»   » 'ಟಕರ್ ಟಕರ್ ಟಂವ್ ಟಂವ್' ಅಂತಾವ್ರೆ ಪವರ್ ಸ್ಟಾರ್ ಪುನೀತ್

'ಟಕರ್ ಟಕರ್ ಟಂವ್ ಟಂವ್' ಅಂತಾವ್ರೆ ಪವರ್ ಸ್ಟಾರ್ ಪುನೀತ್

Posted by:
Subscribe to Filmibeat Kannada

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಹಿಟ್ 'ಉಗ್ರಂ' ಚಿತ್ರಕ್ಕೆ ಸಂಗೀತ ನೀಡಿದ್ದ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಕುಂದಾಪುರ ಭಾಷೆಯಲ್ಲಿ ಸಿನಿಮಾ ಮಾಡುವ ಮೂಲಕ ಒಂದು ಸಾಹಸ ಮಾಡಲು ಹೊರಟಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

ಪಕ್ಕಾ ಕುಂದಾಪುರ ಭಾಷೆಯಲ್ಲಿ ಇಡೀ ಸಿನಿಮಾವೇ ಮೂಡಿಬರುತ್ತಿದ್ದು, ಚಿತ್ರಕ್ಕೆ 'ಬಿಲಿಂಡರ್' ಎಂದು ಟೈಟಲ್ ಕೊಡಲಾಗಿದೆ. ಚಿತ್ರಕ್ಕೆ ರವಿ ಬಸ್ರೂರು ಅವರೇ ಆಕ್ಷನ್-ಕಟ್ ಹೇಳುತ್ತಿದ್ದಾರೆ.[ಪುನೀತ್ ಅಭಿಮಾನಿಗಳ, ಅಭಿಮಾನಕ್ಕೆ ಕಿಚ್ಚು ಹಚ್ಚೋ ಸುದ್ದಿ]

Watch Kannada Movie 'Bilindar' Chilri Shooki Song

ಅಂದಹಾಗೆ ಈ ಚಿತ್ರದ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಈ ಚಿತ್ರದ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಧ್ವನಿ ನೀಡಿದ್ದು, ಪಕ್ಕಾ ಕುಂದಾಪುರ ಭಾಷೆಯಲ್ಲಿ ಒಂಚೂರು ತಪ್ಪು ತಪ್ಪಾಗಿ ಉಚ್ಚರಿಸದೇ ಹಾಡಿದ್ದಾರೆ.

ಈ ಹಾಡಿನಲ್ಲಿ ಪುನೀತ್ ಅವರು ಪಕ್ಕಾ ಬಸ್ ಕಂಡಕ್ಟರ್ ಆಗಿದ್ದಾರೆ. ಲೋಕಲ್ ಭಾಷೆಯಲ್ಲಿರುವ 'ಚಿಲ್ರೆ ಶೋಕಿ ಟಕರ್ ಟಕರ್ ಟಂವ್ ಟಂವ್' ಅನ್ನೋ ಮಸ್ತ್ ಹಾಡನ್ನು ಪುನೀತ್ ರಾಜ್ ಕುಮಾರ್ ಅವರು ಸಖತ್ ಎಂಜಾಯ್ ಮಾಡುತ್ತಾ ಹಾಡಿದ್ದಾರೆ.[ವಾವ್.! 'ಚಕ್ರವ್ಯೂಹ' ಬಿಡುಗಡೆ ದಿನಾಂಕ ಪಕ್ಕಾ ಆಯ್ತು]

Watch Kannada Movie 'Bilindar' Chilri Shooki Song

'ಕುಂದಾಪುರದ ಎಲ್ಲಾ ಕಡೆ ಹಲವಾರು ಬಾರಿ ಓಡಾಡಿದ್ರೂ ಕೂಡ ಯಾವತ್ತೂ ಸ್ಥಳೀಯ ಭಾಷೆಯನ್ನು ಮಾತಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೀಗ ಆ ಸೊಗಡಿನ ಹಾಡೊಂದನ್ನು ಹಾಡಿದ್ದು ಬಹಳ ಸಂತೋಷ ಕೊಟ್ಟಿದೆ' ಅಂತ ಬಿಲಿಂಡರ್ ತಂಡಕ್ಕೆ ಶುಭ ಹಾರೈಸಿದ್ದಾರೆ ಪವರ್ ಸ್ಟಾರ್.

ಪವರ್ ಸ್ಟಾರ್ ಪುನೀತ್ ಅವರು ಮಸ್ತ್ ಎಂಜಾಯ್ ಮಾಡಿಕೊಂಡು ಹಾಡಿದ ಹಾಡನ್ನು ನೋಡಬೇಕೆ ಹಾಗಿದ್ರೆ ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿ..

English summary
Watch Kannada Movie 'Bilindar' Chilri Shooki Song Sung by Kannada Actor Puneeth Rajkumar. Music Directed by Ravi Basrur.
Please Wait while comments are loading...

Kannada Photos

Go to : More Photos