್ರ ಪ್ರಸಾದರ ತೂಕದ, ಗಾಂಭೀರ್ಯದ ಸಾಹಿತ್ಯಕ್ಕೆ ಎಸ್ಪಿ ಉತ್ತಮವಾಗಿ ಜೀವ ತುಂಬಿದ್ದಾರೆ. ನಾಡ ಪ್ರಭು ಕೆಂಪೇಗೌಡರ ವ್ಯಕ್ತಿತ್ವ, ಸಾಧನೆಯ ಬಗ್ಗೆ ಪರಿಚಯ ಮಾಡಿಕೊಡುತ್ತಾ, ಐತಿಹಾಸಿಕ ಮಾಹಿತಿಗಳನ್ನು ಕಟ್ಟಿ ಕೊಡುತ್ತದೆ ಈ ಗೀತೆ. ತೆರೆಯ ಮೇಲೆ ಹೇಗೆ ಚಿತ್ರಿತವಾಗಿದೆ ಎಂಬ ಸಹಜ ಕುತೂಹಲ ಅಭಿಮಾನಿಗಳದ್ದು.

    ಅಸಕು ಪಸಕು

    ಅಸಕು ಪಸಕು

    ಗಾಯಕರು: ಟಿಪ್ಪು ಹಾಗೂ ಲಕ್ಷ್ಮಿ ವಿಜಯ್

    80ರ ದಶಕದಲ್ಲಿ ಪಡ್ದೆ ಹುಡುಗರಿಗೆ ಕಚಗುಳಿ ಇಟ್ಟ ಚಕ್ರವ್ಯೂಹ ಚಿತ್ರದ ಚಳಿ ಚಳಿ ಹಾಡನ್ನು ಮರೆಯಲು ಸಾಧ್ಯವೇ? ಹಾಡು ಕೇಳಿದೊಡನೆ ಅಂಬರೀಶ್ ನೆನಪಾಗದೇ ಇರಲಾರರು. ಅದೇ ಹಾಡನ್ನು ನೆನಪಿಸುವ ಗೀತೆ. ಆ ಗೀತೆಗೆ ಇದ್ದ ಮಾದಕತೆ ಇಲ್ಲಿ ಇಲ್ಲದಿದ್ದರೂ ತುಂಟತನವನ್ನು ಹೊದ್ದುಕೊಂಡಿರುವ ಗೀತೆ. ಟಿಪ್ಪು ಹಾಗೂ ಲಕ್ಷ್ಮಿ ಯವರ ಧ್ವನಿಯಲ್ಲಿ ಹಾಡಿಗೆ ಬೇಕಾದ ಎಲ್ಲವೂ ಇದೆ. ಸಾಹಿತ್ಯಕ್ಕೂ ಅದೇ ಮಾತನ್ನು ಹೇಳಬಹುದು

    ಪೂಜ್ಯಾಯ ಎಂದು ಆರಂಭವಾಗುವ ಹಾಡು

    ಪೂಜ್ಯಾಯ ಎಂದು ಆರಂಭವಾಗುವ ಹಾಡು

    ಗಾಯಕರು: ಮಧು ಬಾಲಕೃಷ್ಣ

    ಮಧುರ ಭಕ್ತಿಗೀತೆ, ಹಳೆಯ ಭಕ್ತಿ ಗೀತೆಗಳನ್ನು ಕೇಳಿದೊಡನೆ ಇಂದಿಗೂ ಮನ ಅರಳುತ್ತದೆ. ಅದೇ ರೀತಿಯ ಉತ್ತಮವಾದ ಗೀತೆಗೆ, ಉತ್ತಮ ಸಾಹಿತ್ಯ ಒದಗಿ ಬಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಧು ಬಾಲಕೃಷ್ಣರ ಗಾಯನದಲ್ಲಿ ಭಕ್ತಿಗೀತೆಗೆ ಬೇಕಾದ ಸರ್ವ ಗುಣಗಳೂ ಕೂಡಿಬಂದು ನೆನಪಿನಲ್ಲಿ ಉಳಿಯುವಂತಹ ಗೀತೆಗಳ ಸಾಲಿಗೆ ಸೇರಿಕೊಳ್ಳುತ್ತದೆ. ರಾಯರ ಭಕ್ತರಿಗಂತೂ ಹೇಳಿ ಮಾಡಿಸದಂಥ ಗೀತೆ.

    ಖೇಲ್ ಕತಂ ಎನ್ನುವ ಹಾಡು

    ಖೇಲ್ ಕತಂ ಎನ್ನುವ ಹಾಡು

    ಗಾಯಕರು: ದರ್ಶನ್, ನವೀನ್ ಮಾಧವ್, ಸತ್ಯನ್, ಸಂತೋಷ್ ವೆಂಕಿ

    ಎಲ್ಲೋ ಕೇಳಿದಂತೆ ಅನಿಸಿದರೂ ಸೆಳೆಯುವ ಗೀತೆ. ನಾಯಕ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾ ತನ್ನ ಕಾರ್ಯ ಸಾಧನೆಯ ವಿಧಾನವನ್ನು ವಿವರಿಸುವ ಈ ಗೀತೆಯಲ್ಲಿ ಬರುವ ಸಂಭಾಷಣೆಗೆ ದರ್ಶನ್ ತಾವೇ ಧ್ವನಿ ನೀಡಿದ್ದಾರೆ. ಲವಲವಿಕೆಯ ವಾದ್ಯ ಸಂಗೀತಕ್ಕೆ ನವೀನ್ ಮಾಧವ್, ಸತ್ಯನ್, ಸಂತೋಷ್ ವೆಂಕಿಯವರ ಕೋರಸ್ ಭರ್ಜರಿ ಸಾಥ್ ನೀಡಿದೆ. ದರ್ಶನ್ ಸಂಭಾಷಣೆಯ ವೈಖರಿ ಚೆನ್ನಾಗಿದ್ದು, ಪರದೆಯಲ್ಲಿನ ಹಾಡಿನ ಉದ್ದಕ್ಕೂ ಅಭಿಮಾನಿಗಳು ವಿರಾಮವಿಲ್ಲದ ಶಿಳ್ಳೆಗೆ ಅಣಿಯಾಗಬೇಕೇನೋ?

    English summary
    Audio review of Challenging Star Darshan and Rebel Star Ambarish starer 'Ambarisha' movie.
    Tuesday, August 19, 2014, 17:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X