twitter
    For Quick Alerts
    ALLOW NOTIFICATIONS  
    For Daily Alerts

    ವಿಶೇಷ: ಕಿಶೋರ್ ಕುಮಾರ್ ಅವರ ಹಾಡು ಕೇಳಿ ಆನಂದಿಸಿ

    By Mahesh
    |

    ಭಾರತೀಯ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ಕಿಶೋರ್ ಕುಮಾರ್ ಅವರ ಹುಟ್ಟುಹಬ್ಬವನ್ನು ಆ.4ರಂದು ಅವರ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಒಬ್ಬ ನಟ, ಹಾಸ್ಯಗಾರ, ಕಥೆ-ಚಿತ್ರಕಥೆಗಾರ, ನಿರ್ಮಾಪಕ, ನಿರ್ದೇಶಕ, ಸಂಕಲನಗಾರ, ಹಿನ್ನೆಲೆ ಗಾಯಕ, ಗೀತ ಸಾಹಿತಿ, ಸಂಗೀತ ನಿರ್ದೇಶಕ ಹೀಗೆ ವೈವಿಧ್ಯತೆಯಲ್ಲಿ ಏಕತೆ ಮೆರೆದ ಅಪ್ರತಿಮ ಕಲೆಗಾರ.

    ಕನ್ನಡ ಸೇರಿದಂತೆ ಹಿಂದಿ, ಬಂಗಾಳಿ, ಮರಾಠಿ, ಅಸ್ಸಾಮಿ, ಗುಜರಾತ್, ಭೋಜ್ ಪುರಿ, ಮಲಯಾಳಂ ಮತ್ತು ಒರಿಯಾ ಭಾಷೆಗಳಲ್ಲಿ ಕಿಶೋರ್ ಕುಮಾರ್ ಹಾಡಿರುವ ಹಾಡುಗಳು ಇಂದಿಗೂ ಎಂದಿಗೂ ಜನಪ್ರಿಯ. ದ್ವಾರಕೀಶ್ ಅಭಿನಯದ 'ಕುಳ್ಳ ಏಜೆಂಟ್ 000'(1972) ಚಿತ್ರದ ''ಆಡು ಆಟ ಆಡು...'' ಕಿಶೋರ್ ಹಾಡಿರುವ ಕನ್ನಡದ ಜನಪ್ರಿಯ ಗೀತೆ.

    ರೂಪ್ ತೇರಾ ಮಸ್ತಾನಾ, ಖೈಕೆ ಪಾನ್ ಬನಾರಸ್ ವಾಲಾ, ಜಿಂದಗಿ ಏಕ್ ಸಫರ್, ಓ ಸಾಥಿ ರೇ ಅವರ ಜನಪ್ರಿಯ ಗೀತೆಗಳಲ್ಲಿ ಕೆಲವು. ಐವತ್ತರ ದಶಕದಿಂದ ಎಪ್ಪತ್ತರವರೆಗೂ ತಮ್ಮ ಅಪ್ರತಿಮ ಕಂಠದಿಂದ ಮೋಡಿ ಮಾಡಿದ ಗಾಯಕ. ಕೋರಸ್ ಸಿಂಗರ್ ಆಗಿ ಚಿತ್ರರಂಗಕ್ಕೆ ಬಂದ ಕಿಶೋರ್ ಗಾನ ಮಾಂತ್ರಿಕನಾಗಿ ಬೆಳೆದಿದ್ದು ದೊಡ್ಡ ಕಥೆ. ಕಿಶೋರ್ ಬದುಕಿನ ಪ್ರಮುಖ ಘಟ್ಟಗಳು, ಅವರು ಹಾಡಿರುವ ಹೃದಯಸ್ಪರ್ಶಿ ಗೀತೆಗಳ ವಿಡಿಯೋ ನಿಮಗಾಗಿ ಇಲ್ಲಿದೆ. ಇದು ಅವರ 85ನೇ ಹುಟ್ಟುಹಬ್ಬದ ಸ್ಪೆಷಲ್...

