twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಅಭಿನಯದ 'ಐರಾವತ' ಆಡಿಯೋ ವಿಮರ್ಶೆ

    By ಪ್ರಶಾಂತ್ ಇಗ್ನೇಷಿಯಸ್
    |

    ಇಡೀ ಕನ್ನಡ ಚಿತ್ರರಂಗವೇ ಪುಳಕಗೊಳ್ಳುವಂತಹ ಓಪನಿಂಗ್ ಹಾಗೂ ಯಶಸ್ಸನ್ನು ದರ್ಶನ್ ಚಿತ್ರಗಳು ಇತ್ತೀಚಿನ ವರ್ಷಗಳಲ್ಲಿ ಪಡೆದುಕೊಂಡಿವೆ.

    ಮತ್ತೊಮ್ಮೆ ಅಂತಹ ಪುಳಕವನ್ನು ತಮ್ಮ ಅಭಿಮಾನಿಗಳಲ್ಲಿ ಮೂಡಿಸಲು ದರ್ಶನ್ ಮಿ. ಐರಾವತದ ಚಿತ್ರದ ಮೂಲಕ ಬರುತ್ತಿದ್ದಾರೆ. (ಚಿತ್ರದ ಗ್ಯಾಲರಿ)

    ಯಶಸ್ವಿ ನಿರ್ದೇಶಕ ಎಪಿ ಅರ್ಜುನರ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರ ಒಂದಷ್ಟು ತಡವಾಗಿಯೇ ತರೆಗೆ ಬರುತ್ತಿರುವುದು, ಚಿತ್ರದ ಬಗ್ಗೆ ಕುತೂಹಲವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

    ಇತ್ತೀಚೆಗೆ ಬಂದ ಚಿತ್ರದ ಟ್ರೈಲರ್ 'ಲೇಟಾದ್ರೂ ಲೇಟಸ್ಟಾಗಿದೆ' ಎನ್ನುವಂತೆ ಭರ್ಜರಿಯಾಗಿದೆ. ಇನ್ನು ಬಿಡುಗಡೆಗೊಂಡ ಹಾಡುಗಳು ಹೇಗಿವೆ ಎಂದು ನೋಡೋಣ. (ಚಿತ್ರದ ಟ್ರೇಲರ್)

    ವಿ ಹರಿಕೃಷ್ಣರ ಸಂಗೀತ ನೀಡಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ.

    ಮಿ ಐರಾವತ

    ಮಿ ಐರಾವತ

    ಗಾಯಕರು: ರಂಜಿತ್, ಸಂತೋಷ್ ವೆಂಕಿ, ಚಿಂತನ್ ವಿಕಾಸ್, ಶಶಾಂಕ್ ಶೇಷಗಿರಿ
    ಸಾಹಿತ್ಯ: ಎ ಪಿ ಅರ್ಜುನ್

    ಇತ್ತೀಚಿನ ವರ್ಷಗಳಲ್ಲಿ ಚಿತ್ರಗಳಲ್ಲಿನ ಸಂಗೀತದಲ್ಲಿ, ನಾಯಕನ ಹೊಗಳಿಕೆ, ವಿಜೃಂಭಣೆಯ ಗೀತೆ ಇರಲೇಬೇಕು ಎನ್ನುವಷ್ಟು ಅನಿವಾರ್ಯವಾಗಿದೆ. ಎ ಪಿ ಅರ್ಜುನ್ ರ ಸಾಹಿತ್ಯ ಮಾಮೂಲಿನಂತೆ ಇದ್ದು, ಸಂಗೀತವೂ ಎಂದಿನಂತಿದೆ. ನಾಲ್ಕಾರು ಗಾಯಕರು ಒಟ್ಟಾಗಿ ಹಾಡಿರುವ ಗೀತೆಯಲ್ಲಿ ರಭಸವಿದ್ದರೂ ಸಾಧಾರಣ ಗೀತೆಯಾಗಿದೆ.

