twitter
    For Quick Alerts
    ALLOW NOTIFICATIONS  
    For Daily Alerts

    ಅಂಧರ ವಿಶ್ವಕಪ್ ಕ್ರಿಕೆಟ್‌ಗಾಗಿ ಎಸ್ಪಿಬಿ ಸಂಗೀತ ಸುಧೆ

    By Rajendra
    |

    SPB Music journey
    ಅಂಧರ ಪ್ರಪ್ರಥಮ ಟಿ-20 ವಿಶ್ವಕಪ್ ಕ್ರಿಕೆಟ್‌ 2012ರ ಡಿಸೆಂಬರ್ ನಲ್ಲಿ ನಡೆಯಲಿದೆ. ಈ ಕ್ರಿಕೆಟ್ ಪಂದ್ಯಾವಳಿಯನ್ನು ಸಮರ್ಥನಂ ಅಂಗವಿಕಲರ ಸಂಸ್ಥೆ ಆಯೋಜಿಸಿದೆ. ಈ ವಿಭಿನ್ನ ಕ್ರಿಕೆಟ್ ಟೂರ್ನಿಗಾಗಿ ನಿಧಿ ಸಂಗ್ರಹಿಸಲು ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕೈಜೋಡಿಸಿದ್ದಾರೆ.

    ಬೆಂಗಳೂರು ಅರಮನೆ ಮೈದಾನದಲ್ಲಿ ಎಸ್ಪಿಬಿ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ ಸಂಗ್ರಹವಾದ ಹಣ ಅಂಧರ ಕ್ರಿಕೆಟ್ ಟೂರ್ನಿಗೆ ಬಳಕೆಯಾಗಲಿದೆ. ಎಸ್ಪಿಬಿ ಅವರು ತಮ್ಮ ಸುಮಧುರ ಕಂಠದಿಂದ ನೆರೆದಿದ್ದ ಎಲ್ಲ ಪ್ರೇಕ್ಷಕರನ್ನು ಮನರಂಜಿಸಿದರು.

    ಅವರ ಒಂದು ಸಂಗೀತದ ಸವಿ ಅಲ್ಲಿ ನೆರೆದಿದ್ದ ಎಲ್ಲ ವಿಕಲಚೇತನರಿಗೆ ಸ್ಫೂರ್ತಿದಾಯಕವಾಗಿ ಮತ್ತು ಅವರ ಸಬಲೀಕರಣಕ್ಕೆ ಎಸ್.ಪಿ.ಬಿಯವರಿಗಿರುವ ಕಳಕಳಿಯನ್ನು ಎತ್ತಿ ತೋರುವಂತ ಕಾರ್ಯಕ್ರಮ ಇದಾಗಿತ್ತು. ಇಂತಹ ವಿಶೇಷ ಕಾರ್ಯಕ್ರಮಕ್ಕೆ ಸಾವಿರಾರು ಜನ ಎಸ್ಪಿಬಿ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ಎಲ್ಲ ಕಲಾವಿದರು ಭಾಗವಹಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸ್ಫೂರ್ತಿ ತುಂಬಿದರು.

    ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಹಾಂತೇಶ ಜಿ.ಕೆ ಅವರು, "ಟಿ-20 ಅಂಧರ ವಿಶ್ವಕಪ್ ಗೆ ತಾವೆಲ್ಲ ಬೆಂಬಲವನ್ನು ನೀಡಿ ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಅತೀವ ಸಂತೋಷದ ವಿಷಯ. ಕ್ರೀಡಾ ಕ್ಷೇತ್ರದಲ್ಲಿ ಅಂಧರ ಪ್ರತಿಭೆಯನ್ನು ಜನಪ್ರಿಯಗೊಳಿಸುವಲ್ಲಿ ಈ ಕಾರ್ಯಕ್ರಮ ಪ್ರಮುಖ ವೇದಿಕೆಯಾಗಿದೆ" ಎಂಬ ತಮ್ಮ ಅಂತರಾಳದ ಮಾತನ್ನು ಬಿಚ್ಚಿಟ್ಟರು.

    ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಬಿಎಂಪಿ ಮೇಯರ್ ವೆಂಕಟೇಶಮೂರ್ತಿ ಅವರು ಅಂಧರ ಟಿ-20 ವಿಶ್ವಕಪ್ ಲಾಂಛನವನ್ನು ಅನಾವರಣಗೊಳಿಸಿದರು. ಅವರೊಂದಿಗೆ ಎಸ್.ಪಿ.ಬಾಲಸುಬ್ರಮಣ್ಯಂ, ಮಾಜಿ ಕ್ರಿಕೆಟಿಗರಾದ ಸಯ್ಯದ್ ಕೀರ್ಮಾನಿ ಮತ್ತು ಬಿ.ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.

    ಅದೇ ರೀತಿ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ, ಪದ್ಮಭೂಷಣ ಸಂಗೀತಾ ಕಲಾನಿಧಿ ಆರ್.ಕೆ ಶ್ರೀಕಾಂತನ್, ಪದ್ಮಭೂಷಣ ಡಾ. ಬಿ.ಸರೋಜಾ ದೇವಿ, ಹರ್ಷ ಮತ್ತು ಹರಿ.ಎಲ್.ಖೊಡೆ ಬ್ಯೂಜಿನಸ್ ಐಕಾನ್ ಇವರೆಲ್ಲರ ಉಪಸ್ಥಿತಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸ್ಫೂರ್ತಿ ನೀಡಿತು. (ಒನ್ ಇಂಡಿಯಾ ಕನ್ನಡ)

    English summary
    Legendary singer S P Balasubramaniam in a rare show, was the main attraction for a concert organised to raise funds for the first ever T20 World Cup Cricket for the visually impaired in Bangalore by Samarthanam- the trust for the disabled.
    Monday, August 27, 2012, 13:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X