»   » ಪಾಪ್ ಗಾಯಕ ಜಾರ್ಜ್ ಮೈಕಲ್ ನಿಧನಕ್ಕೆ ಬಾಲಿವುಡ್ ಕಂಬನಿ

ಪಾಪ್ ಗಾಯಕ ಜಾರ್ಜ್ ಮೈಕಲ್ ನಿಧನಕ್ಕೆ ಬಾಲಿವುಡ್ ಕಂಬನಿ

ಬ್ರಿಟನ್ನಿನ ಜನಪ್ರಿಯ ಪಾಪ್ ಗಾಯಕ ಜಾರ್ಜ್ ಮೈಕಲ್ (53) ಹೃದಯಾಘಾತದಿಂದ ನಿಧನರಾದ ಸುದ್ದಿಗೆ ಬಾಲಿವುಡ್ ಸ್ಟಾರ್ ಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಿಂಗ್, ಅರ್ಜುನ್ ರಾಂಪಾಲ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬ್ರಿಟನ್ನಿನ ಜನಪ್ರಿಯ ಪಾಪ್ ಗಾಯಕ ಜಾರ್ಜ್ ಮೈಕಲ್ (53) ಹೃದಯಾಘಾತದಿಂದ ನಿಧನರಾದ ಸುದ್ದಿಗೆ ಬಾಲಿವುಡ್ ಸ್ಟಾರ್ ಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಿಂಗ್, ಅರ್ಜುನ್ ರಾಂಪಾಲ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಫ್ ಯು ವೇರ್ ದೇರ್ ಮತ್ತು ಎವರಿಥಿಂಗ್ ಶೀ ವಾಂಟ್ಸ್ ಇತ್ಯಾದಿ ಸೂಪರ್ ಹಿಟ್ ಹಾಡುಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಜಾರ್ಜ್ ಮೈಕಲ್ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರ ವ್ಯವಸ್ಥಾಪಕ ಮೈಕಲ್ ಲಿಪ್ ಮ್ಯಾನ್ ಹೇಳಿದ್ದಾರೆ.

Bollywood Celebs React To British Pop Singer George Michael's Sudden Demise!

'Wham' ಬ್ಯಾಂಡ್ ಮೂಲಕ ಜನಪ್ರಿಯತೆಗಳಿಸಿದ್ದ ಜಾರ್ಜ್ ಅವರ 100 ಮಿಲಿಯನ್ ಗೂ ಅಧಿಕ ಆಲ್ಬಮ್ ಗಳು ಮಾರಾಟವಾಗಿವೆ.


ಲಾಸ್ಟ್ ಕ್ರಿಸ್ಮಸ್ ಎಂದು ಹಾಡು ಹೇಳಿದ್ದ ಜಾರ್ಜ್ ಅವರು ಕ್ರಿಸ್ಮಸ್ ಸಂದರ್ಭದಲ್ಲಿ ಅಗಲಿರುವುದು ಅವರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ.

 'ಲಾಸ್ಟ್ ಕ್ರಿಸ್ಮಸ್', 'ಫ್ರೀಡಂ', 'ಕೇರ್ ಲೆಸ್ ವ್ಹಿಸ್ಪರ್' ಸೇರಿದಂತೆ ಜಾರ್ಜ್ ಅವರ ಹಲವು ಹಾಡುಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ.

ಹೊಸ ವರ್ಷ ಮತ್ತೊಂದು ಆಲ್ಬಂ ಹೊರತರಲು ಅವರು ಸಿದ್ದತೆ ನಡೆಸಿದ್ದರು. ಅಷ್ಟೇ ಅಲ್ಲ ಡಾಕ್ಯುಮೆಂಟರಿ ಕೂಡ ರಿಲೀಸ್ ಆಗುವುದರಲ್ಲಿತ್ತು.

English summary
Bollywood celebrities Sushant Singh Rajput, Arjun Rampal & Sophie Choudry react to British pop singer George Michael's sudden demise on Christmas day 2016 and pour in their condolences on Twitter.
Please Wait while comments are loading...

Kannada Photos

Go to : More Photos