»   » ರಘು ದೀಕ್ಷಿತ್ ಗೆ ಗ್ಲೋಬಲ್ ಸಂಗೀತ ಪ್ರಶಸ್ತಿ

ರಘು ದೀಕ್ಷಿತ್ ಗೆ ಗ್ಲೋಬಲ್ ಸಂಗೀತ ಪ್ರಶಸ್ತಿ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕರ್ನಾಟಕದ ಹೆಮ್ಮೆಯ ಗಾಯಕ ರಘು ದೀಕ್ಷಿತ್ ಹಾಗೂ ಅವರ ತಂಡಕ್ಕೆ ಗ್ಲೋಬಲ್ ಇಂಡಿಯನ್ ಮ್ಯೂಸಿಕ್ ಅವಾರ್ಡ್ 2014 ಸಿಕ್ಕಿದೆ. ಮುಂಬೈನ ವೊರ್ಲಿಯ ರಾಷ್ಟ್ರೀಯ ಕ್ರೀಡಾ ಕ್ಲಬ್ ಸ್ಟೇಡಿಯಂನಲ್ಲಿ ನಡೆದ ಗಿಮಾ ಸಂಗೀತ ಪ್ರಶಸ್ತಿಯನ್ನು ಗೆದ್ದಿರುವ ಖುಷಿಯನ್ನು ರಘು ದೀಕ್ಷಿತ್ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ರಘು ದೀಕ್ಷಿತ್ ಹಾಗೂ ಅವರ ತಂಡ 2013ರ ಶ್ರೇಷ್ಠ ಲೈವ್ ಕಾರ್ಯಕ್ರಮ ನೀಡಿ ಜನ ಮೆಚ್ಚುಗೆ ಗಳಿಸಿದೆ ಎಂದು GiMA ಪ್ರಶಸ್ತಿ ನೀಡಲಾಗಿದೆ. ರಣವೀರ್ ಸಿಂಗ್ ಅವರು ನಿರೂಪಕರಾಗಿರುವ ಈ ಕಾರ್ಯಕ್ರಮದಲ್ಲಿ ಶಂಕರ್ ಮಹಾದೇವನ್, ಸಿದ್ದಾರ್ಥ್ ಮಹದೇವನ್, ರೀಚಾ ಛಡ್ಡಾ, ಯೋ ಯೋ ಹನಿ ಸಿಂಗ್, ಸೋನಾಕ್ಷಿ ಸಿನ್ಹಾ, ಶ್ರೇಯಾ ಘೋಷಾಲ್, ಮಿಕಾ ಸಿಂಗ್, ಅಂಬಿ ಸುಬ್ರಮಣ್ಯಂ ಪಾಲ್ಗೊಂಡಿರುವ ಅತಿಥಿಗಳು, ಪ್ರಶಸ್ತಿ ಗೆದ್ದ ಗಾಯಕ, ಗಾಯಕಿಯರು, ಮ್ಯೂಸಿಕ್ ಬ್ಯಾಂಡ್ , ಗಣ್ಯರ ಟ್ವೀಟ್ ಗಳ ಸಂಗ್ರಹ ಇಲ್ಲಿದೆ ತಪ್ಪದೇ ನೋಡಿ...

ಗ್ಲೋಬಲ್ ಇಂಡಿಯನ್ ಮ್ಯೂಸಿಕ್ ಅವಾರ್ಡ್ 2014
  

ಗ್ಲೋಬಲ್ ಇಂಡಿಯನ್ ಮ್ಯೂಸಿಕ್ ಅವಾರ್ಡ್ 2014

ಗ್ಲೋಬಲ್ ಇಂಡಿಯನ್ ಮ್ಯೂಸಿಕ್ ಅವಾರ್ಡ್ 2014 ಗೆದ್ದ ಖುಷಿಯನ್ನು ನಾನು ಹತ್ತಿಕ್ಕಿಕೊಳ್ಳಲು ಸಾಧ್ಯವಿಲ್ಲ ಎಂದು ಚಿತ್ರ ಟ್ವೀಟ್ ಮಾಡಿದ ರಘು ದೀಕ್ಷಿತ್

