»   » ಪ್ರೇಮಿಗಳ ದಿನ ಹೊಸ ಪ್ರಣಯ ರಾಜನ ನೋಡಿ

ಪ್ರೇಮಿಗಳ ದಿನ ಹೊಸ ಪ್ರಣಯ ರಾಜನ ನೋಡಿ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮನಸಾ ಬಿಚ್ಚಿಟ್ಟವನ, ಬರೆಯಲು ಮೌನದ ಕವನ, ಪದಗಳೆ ಇಲ್ಲದ ಸಾಲ, ಇಳಿಸಲು ಹಾಳೆಯ ಮೇಳ ಸೇರಲು, ರಂಗು ಮಾಸಿತು ಶಾಹಿಯ ಗೀಚಲು...ಘಾಟಿಯ ಇಳಿದು ತೆಂಕಣಕ್ಕೆ ಬಂದಿರುವ ಹೊಸ 'ಪ್ರಣಯ ರಾಜ' ಕಿಶೋರ್ ಅವರ ಹಾವ ಭಾವಕ್ಕೆ ಕನ್ನಡ ಸಿನಿ ರಸಿಕರು ಬಹುಪರಾಕ್ ಹೇಳಿದ್ದಾರೆ.

ಯುವ ಸಂಗೀತಗಾರ ಅಜನೀಶ್ ಲೋಕನಾಥ್ ಅವರು ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಚಿತ್ರಕ್ಕೆ ನೀಡಿರುವ ಸಂಗೀತ ಸಂಯೋಜನೆ ಮನಸೂರೆಗೊಂಡಿದೆ. ಇನ್ನೂ ಅಚ್ಚ ಕನ್ನಡದ ಸ್ವಚ್ಛ ಗೀತ ಸಾಹಿತ್ಯ ಎಲ್ಲರಿಗೂ ಮೆಚ್ಚುಗೆಯಾಗಿದೆ. ಆನಂದ್ ಆಡಿಯೋ ಹೊರತಂದಿರುವ 'ಘಾಟಿಯ ಇಳಿದು' ಹಾಡು ಸಾಮಾಜಿಕ ಜಾಲ ತಾಣಗಳಲ್ಲಿ ಹೊಸ ಕಿಚ್ಚು ಎಬ್ಬಿಸಿದೆ. ಪ್ರೇಮಿಗಳ ದಿನದ ಸ್ಪೆಷಲ್ ಆಗಿ ಈ ಹಾಡು ಇಲ್ಲಿದೆ ನೋಡಿ ಆನಂದಿಸಿ.. ಈಗಾಗಲೇ ನೋಡಿದವರು ಮತ್ತೊಮ್ಮೆ ನೋಡಿ ಆಯ್ಯಯ್ಯೋ ನಗ್ತಳಾ ಎನ್ನುವಾಗ ಕಿಶೋರ್ ನೀಡುವ ಪ್ರತಿಕ್ರಿಯೆ ಮತ್ತೆ ಮತ್ತೆ ನೋಡಬೇಕಿನಿಸದಿದ್ದರೆ ನಿಮ್ಮದ್ದು ಕಲ್ಲು ಹೃದಯವೇ ಸೈ

ಉಳಿದವರು ಕಂಡಂತೆ ಚಿತ್ರದ ಟೇಲರ್ ತ್ರಿವೇಣಿ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ರಿಲೀಸ್ ಆಗಿ ಅಭಿಮಾನಿಗಳ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಹಾಡುಗಳು ರಾಗ, ಹಂಗಾಮ ಮುಂತಾದ ವೆಬ್ ತಾಣಗಳಲ್ಲಿ ಕೇಳಲು ಲಭ್ಯವಿದೆ. ರಿಂಗ್ ಟೋನ್ ಗಳು ಡೌನ್ ಲೋಡ್ ಗೆ ಬಿಡಲಾಗಿದೆ. ಘಾಟಿಯ ಇಳಿದು ಹಾಡು ಸದ್ಯಕ್ಕೆ ಯುಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