    ಚಿತ್ರರಂಗಕ್ಕೆ ಕರೆ ತಂದಿದ್ದು ಅಣ್ಣ ಅಶೋಕ್

    ಚಿತ್ರರಂಗಕ್ಕೆ ಕರೆ ತಂದಿದ್ದು ಅಣ್ಣ ಅಶೋಕ್

    * ಮಧ್ಯಪ್ರದೇಶದ ಬೆರಾರ್ ಪ್ರಾಂತ್ಯದ ಬೆಂಗಾಳಿ ಗಂಗೂಲಿ ಕುಟುಂಬದಿಂದ ಬಂದ ಅಭಾಸ್ ಕುಮಾರ್ ಗಂಗೂಲಿಯನ್ನು ಕಿಶೋರ್ ಕುಮಾರ್ ಆಗಿ ಚಿತ್ರರಂಗಕ್ಕೆ ಕರೆ ತಂದಿದ್ದು ನಟ ಅಶೋಕ್ ಕುಮಾರ್ ಗಂಗೂಲಿ.

    rn

    ರಿಮ್ ಜಿಮ್ ಗಿರೇ ಸಾವನ್

    ಅಮಿತಾಬ್ ಬಚ್ಚನ್ ಹಾಗೂ ಮೌಸಮಿ ಚಟರ್ಜಿ ಅಭಿನಯದ ರಿಮ್ ಜಿಮ್ ಗಿರೇ ಸಾವನ್ ಅಭಿಮಾನಿಗಳ ಹೃದಯದಲ್ಲಿ ಸದಾ ಕಾಲ ತಂಪು ಮಳೆ ಸುರಿಸುವ ಹಾಡು

    ಗಜಲ್ ಗೆ ದನಿ ಕೊಟ್ಟ ಕಿಶೋರ್

    ಗಜಲ್ ಗೆ ದನಿ ಕೊಟ್ಟ ಕಿಶೋರ್

    * 1948ರಲ್ಲಿ ದೇವ್ ಆನಂದ್ ಅವರ ಜಿದ್ದಿ ಚಿತ್ರಕ್ಕಾಗಿ ಮೊದಲ ಬಾರಿಗೆ ಪ್ರೇಮ್ ಧವನ್ ಅವರ ಮರ್ನೆ ಕಿ ದುವಾಯೇ ಕ್ಯೂ ಮಾಂಗೂ ಎಂಬ ಗಜಲ್ ಗೆ ದನಿ ಕೊಟ್ಟ ಕಿಶೋರ್

    ದುಃಖಿ ಮನ್ ಮೇರೆ ಹೃದಯ ಸ್ಪರ್ಶಿ ಹಾಡು

    ಫಂಟೂಷ್ ಚಿತ್ರದ ದುಃಖಿ ಮನ್ ಮೇರೆ ಸುನೋ ಮೇರೆ ಕೆಹನಾ ಹಾಡು

    ಕೆಎಲ್ ಸೈಗಲ್ ಕಿಶೋರ್ ಅವರ ಗುರು

    ಕೆಎಲ್ ಸೈಗಲ್ ಕಿಶೋರ್ ಅವರ ಗುರು

    ಅಣ್ಣ ಅಶೋಕ್ ಕುಮಾರ್ ಜತೆ ಬಾಂಬೆ ಟಾಕೀಸ್ ಚಿತ್ರದ ಸಂದರ್ಭದಲ್ಲಿ ಗಾಯಕ-ನಟ ಕುಂದನ್ ಲಾಲ್ ಸೈಗಲ್‌ ಕಂಡು ಅವರ ಮೇಲೆ ಅಭಿಮಾನ ಬೆಳೆಸಿಕೊಂಡ ಕಿಶೋರ್ ಅವರನ್ನು ಗುರುವಾಗಿ ಸ್ವೀಕರಿಸಿದರು.

