»   » ಮರಿ ಟೈಗರ್ ಹಾಡು ಹಾಡಲಿರುವ 'ಜೋಗಿ' ಪ್ರೇಮ್

ಮರಿ ಟೈಗರ್ ಹಾಡು ಹಾಡಲಿರುವ 'ಜೋಗಿ' ಪ್ರೇಮ್

Posted by:
Subscribe to Filmibeat Kannada

Prem
ನಿರ್ದೇಶಕ ಪ್ರೇಮ್ ಸುಮ್ಮನೆ ಸುದ್ದಿಯಾಗುತ್ತಾರೆ ಎಂಬ ಅಪವಾದ ಇದೆಯಾದರೂ ಸುದ್ದಿಯಾಗುವಂತ ಕೆಲಸವನ್ನು ಅವರು ಆಗಾಗ ಮಾಡುತ್ತಿರುತ್ತಾರೆ ಎನ್ನುವದೇ ಹೆಚ್ಚು ಸೂಕ್ತ. ಇದೀಗ ಪ್ರೇಮ್ ಅವರಿಗೆ ಸಂಬಂಧಿಸಿ ಹೊಸದೊಂದು ಸುದ್ದಿ ಸುಳಿದಾಡಿದೆ. ಅದು ವಿನೋದ್ ಪ್ರಭಾಕರ್ ನಟನೆಯ 'ಮರಿ ಟೈಗರ್' ಚಿತ್ರಕ್ಕೆ ಪ್ರೇಮ್ ಹಾಡಲಿದ್ದಾರೆ ಎಂಬುದು. ಇತ್ತೀಚಿಗಷ್ಟೇ ಅವರು 'ಲವ್ಲಿ ಸ್ಟಾರ್ ಪ್ರೇಮ್' ನಟನೆಯ 'ಚಾರ್ ಮಿನಾರ್' ಚಿತ್ರಕ್ಕೆ ಹಾಡಲಿರುವ ಸುದ್ದಿ ಬಂದಿತ್ತು.

'ಮರಿ ಟೈಗರ್' ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಹಾಡಲಿರುವ ಹಾಡು ಇಂದು (13 ಸೆಪ್ಟೆಂಬರ್) ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ರೆಕಾರ್ಡ್ ಆಗಲಿದೆ. ಈ ಹಾಡನ್ನು ಯುವ ಗೀತಸಾಹಿತಿ ಕಮಲ್ ಸಾರಥಿ ರಚಿಸಿದ್ದಾರೆ. 'ಯಾವ ಕವಿಯು ತಂದೆ ತಾಯಿಯ ದೇವರೆಂದು ಕರೆದುಬಿಟ್ಟನೋ...' ಎಂದು ಪ್ರಾರಂಭವಾಗುವ ಹಾಡಿನ ಸಾಲು ಇದಾಗಿದ್ದು, ಪ್ರೇಮ್ ಅದನ್ನು ಹಾಡಲಿರುವುದು ವಿಶೇಷ.

ಈ ಮೊದಲು ನಿರ್ದೇಶಕ ಪ್ರೇಮ್ ತಮ್ಮ ನಿರ್ದೇಶನ ಹಾಗೂ ಶಿವರಾಜ್ ಕುಮಾರ್ ನಾಯಕತ್ವದ 'ಜೋಗಿ' ಚಿತ್ರದಲ್ಲಿ 'ಬೇಡುವೆನು ವರವನ್ನು ಕೊಡು ತಾಯೆ ಜನ್ಮವನು...' ಹಾಡನ್ನು ಹಾಡಿದ್ದರು. ಆ ಚಿತ್ರ ಸೂಪರ್ ಹಿಟ್ ಆದ ಕಾರಣಕ್ಕೋ ಅಥವಾ ಹಾಡನ್ನು ಪ್ರೇಮ್ ಹಾಡಿದ್ದಕ್ಕೋ, ಒಟ್ಟಿನಲ್ಲಿ ಹಾಡೂ ಕೂಡ ಜನರ ಬಾಯಲ್ಲಿ ನಲಿದಾಡಿ ಭಾರಿ ಪ್ರಶಂಸೆ ಗಳಿಸಿತ್ತು. ಆ ನಂತರ ಕೂಡ ಪ್ರೇಮ್ ತಮ್ಮ ನಟನೆಯ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರಕ್ಕಾಗಿ ಹಾಡಿದ್ದರು.

ಇದೀಗ ಆರ್ ಚಂದ್ರು ನಿರ್ದೇಶನದ 'ಚಾರ್ಮಿನಾರ್' ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಹಾಡಲಿರುವ ಹಾಡು ಹಾಗೂ ಸಾಹಿತ್ಯ ಸಾಕಷ್ಟು ಗಮನಸೆಳೆದಿದೆ. ಅವರು ಹಾಡುತ್ತಾರೆ ಎಂದರೆ ಸುದ್ದಿಯಾಗುವುದಂತೂ ಗ್ಯಾರಂಟಿ ಎಂಬುದು ಇಡೀ ಸ್ಯಾಂಡಲ್ ವುಡ್ ಗೇ ಗೊತ್ತಿದೆ. ಪ್ರೇಕ್ಷಕರಂತೂ ಪ್ರೇಮ್ ಕುಂತರೂ ನಿಂತರೂ ಗಮನಿಸುತ್ತಾರೆ ಎನ್ನಬಹುದು. ಅದಿರಲಿ, ಹಾಡು ಹಿಟ್ ಆಗಬಹುದೇ ಎಂಬುದಷ್ಟೇ ಸದ್ಯದ ಪ್ರಶ್ನೆ! (ಒನ್ ಇಂಡಿಯಾ ಕನ್ನಡ)

English summary
Director Prem Sings a song for Vinod Prabhakar upcoming movie titled 'Mari Tiger'. This song to compose by Rajesh Ramanath in his Studio itself and the lyrics is written by upcoming Lyricist Kamal Sarathi. After Charminor movie, Prem agreed to sing this song.
Please Wait while comments are loading...

Kannada Photos

Go to : More Photos