»   » ಪುನೀತ್ ಕಾರಲ್ಲಿ ಸದಾ ಪ್ಲೇ ಆಗುವ ಹಾಡು ಇದೇ..!

ಪುನೀತ್ ಕಾರಲ್ಲಿ ಸದಾ ಪ್ಲೇ ಆಗುವ ಹಾಡು ಇದೇ..!

Posted by:
Subscribe to Filmibeat Kannada

ಹಾಡುಗಳನ್ನ ಕೇಳುವುದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೇವರಿಟ್ ಹಾಬಿ. ಶೂಟಿಂಗ್ ಟೈಮ್ ನಲ್ಲಿ ಕೊಂಚ ಗ್ಯಾಪ್ ಸಿಕ್ಕಿದ್ದರೂ, ಅಪ್ಪು ಮೈಂಡ್ ರಿಲ್ಯಾಕ್ಸ್ ಮಾಡಿಕೊಳ್ಳುವುದು ಸುಮಧುರ ಹಾಡುಗಳನ್ನ ಕೇಳುವ ಮೂಲಕ.

ಹೀಗಿರುವಾಗ, ಅಪ್ಪು ಕಾರಲ್ಲಿ ಜರ್ನಿ ಮಾಡುವಾಗ ಸುಮ್ಮನೆ ಓಡಿಸುವುದುಂಟಾ..!? ಅಪ್ಪುಗೆ ಜೋಷ್ ಬರುವಂತಹ ಸ್ಪೆಷಲ್ ಪ್ಲೇ ಲಿಸ್ಟ್ ಅವರ ಅಚ್ಚುಮೆಚ್ಚಿನ ಕಾರ್ ನಲ್ಲಿದೆ. ಆ ಎಲ್ಲಾ ಹಾಡುಗಳನ್ನ ಬಿಟ್ಟು, ಅಪ್ಪು ಇದೀಗ ಬಿಟ್ಟೂಬಿಡದಂತೆ ಕೇಳುತ್ತಾ, ಗುನುಗುತ್ತಿರುವ ಹಾಡು ಇದೇ...'ಕೃಷ್ಣಲೀಲಾ' ಚಿತ್ರದ 'ಪೆಸಲ್ ಮ್ಯಾನ್'.


Puneeth Rajkumar

ಹೌದು, ಖುದ್ದು ಅಪ್ಪು ಹಾಡಿರುವ 'ಪೆಸಲ್ ಮ್ಯಾನ್' ಹಾಡು ಅವರಿಗೆ ಸಿಕ್ಕಾಪಟ್ಟೆ ಇಷ್ಟವಾಗಿ ಬಿಟ್ಟಿದೆ. ಹಾಡಿನ ರಾಗ-ತಾಳ ಸಖತ್ ಕಿಕ್ ಕೊಡುವುದರಿಂದ 'ಪೆಸಲ್ ಮ್ಯಾನ್' ಪುನೀತ್ ಪಾಲಿಗೆ ಸಿಕ್ಕಾಪಟ್ಟೆ ಪೆಸಲ್ ಆಗಿಬಿಟ್ಟಿದೆ. [ನಿರ್ಮಾಪಕ ಅಜೇಯ್ ರಾವ್ ಜೇಬು ಖಾಲಿ ಖಾಲಿ!]


'ಪೆಸಲ್ ಮ್ಯಾನ್' ರೆಕಾರ್ಡ್ ಆದ್ಮೇಲೆ, 'ಕೃಷ್ಣಲೀಲಾ' ಚಿತ್ರದ ನಿರ್ದೇಶಕ ಶಶಾಂಕ್ ರಿಂದ ಸಿ.ಡಿ ಮಾಡಿಸಿ ತರಿಸಿಕೊಂಡ ಪುನೀತ್, ಕಾರ್ ಹತ್ತಿದ ಮೇಲೆ ತಕ್ಷಣ ಪ್ಲೇ ಮಾಡುವ ಹಾಡು 'ಪೆಸಲ್ ಮ್ಯಾನ್' ಅಂತೆ. [ಧ್ವನಿ ಸಾಂದ್ರಿಕೆ ವಿಮರ್ಶೆ: ಮಸ್ತ್ ಹಾಡುಗಳ ಗುಚ್ಛ 'ಕೃಷ್ಣಲೀಲಾ']


ಅಪ್ಪು ಈ ಲೆವೆಲ್ ಗೆ ಫಿದಾ ಆಗಿರುವ ಈ ಹಾಡನ್ನ ನೀವು ಕೇಳಿರ್ತಿರಾ. ಆದ್ರೆ, ಅದನ್ನ ನೋಡುವ ಚಾನ್ಸ್ ಇಲ್ಲಿದೆ. ಅಜೇಯ್ ರಾವ್ ಎಷ್ಟು 'ಪೆಸಲ್' ಆಗಿ ಕಾಣಿಸಿಕೊಂಡವ್ರೆ ಅಂತ ಹಾಡಲ್ಲಿ ಒಮ್ಮೆ ನೀವೇ ನೋಡಿಬಿಡಿ.


Puneeth Rajkumar

ಟಾಪ್ ಟು ಬಾಟಂ ಮಾಸ್ ಸ್ಟೈಲ್ ನಲ್ಲಿ ರೆಡಿಯಾಗಿರುವ 'ಪೆಸಲ್ ಮ್ಯಾನ್' ಸಾಂಗಲ್ಲಿ ಅಜೇಯ್ ಟಪ್ಪಾಂಗುಚ್ಚಿ ಸ್ಟೆಪ್ಸ್ ನೋಡ್ತಾ, ಅಪ್ಪು ವಾಯ್ಸ್ ಕೇಳ್ತಿದ್ರೆ, ಎಂಥವರಿಗೂ ಎದ್ದು ಕುಣಿಯಂಗಾಗುತ್ತೆ. ಹಾಗಿದೆ ಶ್ರೀಧರ್.ವಿ.ಸಂಭ್ರಮ್ ಸಂಗೀತ. ['ಕೃಷ್ಣಲೀಲಾ' ಚಿತ್ರಕ್ಕೆ ಸ್ಪೂರ್ತಿ ನೀಡಿರುವ ನೈಜ ಕಥೆ ಯಾವುದು?]


ಶಶಾಂಕ್ ನಿರ್ದೇಶನದಲ್ಲಿ ಅಜೇಯ್ ರಾವ್, ಮಯೂರಿ ನಟಿಸಿರುವ ನೈಜಕಥೆ ಆಧರಿಸಿರುವ 'ಕೃಷ್ಣಲೀಲಾ' ಬಿಡುಗಡೆಗೆ ಸಿದ್ದವಾಗಿದೆ. ಈ ತಿಂಗಳ ಅಂತ್ಯದಲ್ಲಿ 'ಕೃಷ್ಣಲೀಲಾ' ತೆರೆಗೆ ಬರುವ ಸಾಧ್ಯತೆ ಇದೆ. (ಫಿಲ್ಮಿಬೀಟ್ ಕನ್ನಡ)

English summary
Ajai Rao starrer Krishna Leela has become Talk of the Town from the song Pesal Man. Puneeth Rajkumar has crooned this song, which is his favorite as well. Watch the video of Pesal Man song here.
Please Wait while comments are loading...

Kannada Photos

Go to : More Photos