»   » ಕನ್ನಡಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್

ಕನ್ನಡಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್

Written by: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈ ರೀತಿಯ ಪ್ರಯೋಗಗಳು ಆಗಾಗ ಆಗುತ್ತಲೇ ಇರುತ್ತವೆ. ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ, ಆದರೆ ನಟನಾಗಿ ಅಲ್ಲ ಗಾಯಕನಾಗಿ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮುಂದಿನ 'ವಜ್ರಕಾಯ' ಚಿತ್ರಕ್ಕಾಗಿ ಅವರು "ವೈ ದಿ ಕೊಲವರಿ ಡಿ..." ತರಹದ ಹಾಡನ್ನು ಹಾಡಲಿದ್ದಾರಂತೆ. ಈಗಾಗಲೆ ಎರಡು ಲಿರಿಕ್ಸ್ ಸಿದ್ಧ ಮಾಡಿಕೊಂಡಿದ್ದು ಎರಡೂ ಅವರಿಗೆ ಇಷ್ಟವಾಗಿದೆಯಂತೆ. ಫೈನಲ್ ಆಗಿ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು ಎನ್ನುತ್ತವೆ ಮೂಲಗಳು. ['ವಜ್ರಕಾಯ'ನಾದ ಕರುನಾಡ ಚಕ್ರವರ್ತಿ ಶಿವಣ್ಣ]

Actor Dhanush

'ವಜ್ರಕಾಯ' ಚಿತ್ರಕ್ಕೆ ನಿರ್ದೇಶಕರಾಗಿ ಬದಲಾದ ನೃತ್ಯ ನಿರ್ದೇಶಕ ಎ ಹರ್ಷ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ. ಈಗಾಗಲೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅರ್ಜುನ್ ಜನ್ಯ, ಹರ್ಷ ಅವರು ಚೆನ್ನೈನಲ್ಲಿದ್ದು ಧನುಷ್ ಜೊತೆಗಿನ ಹಾಡಿನ ರೆಕಾರ್ಡಿಂಗ್ ಸಿದ್ಧತೆಯಲ್ಲಿದ್ದಾರೆ.

ತಮಿಳಿನ '3' ಚಿತ್ರಕ್ಕಾಗಿ ಧನುಷ್ ಬರೆದು ಹಾಡಿದ "ವೈ ದಿಸ್ ಕೊಲವರಿ ಡಿ..." ಹಾಡು ಯೂಟ್ಯೂಬ್ ನಲ್ಲಿ ಭಾರಿ ಜನಪ್ರಿಯತೆ ಪಡೆದಿತ್ತು. ಇದೇ ಮೊದಲ ಬಾರಿಗೆ ಅವರು ಕನ್ನಡ ಹಾಡನ್ನು ಹಾಡಲು ಮುಂದಾಗಿದ್ದಾರೆ.

'ಭಜರಂಗಿ' ಚಿತ್ರದ ಬಳಿಕ ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ ಇದಾಗಿದೆ. ವಜ್ರಕಾಯದಲ್ಲಿ ಶಿವಣ್ಣನನ್ನು ಮೂರು ಶೇಡ್ ನಲ್ಲಿ ತೋರಿಸಲಾಗುತ್ತದೆ. ಹಾಸ್ಯ ಮತ್ತು ಸೆಂಟಿಮೆಂಟ್ ಎರಡೂ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆಂದು ಚಿತ್ರದ ನಿರ್ದೇಶಕ ಹರ್ಷ ಹೇಳಿದ್ದಾರೆ.

English summary
Tamil actor Dhanush all set to sing a song in Kannada movie Vajrakaya, which leads Hat Trick Hero Shivrajkumar and directed by A Harsha. Sources says, The actor agreed to sing a song. Music by Arjun Janya.
Please Wait while comments are loading...

Kannada Photos

Go to : More Photos