    ಮುಂದೆ ಸಚಿನ್ ದೇವ್ ಬರ್ಮನ್ ಹಾಗೂ ರಾಹುಲ್ ದೇವ್ ಬರ್ಮನ್ ಅವರ ಸಂಯೋಜನೆಯಲ್ಲಿ ಕಿಶೋರ್ ಹಾಡು ಕೇಳುವುದು ಸಿನಿರಸಿಕರಿಗೆ ಸಂಭ್ರಮದ ಕ್ಷಣವಾಗಿಬಿಟ್ಟಿತು.

    rn

    ಮಾನಾ ಜನಾಬ್ ನೆ ಪುಕಾರಾ ನಹೀಂ - ಪೇಯಿಂಗ್ ಗೆಸ್ಟ್

    ಮಾನಾ ಜನಾಬ್ ನೆ ಪುಕಾರಾ ನಹೀಂ - ಪೇಯಿಂಗ್ ಗೆಸ್ಟ್ ಚಿತ್ರದ ಯುಗುಳ ಗೀತೆ

    ವೈವಿಧ್ಯಮಯ ಗಾಯಕ ಕಿಶೋರ್ ಗೆ ನಮನ

    ವೈವಿಧ್ಯಮಯ ಗಾಯಕ ಕಿಶೋರ್ ಗೆ ನಮನ

    ವೈವಿಧ್ಯಮಯ ಗಾಯಕ ಕಿಶೋರ್ ಕುಮಾರ್ ಅವರಿಗೆ ಡೂಡ್ಲ್ ಮೂಲಕ ನಮನ ಸರ್ಚ್ ಇಂಜಿನ್ ಗೂಗಲ್

    ಯೇ ಜೋ ಮೊಹಬ್ಬತ್ ಹೇ ಚೇತೋಹಾರಿ ಹಾಡು

    ಯೇ ಜೋ ಮೊಹಬ್ಬತ್ ಹೇ ಸೂಪರ್ ಸ್ಟಾರ್ ರಾಜೇಶ್ ಖನ್ನ ಅವರ ಕಟಿ ಪತಂಗ್ ಚಿತ್ರದ ಚೇತೋಹಾರಿ ಹಾಡಿಗೆ ಆರ್.ಡಿ.ಬರ್ಮನ್ ಅವರ ಅದ್ಭುತ ಸಂಯೋಜನೆ

    ಕಿಶೋರ್ ಹಿನ್ನೆಲೆ ದನಿ ಪಡೆದ ನಾಯಕರು

    ಕಿಶೋರ್ ಹಿನ್ನೆಲೆ ದನಿ ಪಡೆದ ನಾಯಕರು

    ದೇವಾನಂದ್, ದಿಲೀಪ್ ಕುಮಾರ್, ರಾಜೇಶ್ ಖನ್ನ, ಅಮಿತಾಬ್ ಬಚ್ಚನ್, ಧರ್ಮೇಂದ್ರ, ಜಿತೇಂದ್ರ, ಸಂಜೀವ್ ಕುಮಾರ್, ಶಶಿ ಕಪೂರ್, ಮಿಥುನ್ ಚಕ್ರವರ್ತಿ, ವಿನೋದ್ ಖನ್ನ, ರಣಧೀರ್ ಕಪೂರ್, ರಿಷಿ ಕಪೂರ್, ರಾಜೀವ್ ಕಪೂರ್, ಸಂಜಯ್ ದತ್, ಸನ್ನಿ ಡಿಯೋಲ್, ಅನಿಲ್ ಕಪೂರ್, ರಾಕೇಶ್ ರೋಷನ್, ಪ್ರಾಣ್, ಸಚಿನ್, ವಿನೋದ್ ಮೆಹ್ರಾ, ರಜನಿಕಾಂತ್, ಚಂಕಿಪಾಂಡೆ, ಕುಮಾರ್ ಗೌರವ್, ಗೋವಿಂದ, ಜಾಕಿ ಶ್ರಾಫ್ ಸೇರಿದಂತೆ

