twitter
    For Quick Alerts
    ALLOW NOTIFICATIONS  
    For Daily Alerts

    ಈ ಟಚ್ಚಲಿ ಏನೋ ಇದೆ; ನಾಗೇಂದ್ರ ಪ್ರಸಾದ್

    |
    <ul id="pagination-digg"><li class="previous"><a href="/music/kannada-lyricist-v-nagendra-prasad-interview-068535.html">« Previous</a>

    V Nagendra Prasad
    'ಮೆಜೆಸ್ಟಿಕ್' ಚಿತ್ರದ 'ಮುದ್ದು ಮನಸೇ ಪೆದ್ದು ಮನಸೇ...' ಹಾಡಿರಲಿ ಅಥವಾ 'ಎಕ್ಸ್ ಕ್ಯೂಸ್ ಮಿ' ಚಿತ್ರದ 'ಬ್ರಹ್ಮ ವಿಷ್ಣು ಶಿವ ಎದೆಯ ಹಾಲು ಕುಡಿದರೋ...' ಇರಲಿ, ಬಂದ ವಿಭಿನ್ನ ಅವಕಾಶಗಳಿಗೆ ನ್ಯಾಯ ಒದಿಗಿಸುವ ನಿಟ್ಟಿನಲ್ಲಿ ವಿಶಿಷ್ಟವಾಗಿ ಕೆಲಸ ಮಾಡಿದ್ದೇನೆ.

    * ನಿಮಗೆ ಇಷ್ಟವಾದ 'ಟಾಪ್ 15' ಹಾಡುಗಳನ್ನು ಹೆಸರಿಸಿ..

    * ಮುದ್ದು ಮನಸೇ ಪೆದ್ದು ಮನಸೇ... (ಮೆಜೆಸ್ಟಿಕ್)
    * ಬ್ರಹ್ಮ ವಿಷ್ಣು ಶಿವ ಎದೆಯ ಹಾಲು ಕುಡಿದರೋ... (ಎಕ್ಸ್ ಕ್ಯೂಸ್ ಮಿ)
    * ಪ್ರೀತ್ಸೆ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು.... (ಎಕ್ಸ್ ಕ್ಯೂಸ್ ಮಿ)
    * ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ.. .(ಸ್ವಾತಿ ಮುತ್ತು)
    * ಈ ಟಚ್ಚಲಿ ಏನೋ ಇದೆ.. .(ಧಮ್)
    * ಕಣ್ ಕಣ್ಣ ಸಲಿಗೆ.. .(ನವಗ್ರಹ)
    * ಮೋಡದ ಒಳಗೆ ಹನಿಗಳ ಬಳಗ... (ಪಯಣ)
    * ಹುಟ್ಟು ಎರಡಕ್ಷರ.. .(ಸತ್ಯ)
    * ಓ ಗುಣವಂತಾ... ನೀನೆಂದೂ ನನ್ನ ಸ್ವಂತ.. .(ಜೊತೆ ಜೊತೆಯಲಿ )
    * ಪಟ ಪಟ ಗಾಳಿಪಟ.. .(ಆಪ್ತಮಿತ್ರ)
    * ಸಂಗಾತಿ ಸಂಗಾತಿ... (ನಾನು ನಾನೇ)
    * ಗಗನಂ ಭುವನಂ... (ವಂಶಿ)
    * ಮಾತು ನನ್ನೋಳು.. .(ಗಜ)
    * ಮಲಗೆ ಮಲಗೆ ಗುಬ್ಬಿಮರಿ... (ನಲ್ಲ)
    * ಜೀ ಅಂದವೋ ಜೀರಿಂಬೆ ಬಂದವೋ.. .(ಬಿಡುಗಡೆ ಆಗಬೇಕಿರುವ ಚಿತ್ರ-ಮದರಂಗಿ)

    * ಗೀತಸಾಹಿತ್ಯದ ಹೊರತಾಗಿ ಬೇರೇನು ಬರೆದಿದ್ದೀರಿ?

    (ನಗು...) ನಾಟಕಗಳನ್ನು ಬರೆದಿದ್ದೇನೆ. 'ಅಷ್ಟಾವಕ್ರನ ಅಂತರಾಳ (ಏಕವ್ಯಕ್ತಿ ಪ್ರದರ್ಶನ)', 'ಕತ್ತಲೆಗಳು ಮಾತಾಡುತ್ತವೆ' ಎಂಬ ಎರಡು ನಾಟಕಗಳು ಹಾಗೂ '2004' ರಲ್ಲಿ 8 ಸಂಗೀತ ನಿರ್ದೇಶಕರುಗಳು ಹಾಡಿರುವ 'ಜೋ ಲಾಲಿ' ಆಲ್ಬಮ್ ಗೆ ಅಷ್ಟೂ ಸಾಹಿತ್ಯ ಬರೆದು ಸಂಗೀತ ನೀಡದ್ದೇನೆ. ಕೆಲವು ಸಿನಿಮಾಗಳನ್ನು ಕೂಡ ನಿರ್ದೇಶಿಸಿದ್ದೇನೆ. ಎರಡು ಚಿತ್ರಗಳಿಗೆ ಸಂಗೀತ ನಿಡಿದ್ದೇನೆ.

