»   » ದಾಖಲೆ ಮೊತ್ತಕ್ಕೆ 'ವಿರಾಟ್' ಆಡಿಯೋ ರೈಟ್ಸ್ ಸೇಲ್!

ದಾಖಲೆ ಮೊತ್ತಕ್ಕೆ 'ವಿರಾಟ್' ಆಡಿಯೋ ರೈಟ್ಸ್ ಸೇಲ್!

Posted by:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಚಿತ್ರದ ಆಡಿಯೋ ಹಕ್ಕನ್ನ ದಾಖಲೆ ಬೆಲೆಗೆ ಖರೀದಿಸಿದ್ದ ಲಹರಿ ಆಡಿಯೋ ಸಂಸ್ಥೆ ಇದೀಗ ಅದೇ ದರ್ಶನ್ ರವರ 'ವಿರಾಟ್' ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದೆ.(ಮೊತ್ತ ಎಷ್ಟು ಅಂತ ಬಹಿರಂಗ ಪಡಿಸಿಲ್ಲ.)

ಜನವರಿ 12 ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ 'ವಿರಾಟ್' ಚಿತ್ರದ ಆಡಿಯೋ ಬಿಡುಗಡೆ ಆಗಲಿದೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ.


virat

ಎಚ್.ವಾಸು ಆಕ್ಷನ್ ಕಟ್ ಹೇಳಿರುವ 'ವಿರಾಟ್' ಸಿನಿಮಾ ಕಳೆದ ಎರಡು ವರ್ಷಗಳಿಂದ ರೆಡಿ ಆಗುತ್ತಲೇ ಇದೆ. ಅನಿವಾರ್ಯ ಕಾರಣಗಳಿಂದ 'ವಿರಾಟ್' ಸಿನಿಮಾ ತಡವಾಗಿದ್ದರೂ, ಲೇಟೆಸ್ಟ್ ಆಗಿ ಆಡಿಯೋ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು. [ಜಬರ್ದಸ್ತ್ ಟೀಸರ್ ನಲ್ಲಿ ದರ್ಶನ್ ನ, 'ವಿರಾಟ್' ದರ್ಶನ]


ದರ್ಶನ್ ಜೊತೆ ವಿದಿಶಾ ಶ್ರೀವಾಸ್ತವ್ ಮತ್ತು ಇಶಾ ಚಾವ್ಲಾ ನಟಿಸಿರುವ ಸಿನಿಮಾ 'ವಿರಾಟ್'. ವರದಿಗಳ ಪ್ರಕಾರ, ಜನವರಿ 29 ರಂದು 'ವಿರಾಟ್' ಬಿಡುಗಡೆ ಆಗಲಿದೆ.

English summary
Lahari Audio Company has acquired audio rights of Kannada Actor Darshan starrer 'Viraat' for fancy price.
Please Wait while comments are loading...

Kannada Photos

Go to : More Photos