    ಆ ಚಲ್ ಕೆ ತುಝೆ - ದೂರ್ ಗಗನ್ ಕೀ ಛಾವೊಂ ಮೆಂ

    ಆ ಚಲ್ ಕೆ ತುಝೆ - ದೂರ್ ಗಗನ್ ಕೀ ಛಾವೊಂ ಮೆಂ(1964)

    ದಾಂಪತ್ಯ ಗೀತೆ ಸರಾಗವಾಗಿ ಸಾಗಲೇ ಇಲ್ಲ

    ದಾಂಪತ್ಯ ಗೀತೆ ಸರಾಗವಾಗಿ ಸಾಗಲೇ ಇಲ್ಲ

    * ಕಿಶೋರ್ ಅವರು ನಾಲ್ಕು ಬಾರಿ ಮದುವೆಯಾಗಿದ್ದರು. ಮೊದಲ ಪತ್ನಿ ಬೆಂಗಾಳಿ ಗಾಯಕಿ, ನಟಿ ರುಮಾ ಗುಹಾ ಘೋಶ್ (1950-1958)
    * ಕಿಶೋರ್ ಪ್ರೀತಿಸಿ 1960ರಲ್ಲಿ ಮದುವೆಯಾಗಿದ್ದು ನಟಿ ಅಪ್ರತಿಮ ಸುಂದರಿ ಮಧುಬಾಲ. ಬೆಂಗಾಳಿ ಸಂಪ್ರದಾಯವಾದಿ ಕುಟುಂಬದ ಕಿಶೋರ್ ಹಾಗೂ ಮುಸ್ಲಿಂ ಸಮುದಾಯದ ಮಧುಬಾಲ ಮದುವೆಗೆ ವಿರೋಧವಿತ್ತು. ಹೃದಯಸಂಬಂಧಿ ಕಾಯಿಲೆಯಿಂದ ಮಧುಬಾಲಾ 1969ರಲ್ಲಿ ಮೃತರಾದರು.
    * ಯೋಗಿತಾ ಬಾಲಿ ಜತೆ 1976 ರಿಂದ 1978ರ ತನಕ ಸಂಸಾರ.
    * 1980ರಲ್ಲಿ ಲೀನಾ ಚಂದಾವಾರ್ಕರ್ ರನ್ನು ಮದುವೆಯಾದರು.
    * ಅಮಿತ್ ಕುಮಾರ್( ರುಮಾ ಪುತ್ರ) ಸುಮಿತ್ ಕುಮಾರ್ (ಲೀನಾ ಪುತ್ರ)

    ಅದ್ಭುತ ಜುಗಲ್ ಬಂದಿಗೆ ಉದಾಹರಣೆ

    ಸುನಿಲ್ ದತ್ ಗೆ ದನಿಯಾದ ಕಿಶೋರ್, ಮೊಹಮ್ಮದ್ ಗೆ ದನಿಯಾದ ಮನ್ನಾಡೇ ಹಾಡು ಏಕ್ ಚತುರ್... ಮನ್ನಾಡೇ-ಕಿಶೋರ್ ಜುಗಲ್ ಬಂದಿಯಲ್ಲಿ ಬಂದ ಅದ್ಭುತ ಸಂಯೋಜನೆ

    ಪ್ರಶಸ್ತಿಗಳು ಹುಡುಕಿಕೊಂಡು ಬಂದವು

    ಪ್ರಶಸ್ತಿಗಳು ಹುಡುಕಿಕೊಂಡು ಬಂದವು

    * ಅಪ್ರತಿಮ ಗಾಯಕ ಕಿಶೋರ್ ಅವರಿಗೆ ಹಿನ್ನೆಲೆ ಗಾಯನಕ್ಕಾಗಿ 8 ಫಿಲಂಫೇರ್ ಪ್ರಶಸ್ತಿ ಬಂದಿದ್ದು ಇದೊಂದು ದಾಖಲೆಯಾಗಿದೆ.
    * ಮಧ್ಯಪ್ರದೇಶ ಸರ್ಕಾರ ನೀಡುವ ಲತಾ ಮಂಗೇಷ್ಕರ್ ಪ್ರಶಸ್ತಿ ಗಳಿಸಿದ್ದಾರೆ.
    * ಕಿಶೋರ್ ಕುಮಾರ್ ಅವರ ಹೆಸರಿನಲ್ಲೂ ಮಧ್ಯಪ್ರದೇಶ ಸರ್ಕಾರ ಪ್ರಶಸ್ತಿ ನೀಡುತ್ತಾ ಬಂದಿದೆ.

