» 

ರಂಗು ಮಾಸಿತು ಶಾಹಿಯ ಗೀಚಲು-ಉಳಿದವರು ಕಂಡಂತೆ

Posted by:
 
Share this on your social network:
   Facebook Twitter Google+    Comments Mail

ಮಳೆಮರೆತು ತಾನಾಗಿ ಹಸಿರಾಗಿ ನಿಂತಾಗ ಈ ಭೂಮಿ... ಸಲಹೇನೆ ಕೊಡಬೇಡ ದೇವರೆ ನೀನಿಲ್ಲಿ ಹಂಗಾಮಿ... ಕಣ್ಣೀರೆ ನಿನ್ನ ಸಂತೇಗೆ ಕರೆದಾಗ, ಬೇಜಾರಿನಲ್ಲಿ ಸಜ್ಜಾದೆಯ? ನೋವಿರುವ ಗಾಯ ಬೆರಳಲ್ಲೆ ಇರುವಾಗ, ಬಿಡಿಸೋದು ಕಲಿತೆ ರಂಗೋಲಿಯ? ಮಿಂಚೊಂದು ಕಿಡಿಕಾರಿ ಆಕಾಶ ಚೆಲುವಾಯ್ತು ಹೇಗೆ? ಬೆಂಕಿಯ ಕಡಿಗೀರಿ ಮನೆ ತುಂಬ ಬೆಳಕಾದ ಹಾಗೆ..

ಮೇಲ್ಕಂಡ ಸಾಲುಗಳನ್ನು ಓದುತ್ತಿದ್ದಾರೆ ವಾಹ್ ! ಎನ್ನದೆ ಇರಲಾಗುವುದಿಲ್ಲ. ನಿರ್ದೇಶಕ ಸುನಿ ಅವರ ಸುವಿನ್ ಸಿನಿಮಾಸ್ ನಿರ್ಮಾಣದ ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಸಿನಿಮಾದ ಧ್ವನಿ ಸುರಳಿ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಫೆ.7 ರಂದು ಆಡಿಯೋ ರಿಲೀಸ್ ಆಗಬೇಕಿತ್ತು. ಅನಿವಾರ್ಯ ಕಾರಣಗಳಿಂದ ಫೆ.10 ರಂದು ಧ್ವನಿ ಸುರಳಿ ಅಭಿಮಾನಿಗಳ ಕೈ ತಲುಪಲಿದೆ. ಡಾ. ರಾಜ್ ಕುಟುಂಬದವರೊಬ್ಬರು( ಶಿವರಾಜ್ ಅಥವಾ ಪುನೀತ್) ಮುಖ್ಯ ಅತಿಥಿಗಳಾಗಿರುತ್ತಾರೆ. ಉಳಿದಂತೆ ನಮ್ಮನ್ನು ಮೆಚ್ಚಿ ತಪ್ಪುಗಳನ್ನು ತಿದ್ದಿ ಬೆಂಬಲಿಸುವ ಎಲ್ಲಾ ಅಭಿಮಾನಿಗಳು, ಚಿತ್ರ ತಂಡ ಅಂದಿನ ಕಾರ್ಯಕ್ರಮದಲ್ಲಿರುತ್ತದೆ ಎಂದು ನಿರ್ದೇಶಕ ಸುನಿ ಹೇಳಿದ್ದಾರೆ.

ಉಳಿದವರು ಕಂಡಂತೆ ಚಿತ್ರದ ಟೇಲರ್ ತ್ರಿವೇಣಿ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ರಿಲೀಸ್ ಆಗಿ ಅಭಿಮಾನಿಗಳ ಮನಸೂರೆಗೊಂಡಿದೆ. ತುಗ್ಲಕ್, Lets kill gandhi ರಕ್ಷಿತ್ ಶೆಟ್ಟಿ ನಂತರ ಸಿಂಪಾಲ್ಲಾಗೊಂದು ಲವ್ ಸ್ಟೋರಿ ನಂತರ ಸಿಂಪಲ್ ಸ್ಟಾರ್ ಆಗಿ ಬೆಳೆದು ಈಗ 'ಉಳಿದವರು ಕಂಡಂತೆ' ಮೂಲಕ ಹೊಸ ಟ್ರೆಂಡ್ ಹುಟ್ಟಿಹಾಕಿದರು. ಉಳಿದವರು ಕಂಡಂತೆ ಚಿತ್ರದ ಹಾಡುಗಳ ಕೆಲ ಸಾಲುಗಳು ಕೂಡಾ ರಕ್ಷಿತ್ ಶೆಟ್ಟಿ ಫೇಸ್ ಬುಕ್ ನಲ್ಲಿ ಹಾಕುತ್ತಿದ್ದು, ಕ್ರೇಜ್ ಇನ್ನೂ ಜಾರಿಯಲ್ಲಿಡಲಾಗಿದೆ.

Topics: rakshit shetty, ulidavaru kandante, tara, sheethal shetty, trailor, video, malpe, ಉಳಿದವರು ಕಂಡಂತೆ, ರಕ್ಷಿತ್ ಶೆಟ್ಟಿ, ತಾರಾ, ಶೀತಲ್ ಶೆಟ್ಟಿ

Kannada Photos

Go to : More Photos