    ದೇರ್ ವಾಸ್ ಎ ಅಜ್ಜಿ

    ದೇರ್ ವಾಸ್ ಎ ಅಜ್ಜಿ

    ಗಾಯಕರು: ಹೇಮಂತ್
    ಸಾಹಿತ್ಯ: ಯೋಗರಾಜ್ ಭಟ್

    ಯೋಗರಾಜ್ ಭಟ್ ಸಾಹಿತ್ಯದ ಹೇಮಂತ್ ಗಾಯನದ ಗೀತೆ, ಪ್ರಾರಂಭವಾಗುವ ಕ್ಷಣದಿಂದಲೂ ಇಷ್ಟವಾಗುತ್ತದೆ. ಹರಿಕೃಷ್ಣರ ಉತ್ತಮ ಸಂಗೀತ ಹಾಗೂ ವಾದ್ಯ ಸಂಯೋಜನೆಗೆ ಹೇಮಂತರ ಗಾಯನ ಸಕ್ಕತ್ತಾಗಿ ಕೂಡಿಕೊಂಡಿದೆ. "ನಮ್ಮದು ಒಂಥರಾ ತುಸು ಪೋಲಿ ಮಾಹಿತಿಯು" ಎಂಬಂಥ ಸಾಲ್ಲಿದ್ದರೂ ಭಟ್ಟರ ಸಾಹಿತ್ಯದಲ್ಲಿ ಸಿಗುವ ತುಂಟತನ ಇಲ್ಲಿ ಸ್ವಲ್ಪ ಕಮ್ಮಿಯೇ. ಲವಲವಿಕೆಯ ಸಂಗೀತ ಹಾಗೂ ಗಾಯನದಿಂದ ಇಷ್ಟವಾಗುವ ಗೀತೆ.

    ಕ ತಲ್ಲಕಟ್ಟು

    ಕ ತಲ್ಲಕಟ್ಟು

    ಗಾಯಕರು: ಹರಿಕೃಷ್ಣ ಹಾಗೂ ಇಂದು ನಾಗರಾಜ್
    ಸಾಹಿತ್ಯ: ಯೋಗರಾಜ್ ಭಟ್

    ಹರಿಕೃಷ್ಣರ ಗಾಯನ ಹಾಗೂ ಯೋಗರಾಜ್ ಭಟ್ಟರ ಸಂಗೀತ ಎಂದಾಕ್ಷಣ ಅಲ್ಲಿ ತುಂಟತನ ಹಾಗೂ ಏನೋ ವಿಶೇಷತೆ ಶತಸಿದ್ಧ ಎಂಬ ನಿರೀಕ್ಷೆ ಕೇಳುಗರದ್ದು. ಅಂತೆಯೇ ಪ್ರಾರಂಭದ ಕೋರಸ್ಸಿನಲ್ಲೇ ಇದು ನಿಜವಾಗುತ್ತದೆ. ಇವರಿಬ್ಬರನ್ನು ಮೀರಿಸುವ ತುಂಟತನ ಹಾಗೂ ಮಾದಕತೆ ಇಂದು ನಾಗರಾಜರ ಗಾಯನದಲ್ಲಿದೆ. ಗೀತೆಯ ಎಲ್ಲಾ ಅಂಶಗಳೂ ಲವಲವಿಕೆಯಿಂದ ಕೂಡಿದ್ದೂ ಖಂಡಿತವಾಗಿ ಇಷ್ಟವಾಗುವ ಗೀತೆ. ಅಲ್ಲಲ್ಲಿ ಇಂಗ್ಲಿಷ್ ಪದ ಬಳಸಿದ್ದರೂ ಪಕ್ಕಾ ಇದು ಕನ್ನಡ ಮಿಡಿಯಂ ಗೀತೆ ಎನ್ನಬಹುದು.

    ಗುಡಿ ಮೇಲೆ

    ಗುಡಿ ಮೇಲೆ

    ಗಾಯಕರು: ಶಶಾಂಕ್ ಶೇಷಗಿರಿ ಹಾಗೂ ಎಸ್ ಸುನೀತ
    ಸಾಹಿತ್ಯ: ಎ ಪಿ ಅರ್ಜುನ್

    ಕೆಲವೊಂದು ಗೀತೆಗಳನ್ನು ಕೇಳುತ್ತಿದ್ದರೆ ಸಾಹಿತ್ಯ ಮೊದಲಾ ಅಥವಾ ಸಂಗೀತ ಮೊದಲು ರಚನೆಯಾಯಿತೋ ಎನ್ನುವ ಪ್ರಶ್ನೆ ಮೂಡುತ್ತದೆ. ಅಂತಹ ಕುತೂಹಲ ಮೂಡಿಸುವ ಗೀತೆ. ಎ ಪಿ ಅರ್ಜುನ್ ರವರ ಸಾಹಿತ್ಯದ ಗೀತೆ, ಪದಗಳಿಂದ ತುಂಬಿಹೋಗಿದ್ದು ಅದಕ್ಕೆ ತಕ್ಕ ಸಂಗೀತ ಮೂಡಿ ಬಂದಿದೆ. ಶಶಾಂಕ್ ಹಾಗೂ ಸುನೀತ ಅವರ ಗಾಯನ ಚೆನ್ನಾಗಿದ್ದು ಇಡೀ ಗೀತೆಯನ್ನು ಅವರಿಸಿಕೊಳ್ಳುತ್ತದೆ. ಹರಿಕೃಷ್ಣರ ಸಂಗೀತದಲ್ಲಿ ಕುಣಿಸುವ ಗುಣವಿದೆ.

    English summary
    Audio review of Darshan stater Airavatha movie.V Harikrishna has composed the song and A P Arjun has directed this movie.
    Thursday, August 20, 2015, 15:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X