»   » ದೀಪಾವಳಿ ಹಬ್ಬದಂದು ಮನಸ್ಸಿಗೆ ತುಂಬಾ ಕಾಡುವ ಹಾಡುಗಳು ಇವು!

ದೀಪಾವಳಿ ಹಬ್ಬದಂದು ಮನಸ್ಸಿಗೆ ತುಂಬಾ ಕಾಡುವ ಹಾಡುಗಳು ಇವು!

Posted by:
Subscribe to Filmibeat Kannada

ಅಂದಿನ ಕಾಲದ ಸಿನಿಮಾಗಳಲ್ಲಿ ಹೆಚ್ಚಾಗಿ ಹಬ್ಬಹರಿದಿನಗಳಿಗೆ ಹೆಚ್ಚಿನ ಪ್ರಾಮುಖ್ಯ ಕೊಡುತ್ತಿದ್ದರು. ಅಲ್ಲದೇ ಪ್ರೇಕ್ಷಕರೂ ಕೂಡ ಹಬ್ಬದ ಸಂಭ್ರಮವನ್ನು ಸಿನಿಮಾಗಳಲ್ಲಿ ನೋಡಲು ಇಷ್ಟಪಡುತ್ತಿದ್ದರು. 'ದೀಪದಿಂದ ದೀಪವ ಹಚ್ಚಬೇಕು ಮಾನವ', 'ದೀಪಾವಳಿ ದೀಪಾವಳಿ' ಹೀಗೆ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ ಹಾಡುಗಳು ಇಂದಿಗೂ ಎಲ್ಲರ ಮನೆ-ಮನಗಳಲ್ಲಿ ಜಾಗ ಪಡೆದಿದೆ.

ಇನ್ನು ದೀಪಾವಳಿ ಬಂತೆಂದರೆ ಸಾಮಾನ್ಯವಾಗಿ ಪಟ್ಟ ಅಂತ, ಎಲ್ಲರಿಗೂ ನೆನಪಾಗುವ ಹಾಡು 'ಮುದ್ದಿನ ಮಾವ' ಸಿನಿಮಾದ 'ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ' ಹಾಡು. ಆದರೆ ಈಗ ಕಾಲ ಬದಲಾಗಿದೆ. ಈ ಬ್ಯುಸಿ ಲೈಫ್ ಸ್ಟೈಲ್ ನಲ್ಲಿ ಈಗಿನ ಜನರೇಷನ್ ಗೆ ಹಾಡು ಕೇಳಲು ಟೈಮ್ ಇಲ್ಲದಂತಾಗಿದೆ.

ಜೊತೆಗೆ ಈಗಿನ ಕಾಲದಲ್ಲಿ ಜನಜೀವನ ಶೈಲಿಯೂ ಬದಲಾಗಿದೆ. ಅಲ್ಲದೇ ಇತ್ತೀಚೆಗೆ ಬರುತ್ತಿರುವ ಸಿನಿಮಾ ಶೈಲಿ ಹಾಗೂ ಅದರಲ್ಲಿರುವ ಹಾಡುಗಳು ಬದಲಾಗಿದೆ. ಸದ್ಯಕ್ಕೆ ಜನ ಕೂಡ ಅದೇ ಶೈಲಿಗೆ ಒಗ್ಗಿ ಹೋಗಿದ್ದಾರೆ.

ಇದೀಗ ಮನಸ್ಸಿನ ಹೆಚ್ಚಾಗಿ ಕಾಡುವ ಕೆಲವೊಂದು ದೀಪಾವಳಿಗೆ ಸಂಬಂಧಿಸಿದ ಹಾಡುಗಳನ್ನು ನಾವು ನಿಮಗಾಗಿ ಹೊತ್ತು ತಂದಿದ್ದೇವೆ. ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

'ಮುದ್ದಿನ ಮಾವ' ಚಿತ್ರದ ದೀಪಾವಳಿ ಹಾಡು

1993ರಲ್ಲಿ ನಿರ್ದೇಶಕ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ತೆರೆ ಕಂಡ 'ಮುದ್ದಿನ ಮಾವ' ಚಿತ್ರದ 'ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ' ಹಾಡಿಗೆ ನಟ ಶಶಿಕುಮಾರ್ ಹಾಗೂ ನಟಿ ಶ್ರುತಿ ಅವರು ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಅಲ್ಲದೇ ದೀಪಾವಳಿ ಬಂತೆಂದರೆ ಈಗಲೂ ಎಲ್ಲರ ಬಾಯಲ್ಲೂ ಗುನುಗುನಿಸುವ ಹಾಡು ಇದೆ ಅಂತಾನೂ ಹೇಳಬಹುದು.

'ನಂಜುಂಡಿ' ಚಿತ್ರದ ದೀಪದಿಂದ ದೀಪವಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ನಂಜುಂಡಿ' ಚಿತ್ರದ 'ದೀಪದಿಂದ ದೀಪವಾ ಹಚ್ಚಬೇಕು ಮಾನವ' ಅನ್ನೋ ಹಾಡು ಈಗಲೂ ಎಲ್ಲೆಡೆ ಫೇಮಸ್. ಹಾಗೂ ದೀಪಾವಳಿ ಹಬ್ಬದ ಬಗ್ಗೆ ಈ ಹಾಡಿನಲ್ಲಿ ಸಂದೇಶವನ್ನು ನೀಡಿದ್ದಾರೆ.

'ಧರ್ಮದೇವತೆ' ಚಿತ್ರದ ದೀಪ ಹಚ್ಚಬೇಕು

ಡೈನಾಮಿಕ್ ಸ್ಟಾರ್ ದೇವರಾಜ್ ಅವರ 'ಧರ್ಮದೇವತೆ' ಚಿತ್ರದ ದೀಪ ಹಚ್ಚಬೇಕು ಹಾಡಿನಲ್ಲಿಯೂ ದೀಪಾವಳಿಯ ಬಗ್ಗೆ ಹೇಳಲಾಗಿದೆ.

'ನಂದಾದೀಪ' ಚಿತ್ರದ ನಾಡಿನಂದ ಈ ದೀಪಾವಳಿ

1963 ರಲ್ಲಿ ತೆರೆ ಕಂಡ 'ನಂದಾದೀಪ' ಚಿತ್ರದ ನಾಡಿನಂದ ಈ ದೀಪಾವಳಿ ಹಾಡು ಆಗಿನ ಕಾಲದ ದೀಪಾವಳಿ ಸಂಭ್ರವನ್ನು ಎತ್ತಿ ತೋರಿಸುತ್ತದೆ. ಎಸ್ ಜಾನಕಿ ಹಾಗೂ ಪಿ ಲೀಲಾ ಹಾಡಿರುವ ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ.

'ಶ್ರೀ' ಚಿತ್ರದ 'ದೀಪ ದೀಪ ಕಣ್ಣ ತುಂಬ'

ನಟ ವಿಜಯ ರಾಘವೇಂದ್ರ, ಕೋಮಲ್, ಜೆನ್ನಿಫರ್ ಕೊತ್ವಾಲ್ ಕಾಣಿಸಿಕೊಂಡಿರುವ 'ಶ್ರೀ' ಚಿತ್ರದ ದೀಪ ದೀಪ ಕಣ್ಣ ತುಂಬ ಹಾಡು ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ.

English summary
Watch Best Diwali festival Kannada Song's By various kannada films. Here is the video's.
Please Wait while comments are loading...

Kannada Photos

Go to : More Photos