»   » ಶಿವಣ್ಣ ಅಭಿನಯದ ’ಬೆಳ್ಳಿ’ ಧ್ವನಿಸುರುಳಿ ವಿಮರ್ಶೆ

ಶಿವಣ್ಣ ಅಭಿನಯದ ’ಬೆಳ್ಳಿ’ ಧ್ವನಿಸುರುಳಿ ವಿಮರ್ಶೆ

Written by: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

Rating:
3.5/5
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಲಾಂಗ್ ಹಿಡಿದಿದ್ದರೂ ಮುಸ್ಸಂಜೆ ಮಹೇಶ್ ನಿರ್ದೇಶನವಿರುವುದರಿಂದ ವಿಭಿನ್ನವಾಗಿರಬಹುದೇನೋ ಎಂಬ ಭರವಸೆ ಮೂಡಿಸಿರುವ ಚಿತ್ರ 'ಬೆಳ್ಳಿ'.

ಬೆಳ್ಳಿ ಚಿತ್ರ ಶ್ರೀಮಂತ ತಾರಾಗಣದಿಂದಲೂ ಗಮನ ಸೆಳೆದಿದೆ. ವಿ ಶ್ರೀಧರ್ ಯುವ ಮನಸ್ಸುಗಳು ಇಷ್ಟವಾಗುವಂತೆ ಸಂಗೀತ ನೀಡುವುದರಲ್ಲಿ ಎತ್ತಿದ ಕೈ. ಈಗಾಗಲೇ ಬಿಡುಗಡೆಗೊಂಡಿರುವ ಆಡಿಯೋ ಬಗ್ಗೆ ಒಳ್ಳೆ ಮಾತುಗಳು ಕೇಳಿ ಬರುತ್ತಿವೆ. (ಬೆಂಕಿಪಟ್ಣ ಹಾಡುಗಳನ್ನು ಆಡಿಯೋ ತಪ್ಪದೇ ಕೇಳಿ)

ಶಿವಣ್ಣ ಅಭಿಮಾನಿಗಳು ಸಹಜವಾಗಿಯೂ ಇದರಿಂದ ಖುಷಿಯಾಗಿದ್ದಾರೆ. ಶಿವರಾಜ್ ಕುಮಾರ್, ಕೃತಿ ಕರಬಂಧ, ಶ್ರೀನಿವಾಸಮೂರ್ತಿ, ಪದ್ಮಾ ವಾಸಂತಿ, ದೀಪಕ್, ವಿನೋದ್ ಪ್ರಭಾಕರ್ ಪ್ರಮುಖ ಭೂಮಿಕೆಯಲ್ಲಿರುವ ಬೆಳ್ಳಿ ಚಿತ್ರದ ಹಾಡು ಹೇಗಿದೆ? ಮುಂದೆ ಓದಿ..

ಧೂಮ್ ಧಮಾಕ
ಸಾಹಿತ್ಯ : ಡಾ. ನಾಗೇಂದ್ರ ಪ್ರಸಾದ್
ಹಾಡಿರುವವರು : ಶಂಕರ್ ಮಹಾದೇವನ್, ಬೆಂಗಳೂರು ಬಾಯ್ಸ್

ನಾಯಕ ಮತ್ತು ಆತನ ಸಂಗಡಿಗರ ಗುಣಗಾನ ಹಾಗೂ ಪರಿಚಯದ ಗೀತೆ. ಎಂದಿನಂತೆ ಶಂಕರ್ ಮಹಾದೇವನ್ ತಮ್ಮದೇ ಆದ ಏರುದನಿಯ ಶೈಲಿಯಲ್ಲಿ ಹಾಡಿದ್ದಾರೆ. ಸಾಹಿತ್ಯಕ್ಕಿಂತ ವಾದ್ಯ ಸಂಗೀತಕ್ಕೆ, ನೃತ್ಯಕ್ಕೆ ಹೇಳಿ ಮಾಡಿಸಿದಂತಿದೆ ಈ ಗೀತೆ. 'ಸೌಂಡು ಸೌಂಡು ನಮ್ಮದೇ ಸೌಂಡು' ಎನ್ನುವಂತೆ ಶ್ರೀಧರ್ ಭರ್ಜರಿಯಾಗಿ ಸಂಗೀತ ನೀಡಿದ್ದಾರೆ.