 ಉಳಿದವರು ಕಂಡಂತೆ ತಂಡದಿಂದ ಜನ ಸಂಪರ್ಕ
  

ಉಳಿದವರು ಕಂಡಂತೆ ತಂಡದಿಂದ ಜನ ಸಂಪರ್ಕ

ತುಗ್ಲಕ್, Lets kill gandhi ರಕ್ಷಿತ್ ಶೆಟ್ಟಿ ನಂತರ ಸಿಂಪಾಲ್ಲಾಗೊಂದು ಲವ್ ಸ್ಟೋರಿ ನಂತರ ಸಿಂಪಲ್ ಸ್ಟಾರ್ ಆಗಿ ಬೆಳೆದು ಈಗ 'ಉಳಿದವರು ಕಂಡಂತೆ' ಮೂಲಕ ಹೊಸ ಟ್ರೆಂಡ್ ಹುಟ್ಟಿಹಾಕುತ್ತಿದ್ದಾರೆ. ಉಳಿದವರು ಕಂಡಂತೆ ಚಿತ್ರದ ಹಾಡುಗಳ ಕೆಲ ಸಾಲುಗಳು ಕೂಡಾ ರಕ್ಷಿತ್ ಶೆಟ್ಟಿ ಫೇಸ್ ಬುಕ್ ನಲ್ಲಿ ಹಾಕುತ್ತಿದ್ದು, ಕ್ರೇಜ್ ಇನ್ನೂ ಜಾರಿಯಲ್ಲಿಡಲಾಗಿದೆ. ಹಾಡುಗಳ ಸಾಹಿತ್ಯ,

ಸಂಗೀತದ ಲೋಪದೋಷದ ಬಗ್ಗೆ ಸಂಗೀತಗಾರ ಅಜನೀಶ್ ಅವರು ಉತ್ತರಿಸುತ್ತಾ ಜನರೊಡನೆ ಸದಾ ಸಂಪರ್ಕ ಕಾಯ್ದುಕೊಂಡಿದ್ದಾರೆ. ಕೆಲವರು ಘಾಟಿಯ ಹಾಡಿನಲ್ಲಿನ ಬುಲೆಟ್ ಸದ್ದಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ಟ್ರೇಲರ್ ರಿಲೀಸ್ ಸಮಾರಂಭ ಫ್ಯಾಶ್ ಬ್ಲಾಕ್
  

ಟ್ರೇಲರ್ ರಿಲೀಸ್ ಸಮಾರಂಭ ಫ್ಯಾಶ್ ಬ್ಲಾಕ್

ಟ್ರೇಲರ್ ರಿಲೀಸ್ ಸಮಾರಂಭಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಲೂಸ್ ಮಾದ ಯೋಗಿ, ಹರ್ಷಿಕಾ ಪೂಣಚ್ಚ, ಮೇಘನಾ ಗಾಂವ್ ಕರ್, ನಿರ್ದೇಶಕ ಪವನ್ ಒಡೆಯರ್ ಬಂದಿದ್ದರು. ಇವರ ಜತೆಗೆ ಉಳಿದವರು ಕಂಡಂತೆ ಚಿತ್ರ ನಿರ್ಮಿಸಿರುವ ಸುವಿನ್ ಸಿನಿಮಾಸ್ ನ ನಿರ್ದೇಶಕ ಸುನಿ, ಹೇಮಂತ್, ಅಭಿ ಇದ್ದರು.

ಇವರ ಜತೆಗೆ ಚಿತ್ರದ ತಾರಾಗಣದಲ್ಲಿರುವ ತಾರಾ ಅನುರಾಧ, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ, ಯಜ್ಞ ಶೆಟ್ಟಿ, ಟಿವಿ 9ನ ಮಾಜಿ ನಿರೂಪಕಿ ಕಮ್ ವಾರ್ತಾ ವಾಚಕಿ ಶೀತಲ್ ಶೆಟ್ಟಿ, ದಿನೇಶ್ ಮಂಗಳೂರು, ಈ ಹಿಂದೆ ಟಿವಿ ಚಾನೆಲ್ ನಿರೂಪಕರಾಗಿದ್ದ, ಆಗಾಗ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಗೌರೀಶ್ ಅಕ್ಕಿ ಮುಂತಾದವರು ಹಾಜರಿದ್ದರು. ಉಳಿದಂತೆ ಅಚ್ಯುತ್ ಕುಮಾರ್, ಕಿಶೋರ್ ಕುಮಾರ್, ಬಿ. ಸುರೇಶ್ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಶುಭ ಹಾರೈಸಿದರು

 

