»   » ದರ್ಶನ್ ಜತೆ ಪ್ರಿಯಾಮಣಿ ಚಳಿ ಚಳಿ ಹಾಟ್ ಸಾಂಗ್

ದರ್ಶನ್ ಜತೆ ಪ್ರಿಯಾಮಣಿ ಚಳಿ ಚಳಿ ಹಾಟ್ ಸಾಂಗ್

Written by: ರವಿಕಿಶೋರ್
Subscribe to Filmibeat Kannada

'ಚಕ್ರವ್ಯೂಹ' (1983) ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಅಂಬಿಕಾ ಮಳೆಯಲ್ಲಿ ಮೀಯುತ್ತಾ ಚಳಿ ಚಳಿ ತಾಳೆನು ಈ ಚಳಿಯಾ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ ಪ್ರೇಕ್ಷಕರ ಮೈ ಮನಸ್ಸುಗಳು ಬೆಚ್ಚಗಾಗುತ್ತಿವೆ. ಈಗ ಮತ್ತೊಮ್ಮೆ ಅದೇ ಹಾಡಿನ ಚರಣಗಳನ್ನು ಕೇಳುವ ಸೌಭಾಗ್ಯ ದರ್ಶನ್ ಅಭಿಮಾನಿಗಳ ಪಾಲಿಗೆ ದಕ್ಕುತ್ತಿದೆ.

ಪ್ರಿಯಾಮಣಿ ಹಾಗೂ ದರ್ಶನ್ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ಅದೇ "ಚಳಿ ಚಳಿ ತಾಳೆನು..." ಹಾಡಿಗೆ ಹಾಟ್ ಸ್ಟೆಪ್ಸ್ ಹಾಕಿದರು. ಈ ಹಾಡಿನ ವಿಶೇಷತೆ ಎಂದರೆ ಕಿವಿಗೆ ಮಾತ್ರ ಚಳಿಚಳಿಯಾಗಿ ಕೇಳಿಸುವ ಹಾಡು, ಕಣ್ಣಿಗೆ ಬಿಸಿ ಅನುಭ ನೀಡುತ್ತದೆ. [ಮದಿರೆಯ ಜೊತೆಗೆ ಮಾದಕ ತಾರೆ ಪ್ರಿಯಾಮಣಿ]

Darshan Remakes Famous 'Chali Chali' Song for Ambareesha

ಚಕ್ರವ್ಯೂಹ ಚಿತ್ರದ ಮೊದಲ ಕ್ಯಾಚಿ ಸಾಲುಗಳನ್ನು ಮಾತ್ರ ಅಂಬರೀಷ ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ. ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಮಹೇಶ್ ಸುಖಧರೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಪ್ರಿಯಾಮಣಿ ಮತ್ತು ದರ್ಶನ್ ಕಪ್ಪು ಉಡುಪಿನಲ್ಲಿ ಈ ಹಾಡಿಗೆ ಹೆಜ್ಜೆ ಹಾಕುವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು.

ಬೆಂಗಳೂರಿನಲ್ಲೂ ವಾತಾವರಣ ಚಳಿ ಚಳಿಯಾಗಿಯೇ ಇದೆ. ಜೊತೆಗೆ ಹನಿ ಹನಿ ಮಳೆಯ ಸಿಂಚನವೂ ಆಗುತ್ತಿದೆ. ಇಂಥಹ ಅದ್ಭುತ ವಾತಾವರಣವೂ ಈ ಹಾಡಿನ ಚಿತ್ರೀಕರಣಕ್ಕೆ ಸಾಥ್ ನೀಡಿತು. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ರಚಿತಾ ರಾಮ್ ಹಾಗೂ ಪ್ರಿಯಾಮಣಿ. ಈ ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿರುವ ಚಿತ್ರ ಅಂಬರೀಷ.

English summary
Sandalwood evergreen rain song from Chakravyuha (1983) recreated in Darshan upcoming movie Ambareesha. The song picturises at Abbaiah Naidu Studio. Actress Priyamani shakes leg with Darshan and both drain in rain.
Please Wait while comments are loading...

Kannada Photos

Go to : More Photos