»   » ದರ್ಶನ್ ತುಂಬಾ ಒಳ್ಳೆ ಹುಡುಗ ಅಂತ ಊರೆಲ್ಲಾ ಹೇಳ್ತಾರೆ

ದರ್ಶನ್ ತುಂಬಾ ಒಳ್ಳೆ ಹುಡುಗ ಅಂತ ಊರೆಲ್ಲಾ ಹೇಳ್ತಾರೆ

Posted by:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಸಿನಿಮಾ ಮುಂದಿನ ವಾರ (ಜನವರಿ 29) ತೆರೆಗೆ ಬರಲು ಸಜ್ಞಾಗಿದ್ದು ಇದೀಗ ಚಿತ್ರದ 'ಇವನು ಒಳ್ಳೆ ಹುಡುಗ' ಎಂಬ ಟೈಟಲ್ ಹಾಡು ಈಗಾಗಲೇ ಬಿಡುಗಡೆ ಆಗಿದೆ.

2012 ರಲ್ಲಿ ಸೆಟ್ಟೇರಿದ್ದ ದರ್ಶನ್ ಅವರ 'ವಿರಾಟ್' ನಿರ್ದೇಶಕ ಹೆಚ್.ವಾಸು ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ತೆಲುಗಿನ ಖ್ಯಾತ ನಿರ್ಮಾಪಕ ಸಿ ಕಲ್ಯಾಣ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.[ಅಬ್ಬಾ! ಕೊನೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆದ್ದೇ ಬಿಟ್ರು]ಕಲರ್ ಫುಲ್ ಲೈಟಿಂಗ್ಸ್ ನಲ್ಲಿ ಚಿತ್ರೀಕರಣಗೊಂಡಿರುವ 'ಇವನೊಬ್ಬ ಒಳ್ಳೆ ಹುಡುಗ ಅಂತಾರೇ ಊರೊಳಗ, ಇವನೊಬ್ಬ ಒಂಟಿ ಸಲಗ 'ವಿರಾಟ್' ಎಂಬ ಟೈಟಲ್ ಸಾಂಗ್ ಸಖತ್ತಾಗಿದೆ. ಈ ಹಾಡಿನಲ್ಲಿ ನಟ ದರ್ಶನ್ ಅವರು ಸ್ಟೈಲಿಷ್ ಲುಕ್ ನಲ್ಲಿ ಮಿಂಚಿದ್ದು ವಿ ಹರಿಕೃಷ್ಣ ಅವರ ಮ್ಯೂಸಿಕ್ ಗೆ ಜಬರ್ದಸ್ತ್ ಆಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ.


ಅಂದಹಾಗೆ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಈ ಸಿನಿಮಾದಲ್ಲಿ ಇಶಾ ಚಾವ್ಲಾ, ವಿಧಿಶಾ ಶ್ರೀವಾತ್ಸವ್, ಚೈತ್ರ ಚಂದ್ರನಾಥ್ ಎಂಬ ಮೂವರು ನಾಯಕಿಯರೊಂದಿಗೆ ಡ್ಯುಯೆಟ್ ಹಾಡಿದ್ದಾರೆ. ಇನ್ನು ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ಮತ್ತು ಟೀಸರ್ ಗಳಿಂದ 'ವಿರಾಟ್' ಸಿನಿಮಾ ಗಾಂಧಿನಗರದಲ್ಲಿ ಸಖತ್ ಧೂಳೆಬ್ಬಿಸಿದೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ರಿಯಲ್ ಹೀರೋ' ಅನ್ನೋದು ಇದಕ್ಕೆ!]ಆದ್ದರಿಂದ ಸಾಮಾನ್ಯವಾಗಿ ದರ್ಶನ್ ಅಭಿಮಾನಿಗಳಲ್ಲಿ 'ವಿರಾಟ್' ಸಿನಿಮಾದ ಬಗ್ಗೆ ಕೊಂಚ ಕುತೂಹಲ ಸ್ವಲ್ಪ ಜಾಸ್ತೀನೇ ಇದೆ.[ದಾಖಲೆ ಮೊತ್ತಕ್ಕೆ 'ವಿರಾಟ್' ಆಡಿಯೋ ರೈಟ್ಸ್ ಸೇಲ್!]


ನಟಿ ಚೈತ್ರ ಚಂದ್ರನಾಥ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜಬರ್ದಸ್ತ್ ಆಗಿ ಮಾಡಿರುವ 'ಇವನೊಬ್ಬ ಒಳ್ಳೆ ಹುಡುಗ' ಹಾಡು ನೋಡಲು ಈ ವಿಡಿಯೋ ನೋಡಿ..


Watch Darshan's Kannada Movie 'Viraat' Title Video Song

English summary
Watch Viraat Title Video Song, starring Kannada actor Darshan, Actress Isha Chawla, Actress Vidisha Shrivastav, Actress Suhasini Maniratnam, Sumalatha and others. Music composed by V Harikrishna. Directed By H Vasu.
Please Wait while comments are loading...

Kannada Photos

Go to : More Photos