    ಪಲ್ ಪಲ್ ದಿಲ್ ಕೇ ಪಾಸ್

    ಧರ್ಮೇಂದ್ರ ಹಾಗೂ ರಾಖಿ ಅಭಿನಯದ ಈ ಹಾಡು ಉತ್ತಮ ಪ್ರಣಯ ಗೀತೆ

    No money No work ತತ್ವ

    No money No work ತತ್ವ

    No money No work ತತ್ವ ಪಾಲಿಸುತ್ತಾ ಬಂದಿದ್ದ ಕಿಶೋರ್ ಅವರು ಜೀವನದ ಕೊನೆ ಹಂತದಲ್ಲಿ ಹಲವು ಚಿತ್ರಗಳಿಗೆ ಸಂಭಾವನೆ ಪಡೆಯದೇ ಹಾಡಿದ್ದರು.
    ಸಾವಿರಾರು ಅಮರ ಗೀತೆಗಳನ್ನು ಹಾಡಿದ ಗಾಯಕ ಕೊನೆಗಾಲದಲ್ಲಿ ಒಂಟಿಯಾಗಿದ್ದರು. ಏಕಾಂತವೇ ನನ್ನ ಸಂಗಾತಿ. ಮನೆ ಮುಂದಿನ ವೃಕ್ಷಗಳೆ ನನ್ನ ಸಂಗಾತಿ ಎಂದೆಲ್ಲ ಹೇಳುತ್ತಿದ್ದರು ಎಂದು ಪ್ರೀತಿಷ್ ನಂದಿ ಸ್ಮರಿಸಿಕೊಳ್ಳುತ್ತಿದ್ದಾರೆ.
    ಕಿಶೋರ್ ಕುಮಾರ್, ಅಕ್ಟೋಬರ್ 1987ರಲ್ಲಿ, ತೀವ್ರ ಹೃದಯಾಘಾತದಿಂದ ನಿಧನರಾದರು.

    ಸಫರ್ ಚಿತ್ರದ ಅರ್ಥಪೂರ್ಣ ಹಾಡು

    ಜೀವನ್ ಸೇ ಭರಿ ತೇರಿ ಆಂಕೆ ಮಜಬೂರ್ ಕರೆ-ಸಫರ್ ಚಿತ್ರದ ಹಾಡು

    ಗೋಲ್ ಮಾಲ್ ಚಿತ್ರದ ಸದಾ ಗುನುಗುವ ಗೀತೆ

    ಅಮೋಲ್ ಪಾಲೇಕರ್ ನಟನೆಯ ಗೋಲ್ ಮಾಲ್ ಹಾಸ್ಯ ಪ್ರಧಾನ ಚಿತ್ರದ ಸದಾ ಗುನುಗುವ ಗೀತೆವಂತೆ ಮಾಡುವ ಇಂಪಾದ ಗೀತೆ

