ಮೋಟು ಬೀಡಿ ಲುಂಗಿ ಸಾಂಗ್ ಹಾಡಿದ ಪುನೀತ್

Posted by:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಾಯಕರಾಗಿ ಈಗಾಗಲೆ ಕೇಳುಗರ ಮನಗೆದ್ದಿದ್ದಾರೆ. ಆಗೊಮ್ಮೆ ಈಗೊಮ್ಮೆ ಅವರು ಹಾಡಿರುವ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಕೂಡ ಆಗಿವೆ. ಇದೀಗ ಮತ್ತೊಮ್ಮೆ ಮೆಗಾಫೋನ್ ಕೈಗೆತ್ತಿಕೊಂಡಿದ್ದಾರೆ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಅವರ 'ಸವಾರಿ 2' ಚಿತ್ರಕ್ಕಾಗಿ.

ದಾವಣಗೆರೆಯ ಮಂಜು ದೊಡ್ಮನಿ, ಬೆಂಗಳೂರಿನ ಅನುಪಮಾ ಅವರು ರಚಿಸಿರುವ "ಮೋಟು ಬೀಡಿ ಹಚ್ಕೊಂಡು, ಲುಂಗಿ ಟೈಟ್ ಮಾಡ್ಕೊಂಡು ನಾಲ್ಕು ಸ್ಟೆಪ್ ಹಾಕ್ಕೊಂಡು ಒಂಟೈತೆ ಸವಾರಿ.." ಎಂಬ ಹಾಡನ್ನು ಹಾಡಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಈ ಹಾಡನ್ನು ಆಕಾಶ್ ಸ್ಟುಡಿಯೋದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.


ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಜೇಕಬ್ ಫಿಲಂಸ್ ಲಾಂಛನದಲ್ಲಿ ಕಥೆ-ಚಿತ್ರಕಥೆ-ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿರುವ ಜೇಕಬ್ ವರ್ಗೀಸ್ ರವರ 'ಸವಾರಿ 2' ಚಿತ್ರದ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ.

ಈ ಚಿತ್ರದ ಸಂಭಾಷಣೆ-ಮಂಜು ಮಾಂಡವ್ಯ, ಛಾಯಾಗ್ರಹಣ-ಶಶಿಕುಮಾರ್, ಸಾಹಸ-ಡಿಪರೆಂಟ್ ಡ್ಯಾನಿ, ನೃತ್ಯ-ರಘು-ಅರವಿಂದ, ಕಲೆ-ಕುಮಾರ್, ಕೋ-ಡೈರೆಕ್ಟರ್-ನಂದೀಶ್, ನಿರ್ವಹಣೆ-ಸುಂದರ ರಾಜ್-ಗಗನಮೂರ್ತಿ, ಸಾಹಿತ್ಯ-ಜಯಂತ್ ಕಾಯ್ಕಿಣಿ, ಕವಿರಾಜ್, ಡಾ.ವಿ. ನಾಗೇಂದ್ರ ಪ್ರಸಾದ್.

Puneeth Rajkumar

ಪಾತ್ರವರ್ಗದಲ್ಲಿ ಶ್ರೀನಗರ ಕಿಟ್ಟಿ, ಶೃತಿ ಹರಿಹರನ್, ಕರಣ್ ರಾವ್, ಅಬ್ಬಾಸ್, ಮಧುರಿಮಾ ಬ್ಯಾನರ್ಜಿ, ಗಿರೀಶ್ ಕಾರ್ನಾಡ್, ಸಾಧುಕೋಕಿಲ, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ. 'ಚಲಿಸುವ ಮೋಡಗಳು' ಚಿತ್ರದಲ್ಲಿ "ಕಾಣದಂತೆ ಮಾಯವಾದನು.." ಮೂಲಕ ಆರಂಭವಾದ ಅವರ ಗಾಯನ ಬದುಕು ಬಳಿಕ ಬೆಟ್ಟದ ಹೂವು, ಅಪ್ಪು, ಜೊತೆ ಜೊತೆಯಲಿ, ವಂಶಿ, ಜಾಕಿ, ಲವಕುಶ, ಮೈಲಾರಿ, ಶೈಲೂ, ಅಲೆ ಹಾಗೂ ಟೋನಿ ಚಿತ್ರಗಳಿಗೆ ಹಾಡಿದ್ದಾರೆ. (ಒನ್ಇಂಡಿಯಾ ಕನ್ನಡ)

Read more about: puneeth rajkumar, srinagara kitty, song, music, ಪುನೀತ್ ರಾಜ್ ಕುಮಾರ್, ಶ್ರೀನಗರ ಕಿಟ್ಟಿ, ಹಾಡು, ಸಂಗೀತ

English summary
Power Star Puneet Rajkumar has again wielded the megaphone. This time the actor has crooned another song for Sandalwood's forthcoming movie Savaari 2, which is touted to be the sequel of Savaari.
Please Wait while comments are loading...
Your Fashion Voice

Kannada Photos

Go to : More Photos