»   » 'ಪ್ರೇಮಿಗಳ ದಿನ'ದಂದು ರವಿಚಂದ್ರನ್ ಬಂಪರ್ ಉಡುಗೊರೆ

'ಪ್ರೇಮಿಗಳ ದಿನ'ದಂದು ರವಿಚಂದ್ರನ್ ಬಂಪರ್ ಉಡುಗೊರೆ

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ 'ಪ್ರೇಮ ಲೋಕ' ಸೃಷ್ಟಿಸಿದ 'ಕಲಾವಿದ' ರವಿಚಂದ್ರನ್. ಪ್ರೀತಿಗೆ, ಅದರ ರೀತಿಗೆ ಹೊಸ ವ್ಯಾಖ್ಯಾನ ಕೊಟ್ಟಿರುವ 'ರಸಿಕ'ನ ಕುಂಚದಲ್ಲಿ ಅರಳಿರುವ ಮತ್ತೊಂದು ಪ್ರೇಮ ಕಾವ್ಯ 'ಅಪೂರ್ವ'.

19 ರ ಚೆಲುವೆ ಮತ್ತು 61 ರ ಆಸುಪಾಸಿನ ನಾಯಕನೊಂದಿಗೆ ನಡೆಯುವ ಅಪರೂಪದ ಪ್ರೇಮ ಕಥೆ ಈ 'ಅಪೂರ್ವ'. ಒಂದೇ ಲಿಫ್ಟ್ ನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಿ, ಗಾಂಧಿನಗರದಲ್ಲಿ ವಿಭಿನ್ನ ಪ್ರಯೋಗ ಮಾಡಿರುವ ರವಿಮಾಮ, ಪ್ರೀತಿಯನ್ನ ಪ್ರೀತಿಯಿಂದ ಪ್ರೀತಿಸುವ ಎಲ್ಲಾ ಪ್ರೇಮಿಗಳಿಗೆ ಒಂದು ಸರ್ಪ್ರೈಸ್ ರೆಡಿಮಾಡಿದ್ದಾರೆ.


Ravichandran's Apoorva

'ಪ್ರೇಮಿಗಳ ದಿನ'ದಂದು 'ಅಪೂರ್ವ' ಚಿತ್ರದ ಆಡಿಯೋ ರಿಲೀಸ್ ಮಾಡುವ ಮೂಲಕ, ಎಲ್ಲಾ ಪ್ರೇಮಿಗಳಿಗೆ ಗಿಫ್ಟ್ ಪ್ಲಾನ್ ಮಾಡಿದ್ದಾರೆ ರವಿಚಂದ್ರನ್. ಹಾಗ್ನೋಡಿದರೆ, 'ಅಪೂರ್ವ' ಆಡಿಯೋ ಇಷ್ಟೊತ್ತಿಗೆ ರಿಲೀಸ್ ಆಗಿರ್ಬೇಕಿತ್ತು. ಆದ್ರೆ, ನಿಧಾನ ಆದರೂ ಪರ್ವಾಗಿಲ್ಲ, ವಿಶಿಷ್ಟವಾಗಿ 'ಅಪೂರ್ವ' ಆಡಿಯೋ ಹೊರ ತರಬೇಕು ಅಂತ ವಾಲೆಂಟೈನ್ಸ್ ಡೇ ದಿನ ಆಡಿಯೋ ರಿಲೀಸ್ ಫಿಕ್ಸ್ ಮಾಡಿದ್ದಾರೆ. [ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್]


ವಿಶೇಷತೆ ಏನಪ್ಪಾ ಅಂದ್ರೆ, 'ಅಪೂರ್ವ' ಚಿತ್ರದ ಒಂದೊಂದು ಹಾಡನ್ನು ಕನ್ನಡ ಚಿತ್ರರಂಗದ ಟಾಪ್ ಹೀರೋಗಳು ಬಿಡುಗಡೆ ಮಾಡುತ್ತಾರಂತೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ಸೇರಿದಂತೆ ಲೀಡಿಂಗ್ ಹೀರೋಗಳು, ಚಿತ್ರದ ಒಂದೊಂದು ಹಾಡನ್ನ ಹೊರತರಲಿದ್ದಾರೆ.


Ravichandran's Apoorva

ಇದಕ್ಕೂ ಒಂದು ಪ್ಲಾನ್ ಮಾಡಿ, ಒಬ್ಬೊಬ್ಬ ಹೀರೋ ಕೈಯಲ್ಲಿ ರವಿಮಾಮ ಸ್ಪೆಷಲ್ ಶೂಟಿಂಗ್ ಕೂಡ ಹಮ್ಮಿಕೊಂಡಿದ್ದಾರೆ. ಸಖತ್ ಡಿಫರೆಂಟ್ ಆಗಿ 'ಅಪೂರ್ವ' ಆಡಿಯೋ ರಿಲೀಸ್ ಮಾಡೋಕೆ ರವಿಚಂದ್ರನ್ ಸಿದ್ಧತೆ ಕೂಡ ನಡೆಸುತ್ತಿದ್ದಾರೆ.[ಕ್ರೇಜಿಸ್ಟಾರ್ ರವಿಚಂದ್ರನ್ 'ಅಪೂರ್ವ' ಅಮೋಘ ದಾಖಲೆ]


'ಲಹರಿ' ಸಂಸ್ಥೆ ಮೂಲಕ 'ಅಪೂರ್ವ' ಹಾಡುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ನಿಮಗೀಗಾಲೇ ಗೊತ್ತಿರುವಂತೆ 'ಅಪೂರ್ವ' ಕನಸುಗಾರನ ಮತ್ತೊಂದು ಒನ್ ಮ್ಯಾನ್ ಶೋ. ನಿರ್ಮಾಣ, ನಿರ್ದೇಶನ, ಸಂಗೀತ ನಿರ್ದೇಶನ, ನಟನೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ರವಿಮಾಮನ ಕ್ರಿಯಾಶೀಲತೆ ಇದೆ. [ಅಲೆ ಅಲೆಯಾಗಿ ತೇಲಿಬಂದ 'ಅಪೂರ್ವ' ದೃಶ್ಯ ಕಾವ್ಯ]


Crazy Star Ravichandran's Apoorva Audio

ಈಗಾಗಲೇ 'ಅಪೂರ್ವ' ಚಿತ್ರದ ಹಾಡಿನ ಟೀಸರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಾಲೆಂಟೈನ್ಸ್ ಡೇ ವರೆಗೂ ಟೀಸರ್ ನಲ್ಲಿರುವ ಹಾಡನ್ನ ಕೇಳಿ ಎಂಜಾಯ್ ಮಾಡಿ. ಆಮೇಲೆ ಧಮಾಕಾ ಇದ್ದದೇ.

English summary
Crazy Star Ravichandran starrer most awaited movie Apoorva Audio will be launched on Valentine's Day.
Please Wait while comments are loading...

Kannada Photos

Go to : More Photos