»   » ಅಣ್ಣಾವ್ರ ಅಭಿಮಾನಿ 'ಕನಕ' ಸಾಂಗ್ ರೆಕಾರ್ಡಿಂಗ್ ಆರಂಭ

ಅಣ್ಣಾವ್ರ ಅಭಿಮಾನಿ 'ಕನಕ' ಸಾಂಗ್ ರೆಕಾರ್ಡಿಂಗ್ ಆರಂಭ

Written by: ರಾಘವೇಂದ್ರ.ಸಿ.ವಿ
Subscribe to Filmibeat Kannada

'ಕನಕ' ಅಣ್ಣಾವ್ರ ಅಭಿಮಾನಿ.... ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಮತ್ತು ಆರ್.ಚಂದ್ರು ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಸಿನಿಮಾ. ಅಣ್ಣಾವ್ರ ಅಭಿಮಾನಿಯಾಗಿ ದುನಿಯಾ ವಿಜಯ್ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಪ್ರಮುಖ ಆಕರ್ಷಣೆ.

'ಲಕ್ಷ್ಮಣ' ಚಿತ್ರದ ನಂತರ ಮತ್ತೊಂದು ವಿಭಿನ್ನ ಕಥಾಹಂದರವುಳ್ಳ 'ಕನಕ' ಸಿನಿಮಾಗೆ ಕೈಹಾಕಿರುವ ನಿರ್ದೇಶಕ ಆರ್.ಚಂದ್ರು, ನಟ ವಿಜಯ್ ಅವರನ್ನು ವಿಶೇಷ ಪಾತ್ರದಲ್ಲಿ ತೋರಿಸುವ ಪ್ರಯತ್ನದಲ್ಲಿದ್ದಾರೆ. ತಮ್ಮ ಪ್ರತಿ ಚಿತ್ರದಲ್ಲೂ ನೈಜತೆಯತ್ತ ಹೆಚ್ಚು ಗಮನ ಹರಿಸುವ ಆರ್.ಚಂದ್ರು 'ಕನಕ' ಚಿತ್ರದಲ್ಲೂ ಅದನ್ನೇ ಮುಂದುವರೆಸಿದ್ದಾರೆ.['ಡಾ.ರಾಜ್ ಕುಮಾರ್ ಅಭಿಮಾನಿ' ಕುರಿತು ಆರ್ ಚಂದ್ರು ಹೊಸ ಸಿನಿಮಾ]

R.Chandru directorial 'Kanaka' Song Recording starts

'ಲೂಸಿಯಾ' ಸಿನಿಮಾದ ಮೂಲಕ ಗಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾದ ನವೀನ್ ಸಜ್ಜು, 'ಕನಕ' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಸಂಗೀತ ನಿರ್ದೇಶನ ಮಾಡುತ್ತಿರುವುದು ಈ ಸಿನಿಮಾದ ಮತ್ತೊಂದು ವಿಶೇಷ.[ಆರ್ ಚಂದ್ರು ಚಿತ್ರದಲ್ಲಿ 'ರಾಜ್ ಕುಮಾರ್ ಫ್ಯಾನ್' ಯಾರು ಗೊತ್ತಾ?]

R.Chandru directorial 'Kanaka' Song Recording starts

ಈಗಾಗಲೇ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಕಾರ್ಯ ಆರಂಭಗೊಂಡಿದ್ದು, ತಮ್ಮ ಚೊಚ್ಚಲ ಸಂಗೀತ ನಿರ್ದೇಶನದಲ್ಲಿ ಅದ್ಭುತ ಹಾಡುಗಳನ್ನು ನೀಡಲು ನವೀನ್ ಸಜ್ಜು ತಯಾರಿ ನಡೆಸಿದ್ದಾರೆ.[ಆರ್ ಚಂದ್ರು ಅವರ 'ಕನಕ' ಚಿತ್ರದಲ್ಲಿ ಅನಿಲ್-ಉದಯ್.!]

R.Chandru directorial 'Kanaka' Song Recording starts

ನಿರ್ದೇಶಕರೇ ಹೇಳುವಂತೆ ಇದು ಡಾ.ರಾಜ್ ಸೇರಿದಂತೆ ಇನ್ನೂ ಹಲವು ಹಿರಿಯ ನಟರಿಗೆ ಗೌರವಾರ್ಪಣೆ ಮಾಡುವ ಸಿನಿಮಾ. ಅಲ್ಲದೆ ಇದು ದುನಿಯಾ ವಿಜಯ್ ಮತ್ತು ಆರ್.ಚಂದ್ರು ಕಾಂಬಿನೇಷನ್ ನ ಮೊದಲ ಚಿತ್ರವಾಗಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಹೆಚ್ಚಾಗಿದ್ದು ಅದನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.

English summary
The Song Recording of R.Chandru directorial 'Kanaka' started in Prasad Recording Studio, Bengaluru. 'Kanaka' features Duniya Vijay in lead.
Please Wait while comments are loading...

Kannada Photos

Go to : More Photos