ಧೂನ ಧೂನಾ

ಧೂನ ಧೂನಾ
ಸಾಹಿತ್ಯ : ಕವಿರಾಜ್
ಹಾಡಿರುವವರು : ಕಾರ್ತಿಕ್, ಸುಪ್ರಿಯಾ

ವಿಭಿನ್ನವಾಗಿ ಪ್ರಾರಂಭವಾಗುವ ಈ ಗೀತೆ, ಕಾರ್ತಿಕ್ ಮತ್ತು ಸುಪ್ರಿಯಾರವರ ಉತ್ತಮ ಗಾಯನದಿಂದ ಗಮನ ಸೆಳೆಯುತ್ತದೆ. ನಡುನಡುವೆ ತನ್ನತನವನ್ನು ಕಳೆದುಕೊಳ್ಳತ್ತದೆ ಏನೋ ಅನಿಸುತ್ತಿದಂತೆಯೇ, ಧೂನಾಧೂನಾ ಎನ್ನುತ್ತ ಮರಳಿ ತನ್ನ ಲಯ ಕಂಡುಕೊಳ್ಳುತ್ತದೆ. ಕವಿರಾಜ್ ಸಾಹಿತ್ಯ ಪೂರಕವಾಗಿದೆ.

 

ಮಲೆಯ ಮಾದಯ್ಯ

ಮಲೆಯ ಮಾದಯ್ಯ
ಸಾಹಿತ್ಯ : ಡಾ. ನಾಗೇಂದ್ರ ಪ್ರಸಾದ್
ಹಾಡಿರುವವರು : ಫಯಾಜ್ ಖಾನ್, ಬೆಂಗಳೂರು ಬಾಯ್ಸ್

ಜಾನಪದ ಶೈಲಿಯ ಗೀತೆಗೆ ಪಕ್ಕಾ ಗ್ರಾಮೀಣ ಸೊಗಡಿನ ಸಂಗೀತ ನೀಡಿದ್ದಾರೆ ಶ್ರೀಧರ್. ಫಯಾಜ್ ಖಾನ್ ಅವರ ಕಂಠ ಹಾಡಿನ ಎಲ್ಲಾ ಏರುಪೇರುಗಳನ್ನು ಸಂಭಾಳಿಸಿ ಗೆದ್ದಿದೆ. ಪ್ರಾರ್ಥನೆ ಧಾಟಿಯ ಸಾಹಿತ್ಯ ಉತ್ತಮವಾಗಿದೆ.

 

ಬೆಳ್ಳಿ..ಬೆಳ್ಳಿ

ಬೆಳ್ಳಿ..ಬೆಳ್ಳಿ
ಸಾಹಿತ್ಯ: ವಿ ಶ್ರೀಧರ್
ಹಾಡಿರುವವರು : ಸಾಧನ ಸರ್ಗಮ್

ಸಾಧನಾ ಕಂಠಸಿರಿಯಲ್ಲಿ ಮೂಡಿ ಬಂದಿರುವ ಲಾಲಿ ಗೀತೆ. ಒಂದು ಲಾಲಿ ಹಾಡಿಗೆ ಬೇಕಾದ ಮಾಧುರ್ಯ ಹಾಗೂ ವಾದ್ಯ ಸಂಯಮ ಇಲ್ಲಿ ಕೇಳ ಸಿಗುತ್ತದೆ. ಸಾಹಿತ್ಯ ಇನ್ನೂ ಗಟ್ಟಿಯಾಗಿರಬೇಕಿತ್ತೇನೋ ಎನಿಸಿದರೂ ಸಂಗೀತದಿಂದಾಗಿಯೇ ಇಷ್ಟವಾಗುವ ಗೀತೆ ಮತ್ತು ಸಾಧನ ಸರ್ಗಮ್ ಅವರ ಕನ್ನಡ ಉಚ್ಚಾರಣೆ ಸುಧಾರಿಸಬೇಕಿದೆ.

