»   » 'ದಯವಿಟ್ಟು ಗಮನಿಸಿ'.. ಇದು ಸಂಗೀತ ಭಟ್ ಸಿಹಿ ಮುತ್ತಿನ ಕಥೆ

'ದಯವಿಟ್ಟು ಗಮನಿಸಿ'.. ಇದು ಸಂಗೀತ ಭಟ್ ಸಿಹಿ ಮುತ್ತಿನ ಕಥೆ

Subscribe to Filmibeat Kannada

ಸಂಗೀತ ಭಟ್ ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ದಿನೇ ದಿನೇ ಸದ್ದು ಮಾಡುತ್ತಿರುವ ಹುಡುಗಿ. ಸಂಗೀತ ಭಟ್ ನಟಿಸಿರುವ 'ದಯವಿಟ್ಟು ಗಮನಿಸಿ' ಚಿತ್ರದ ಹಾಡೊಂದು ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಆದರೆ, ಈ ಹಾಡು ಕೇಳಿದವರಿಗೆಲ್ಲ ಮೈ ಜುಮ್ ಎನಿಸುವುದು ಸಂಗೀತ ಭಟ್ ಬೋಲ್ಡ್ ನೆಸ್ ನೋಡಿದ ಮೇಲೆ.

'ಎರಡನೇ ಸಲ' ಸಿನಿಮಾದಲ್ಲಿ ಸಹ ಸಂಗೀತ ಭಟ್ ಕೆಲ ಹಾಟ್ ದೃಶ್ಯಗಳಲ್ಲಿ ನಟಿಸಿ ಸುದ್ದಿ ಮಾಡಿದ್ದರು. ಈಗ 'ದಯವಿಟ್ಟು ಗಮನಿಸಿ' ಚಿತ್ರದ ಹಾಡಿನಲ್ಲಿರುವ ಒಂದು ದೃಶ್ಯ ಕೂಡ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಪಡ್ಡೆ ಹುಡುಗರಂತೂ ಈ ಸೀನ್ ಬಗ್ಗೆ ಮಾತಾಡಿದ್ದೆ... ಮಾತಾಡಿದ್ದು..!

'Dayavittu gamanisi' kannada movie song released

ಸಂಗೀತ ಭಟ್ ಮತ್ತು ವಸಿಷ್ಠ ಈ ಹಾಡಿನಲ್ಲಿ ಜೊತೆಯಾಗಿದ್ದಾರೆ. ಇಬ್ಬರ ಕೆಮಿಸ್ಟರಿ ತುಂಬ ಚೆನ್ನಾಗಿ ಕಾಣಿಸುತ್ತೆ. ಅಂದಹಾಗೆ, 'ದಯವಿಟ್ಟು ಗಮನಿಸಿ' ಚಿತ್ರದ ಈ ಹಾಡು ರಿಲೀಸ್ ಆಗಿ ದೊಡ್ಡ ಮಟ್ಟದ ರೆಸ್ಪಾನ್ಸ್ ಗಿಟ್ಟಿಸಿದೆ.

ಅನೂಪ್ ಸೀಳೀನ್ ಸಂಗೀತದಲ್ಲಿ ಬಂದ ಈ ಹಾಡು ಕೇಳುಗರಿಗೆ ಹೊಸ ಫೀಲ್ ನೀಡಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ರೋಹಿತ್ ಪದಕಿ ನಿರ್ದೇಶನ ಚಿತ್ರಕ್ಕಿದೆ.

English summary
'Dayavittu gamanisi' kannada movie song released
Please Wait while comments are loading...