ಉಳಿದವರು ಕಂಡಂತೆ ಚಿತ್ರ ಗೀತೆ ಸಾಲುಗಳು
  

ಉಳಿದವರು ಕಂಡಂತೆ ಚಿತ್ರ ಗೀತೆ ಸಾಲುಗಳು

ಚಿತ್ರದುರ್ಗದ ಕಲ್ಲಿನ ಕೋಟೆ, ಇಂಗ್ಲೀಷರಿಗೆ ಬಾಡಿಗೆ ಬಿಟ್ಟೆ, ಲೈಟ್ಹೌಸನ್ನು ನೆಲಕ್ಕೆ ಬಾಗಿಸಿ, ಚಂದಾ ನೋಡಲು ಲಾಂಟರ್ನ್ ಇಟ್ಟೆ, ಹುಳುಗಳ ಮೊಟ್ಟೆ, ಸಿಲ್ಕಿನ ಬಟ್ಟೆ, ಸೊಂಟಗೆ ಸುತ್ತಿ ಕೋಮಣ ತೊಟ್ಟೆ, ಅದರಲಿ ಬಿಡಿಸಿದೆ ಬಣ್ಣದ ಚಿಟ್ಟೆ... Paper Paper Medicine Paper... Paper Paper Medicine Paper...
****
ಮಳೆಮರೆತು ತಾನಾಗಿ ಹಸಿರಾಗಿ ನಿಂತಾಗ ಈ ಭೂಮಿ... ಸಲಹೇನೆ ಕೊಡಬೇಡ ದೇವರೆ ನೀನಿಲ್ಲಿ ಹಂಗಾಮಿ... ಕಣ್ಣೀರೆ ನಿನ್ನ ಸಂತೇಗೆ ಕರೆದಾಗ, ಬೇಜಾರಿನಲ್ಲಿ ಸಜ್ಜಾದೆಯ? ನೋವಿರುವ ಗಾಯ ಬೆರಳಲ್ಲೆ ಇರುವಾಗ, ಬಿಡಿಸೋದು ಕಲಿತೆ ರಂಗೋಲಿಯ? ಮಿಂಚೊಂದು ಕಿಡಿಕಾರಿ ಆಕಾಶ ಚೆಲುವಾಯ್ತು ಹೇಗೆ? ಬೆಂಕೀಯ ಕಡಿಗೀರಿ ಮನೆ ತುಂಬ ಬೆಳಕಾದ ಹಾಗೆ..

  

ಘಾಟಿಯ ಇಳಿದು ಬಂದ ಹಾಡು ಮತ್ತೊಮ್ಮೆ ನೋಡಿ

ಉಳಿದವರು ಕಂಡಂತೆ ಘಾಟಿಯ ಇಳಿದು ಬಂದ ಹಾಡು ಮತ್ತೊಮ್ಮೆ ನೋಡಿ

ಉಳಿದವರು ಕಂಡಂತೆ ಘಾಟಿಯ ಇಳಿದು
  

ಉಳಿದವರು ಕಂಡಂತೆ ಘಾಟಿಯ ಇಳಿದು

ಘಾಟಿಯ ಇಳಿದು ಮೊದಲ ಸಾಲಿಗೂ ಮುನ್ನ ಬರುವ ಪಲ್ಲವಿ ಬಾಲಕನೊಡನೆ ಕಿಶೋರ್ ಕಣ್ಮುಚ್ಚಿಕೊಂಡು ಆಕೆಯ ನೆನಪಿನಲ್ಲೇ ಸಾಗುವ ರೀತಿ


ಯಜ್ಞಾ ಶೆಟ್ಟಿ ನಕ್ಕಾಗ ಆಯ್ಯಯ್ಯೋ ನಗ್ತಾಳಾ ಎಂದು ಬೀಳುವ ಕಿಶೋರ್..
ಮೀನು ಮಾರುಕಟ್ಟೆಯಿಂದ ಹೊರ ಬರುವಾಗ ಸಿಗುವ ಬೇಡರು, ಬುಲೆಟ್ ನಲ್ಲಿ ಯಜ್ಞಾ ಹಿಂದೆ ಸಾಗುವಾಗ ಸಿಗುವ ಇಣುಕು ನೋಟ, ಕಣ್ ಕಣ್ ಸಲಿಗೆ ಮಾತು, ಯಕ್ಷ ಕಿಂಕರರು ಬೂತಾಯಿ ಮೀನು ಕೊಳ್ಳುವ ನೆಪದಲ್ಲಿ ಆಕೆ ಕೈ ಸೋಕಿದಾಗ ಕಿಶೋರ್ ಮುಖದಲ್ಲಿನ ಭಾವ ..

ಕಡಲ ತಡಿಯಲ್ಲಿ ಒಂದಷ್ಟು ಅಂತರದಲ್ಲಿ ಇಬ್ಬರು ಕುಳಿತು ಕೊಳ್ಳುವುದು.. ಐಸ್ ಕ್ಯಾಂಡಿ ತಿನ್ನುವ ರೀತಿ ಎಲ್ಲವೂ ಪ್ರೇಮ ಕಾವ್ಯ ಹೊಸ ಪ್ರಣಯ ರಾಜನ ಉದಯಕ್ಕೆ ನಾಂದಿ ಹಾಡಿದೆ.

 

English summary
On the eve of Valentine's day welcome Kannada film Industry's new 'PRANAYARAJA' Munna aka Kishore of Ulidavaru Kandante movie directed by Rakshith Shetty. The video song 'Gatiya ilidu going become big hit on youtube since its release on Feb.11
Please Wait while comments are loading...

Kannada Photos

Go to : More Photos