 

ಪುಂಗಿಯಿಂದ ಬಂದರೆ

ಪುಂಗಿಯಿಂದ ಬಂದರೆ
ಸಾಹಿತ್ಯ: ಕವಿರಾಜ್
ಹಾಡಿರುವವರು : ಸಂಗೀತ ರವೀಂದ್ರನಾಥ್, ಕೋರಸ್

ಮಾದಕತೆಯಿಂದ ಕೂಡಿರುವ ಈ ಹಾಡಿಗೆ, ಟೆಕ್ನೋ ಸ್ಪರ್ಷವೂ ದೊರಕಿದೆ. ಆರಕ್ಕೇರದ ಮೂರಕ್ಕಿಳಿಯದ ಸಾಹಿತ್ಯವಿರುವ ಗೀತೆ, ಪರದೆಯ ಮೇಲೆ ಹೇಗೆ ಮೂಡಿಬಂದಿದೆ ಎಂದು ಕಾದು ನೋಡಬೇಕಷ್ಟೇ.

 

ಧೂನ ಧೂನಾ

ಧೂನ ಧೂನಾ
ಸಾಹಿತ್ಯ : ಕವಿರಾಜ್
ಹಾಡಿರುವವರು : ಶಶಾಂಕ್ ಶೇಷಗಿರಿ, ಸುಪ್ರಿಯಾ

ಆಲ್ಬಂನಲ್ಲಿ ಮತ್ತೆ ಬರುವ ಈ ಹಾಡು ಮೊದಲ ಬಾರಿಗಿಂತ ಹೆಚ್ಚು ಇಷ್ಟವಾಗುತ್ತದೆ. ಹಿಂದೆ ಬಂದಿದ್ದನ್ನು ನೆನಪಿಸುತ್ತಾ ಮೆಲುಕು ಹಾಕುವಂತಿದೆ. ಶಶಾಂಕರ ದ್ವನಿ ಕೂಡಾ ಇಷ್ಟವಾಗುತ್ತದೆ. 'ಜನಿಸಿದ ಅನಿಸಿದೆ' ಎಂಬ ಸಾಲುಗಳುಳ್ಳ ಸಾಹಿತ್ಯ ಆಪ್ತವಾಗಿ ಇಷ್ಟವಾಗುತ್ತದೆ.

 

ಬೆಳ್ಳಿ..ಬೆಳ್ಳಿ

ಬೆಳ್ಳಿ..ಬೆಳ್ಳಿ
ಸಾಹಿತ್ಯ: ವಿ ಶ್ರೀಧರ್
ಹಾಡಿರುವವರು : ಸುಪ್ರಿಯಾ

ಈ ಬಾರಿ ಸುಪ್ರಿಯಾರವರ ಕಂಠದಲ್ಲಿ ಮೂಡಿ ಬಂದಿರುವ ಈ ಗೀತೆಯೂ ಮೊದಲಿಗಿಂತ ಹೆಚ್ಚು ಇಷ್ಟವಾಗುತ್ತದೆ. ಹಂಸಲೇಖರ ಹಳೆಯ ಲಾಲಿ ಹಾಡುಗಳಲ್ಲಿ ಕಾಣಸಿಗುವ ಸ್ವರಮಾಧುರ್ಯ ಹಾಗೂ ಸಂಗೀತ ಇಲ್ಲಿ ನೆನಪಾಗುತ್ತದೆ. ಎರಡನೇ ಬಾರಿ ಸಂಗೀತದಲ್ಲಿ ಇನ್ನಷ್ಟು ಲವಲವಿಕೆ ಇದ್ದಿದ್ದರೆ ಮೊದಲಿಗಿಂತ ವಿಭಿನ್ನವಾಗಿರುತ್ತೇನೋ. 'ಬೆಳ್ಳಿ ಬೆಳ್ಳಿ ಬೆಳ್ಳಿ' ಎಂಬ ಸಾಲುಗಳು ಮನಸ್ಸಿನಲ್ಲಿ ಉಳಿಯುತ್ತದೆ.

 

English summary
Audio review of Hatrick Hero Shivaraj Kumar, Kriti Karabanda starer Belli movie. Mussanje Sridhar has directed this movie and music given by V Sridhar.
Please Wait while comments are loading...

Kannada Photos

Go to : More Photos