    ನೀಲೆ ನೀಲೆ ಅಂಬರ್ ಪರ್ ಚಾಂದ್ ಜಬ್ ಆಯೇ

    ನೀಲೆ ನೀಲೆ ಅಂಬರ್ ಪರ್ ಚಾಂದ್ ಜಬ್ ಆಯೇ ಶ್ರೀದೇವಿ ನಟನೆಯ ಕಲಾಕಾರ್ ಚಿತ್ರದ ಹಾಡು

    ಜಿಂದಗಿ ಏಕ್ ಸಫರ್ ಹೇ ಸುಹಾನ

    1971ರಲ್ಲಿ ತೆರೆಕಂಡ ರಾಜೇಶ್ ಖನ್ನ ಅಭಿನಯದ ಅಂದಾಜ್ ಚಿತ್ರದ ಜಿಂದಗಿ ಏಕ್ ಸಫರ್ ಹೇ ಸುಹಾನ ಹಾಡು

    ಸಂಜೆ ವೇಳೆ ಈ ಹಾಡು ಕಾಡದೆ ಬಿಡದು

    ಸಂಜೆ ವೇಳೆ ಈ ಹಾಡು ಕಾಡದೆ ಬಿಡದು ಯೇ ಶಾಮ್ ಮಸ್ತಾನಿ.. ರಾಜೇಶ್ ಖನ್ನ ಹಾಗೂ ಅಶಾ ಪರೇಖ್ ಅಭಿನಯದ ಕಟಿ ಪತಂಗ್ ಚಿತ್ರದ ಮನೋಜ್ಞ ಹಾಡು

    ಮೇರೆ ಮೆಹಬೂಬ್ ಕಯಾಮತ್ ಹೋಗಿ

    1964ರಲ್ಲಿ ತೆರೆ ಕಂಡ ಮಿ.ಎಕ್ಸ್ ಇನ್ ಬಾಂಬೆ ಚಿತ್ರದಲ್ಲಿ ನಟಿಸಿದ್ದ ಕಿಶೋರ್ ಕುಮಾರ್ ಆವರು ಲಕ್ಷ್ಮಿಕಾಂತ್ ಪ್ಯಾರೇಲಾಲ್ ಗೀತ ಸಾಹಿತ್ಯ, ಆನಂದ್ ಭಕ್ಷಿ ಸಂಗೀತದ ಹಾಡು ಹಾಡಿದ್ದು ಹೀಗೆ

    ಏಕ್ ಲಡ್ಕಿ ಭೀಗಿ ಭಾಗಿ ಸಿ

    ಏಕ್ ಲಡ್ಕಿ ಭೀಗಿ ಭಾಗಿ ಸಿ ಕಿಶೋರ್ ಅಭಿನಯಿಸಿ ಹಾಡಿರುವ 'ಚಲ್ತಿ ಕಾ ನಾಮ್ ಗಾಡಿ(1958) ಚಿತ್ರದ ಹಾಸ್ಯಮಯ ಪ್ರಣಯ ಗೀತೆ, ಎಸ್ ಡಿ ಬರ್ಮನ್ ಸಂಗೀತ, ಮಜ್ರೂಹ್ ಸುಲ್ತಾನ್ ಪುರಿ ಸಾಹಿತ್ಯ

    ತೆರೆ ಬಿನಾ ಭಿ ಕ್ಯಾ ಜೀನಾ

    ಮುಖದ್ದರ್ ಕ ಸಿಕಂದರ್ ಚಿತ್ರದ ಮರೆಯದಂಥ ಹಾಡು ಓ ಸಾಥಿ ರೇ.. ತೆರೆ ಬಿನಾ ಭಿ ಕ್ಯಾ ಜೀನಾ

    ಅಗರ್ ತುಮ್ ನಾ ಹೋತೆ

    ಕಿಶೋರ್ ಹಾಡು ಕೇಳಿ ಮರುಳಾದ ಅನೇಕ ಮಂದಿ ಈ ಹಾಡು ಕಿಶೋರ್ ಕುರಿತಂತೆ ಹಾಡಿದರೂ ಅಚ್ಚರಿಯೇನಿಲ್ಲ. ಅಗರ್ ತುಮ್ ನಾ ಹೋತೆ

    English summary
    Kishore Kumar B'day Spl: Kishore Kumar was the most successful playback singer, the Bollywood industry has ever seen. He sang in many Indian languages including Bengali, Hindi, Marathi, Assamese, Gujarati, Kannada, Bhojpuri, Malayalam, Oriya, and Urdu. Kishore Kumar songs are addictive and here are his 10 best evergreen heart-wrenching songs.
    Saturday, August 5, 2017, 12:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X