  

ಮ್ಯೂಸಿಕ್ ಅವಾರ್ಡ್ 2014 ಗೆದ್ದ ರಘು ದೀಕ್ಷಿತ್

ಗ್ಲೋಬಲ್ ಇಂಡಿಯನ್ ಮ್ಯೂಸಿಕ್ ಅವಾರ್ಡ್ 2014 ಪ್ರಶಸ್ತಿ ಸ್ವೀಕಾರ ಸಮಾರಂಭದ ರೆಡ್ ಕಾರ್ಪೆಟ್ ನಲ್ಲಿ ರಘು ದೀಕ್ಷಿತ್. ಚಿತ್ರ ಕೃಪೆ: @Raghu_Dixit

ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್
  

ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್

Off to @GiMAAwards Genuinely excited as I am going to celebrate the entire year's greatest musical creations with the creators themselves:) ಎಂದು ಟ್ವೀಟ್ ಮಾಡಿದ ಗಾಯಕಿ ಶ್ರೇಯಾ ಘೋಷಾಲ್

ಆದಿತ್ಯ ಸಿಂಗ್ ಶರ್ಮ ಟ್ವೀಟ್
  

ಆದಿತ್ಯ ಸಿಂಗ್ ಶರ್ಮ ಟ್ವೀಟ್

ಅದಿತ್ಯ ಸಿಂಗ್ ಶರ್ಮ ಜತೆ ಕುಣಿದು ನಲಿಯಲು ಸಿದ್ದಾರ್ಥ್ ಸಿಂಗ್ ಶರ್ಮ ರೆಡಿಯಂತೆ. ಖ್ಯಾತ ಗಾಯಕ ಶಂಕರ್ ಮಹಾದೇವನ್ ಜತೆ ಪೋಸ್

ಉದಿತ್ ನಾರಾಯಣ್, ಆದಿತ್ಯ ನಾರಾಯಣ್
  

ಉದಿತ್ ನಾರಾಯಣ್, ಆದಿತ್ಯ ನಾರಾಯಣ್

@ImAdityaNarayan ಟ್ವೀಟ್ ಮಾಡಿ @MikaSingh ಗಾಯನ ಕೇಳಲು ಕಾತುರನಾಗಿದ್ದೇನೆ ಎಂದಿದ್ದಾರೆ.

ನನಗೆ ವಿಶ್ ಮಾಡಿ ಎಂದ ಸೋನು ಕಕ್ಕರ್
  

ನನಗೆ ವಿಶ್ ಮಾಡಿ ಎಂದ ಸೋನು ಕಕ್ಕರ್

GiMA ಪ್ರಶಸ್ತಿ ಸಮಾರಂಭಕ್ಕೆ ಹೋಗುತ್ತಿದ್ದೇನೆ. ನನ್ನ ಅಲ್ಬಂ ನಾಮಿನೇಟ್ ಆಗಿದೆ ನನಗೆ ವಿಶ್ ಮಾಡಿ ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

  

ಮ್ಯೂಸಿಕ್ ಅವಾರ್ಡ್ 2014 ರೆಡ್ ಕಾರ್ಪೆಟ್

ಗ್ಲೋಬಲ್ ಇಂಡಿಯನ್ ಮ್ಯೂಸಿಕ್ ಅವಾರ್ಡ್ 2014 ರೆಡ್ ಕಾರ್ಪೆಟ್ ನಲ್ಲಿ ಸುಂದರ ತಾರೆಗಳನ್ನು ನೋಡಿ

English summary
Bangalore band, The Raghu Dixit Project, won the Best Live Act 2013 award and Thermal and A Quarter won the Best Rock Album award. Global Indian Music Awards 2014 (GIMA 2014) held at place at National Sports Club Of India (NSCI) Stadium, Worli, Mumbai.
Please Wait while comments are loading...

Kannada Photos

Go to : More Photos