    *ನಿಮ್ಮ ನಿರ್ದೇಶನದ ಹಾಗೂ ಸಂಗೀತ ನೀಡಿರುವ ಸಿನಿಮಾಗಳು ಯಾವವು?

    'ಅಂಬಿ', 'ನಲ್ಲ', ಮೇಘವೇ 'ಮೇಘವೇ ಮೇಘವೇ', ಹಾಗೂ 'ವಿನಾಯಕ ಗೆಳೆಯರ ಬಳಗ' ಚಿತ್ರಗಳನ್ನು ನಿರ್ದೇಶಿಸಿದ್ದೇನೆ. 'ಅಂಬಿ' ಹಾಗೂ 'ಶಿಷ್ಯ' ಚಿತ್ರಗಳಿಗೆ ಸಂಗೀತ ನೀಡಿದ್ದೇನೆ.

    *ನಿಮ್ಮ ಜೀವನದ ಮರೆಯಲಾರದ ಘಟನೆ?

    ಆಕಸ್ಮಿಕವಾಗಿ ಘಟಿಸಿದ ಅದೊಂದು ಘಟನೆಯನ್ನು ನಾನು ಯಾವತ್ತಿಗೂ ಮರೆಯಲಾರೆ. ಮೊದಲ ಬಾರಿಗೆ ನಾನು ಖ್ಯಾತ ಸಂಗೀತ ನಿರ್ದೇಶಕರಾದ ಇಳೆಯರಾಜ ಅವರನ್ನು ಭೇಟಿಯಾಗಲೆಂದು ಚೆನ್ನೈಗೆ ಹೊರಟಿದ್ದೆ. ಫ್ಲೈಟ್ ನಲ್ಲಿ ಆಕಸ್ಮಿಕವಾಗಿ ಹಂಸಲೇಖ ಅವರು ಸಿಕ್ಕಿದರು. ಅವರ ಪಕ್ಕದಲ್ಲೇ ಕುಳಿತು ಪ್ರಯಾಣಿಸಿದ ಆ ಅನುಭವ ನನಗೆ ಚಿರಸ್ಮರಣೀಯ.

    *ಮುಂದಿನ ಕಸನು?

    ಮುಂದೆ ಹೆಚ್ಚುಹೆಚ್ಚು ಸಿನಿಮಾ ನಿರ್ದೇಶನ ಮಾಡುವ ಕನಸಿದೆ. ಸದ್ಯ ಒಂದು ಸಿನಿಮಾದ 'ಪ್ರೀ ಪ್ರೊಡಕ್ಷನ್' ಕೆಲಸ ನಡೆಯುತ್ತಿದೆ. ಎಂದಿನಂತೆ ಹಾಡು, ಚಿತ್ರಕಥೆ, ಸಂಭಾಷಣೆ ಹೀಗೆ ಸಾಹಿತ್ಯದ ಬರವಣಿಗೆ ಮುಂದುವರಿಸಲಿದ್ದೇನೆ. ಸಮಾಜಕ್ಕೆ ಒಳ್ಳೆಯದಾಗುವ, ಸಾಮಾಜಿಕವಾಗಿ ಬಹಳಷ್ಟು ಪರಿವರ್ತನೆ ತರಬಹುದಾದ ಅಪರೂಪದ ಸಿನಿಮಾವನ್ನು ನಿರ್ದೇಶಿಸುವ ಮಾಹನ್ ಕನಸಿದೆ, ಕಾಲ ಕೂಡಿ ಬರಬೇಕು ಅಷ್ಟೇ!
    ***

    <ul id="pagination-digg"><li class="previous"><a href="/music/kannada-lyricist-v-nagendra-prasad-interview-068535.html">« Previous</a>

    English summary
    V Nagendra Prasad is one of the most popular Lyricists in Kannada Film Industry. He started work with Music Director Gandharva in the movie 'Gajina Mane' with all songs. He won 'State Award' for the Song 'Huttu Eradakshara...', movie 'Satya'. Here is 'Oneindia' Interview with V Nagendra Prasad. Read more...&#13; &#13;
    Tuesday, October 2, 2012, 15:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X