»   » 'ಮಾಸ್ಟರ್ ಪೀಸ್' ಚಿತ್ರದ ಸೂಪರ್ ಹಾಡು ಕೇಳಿ...ಒಂದ್ ಸ್ಟೆಪ್ ಹಾಕ್ಬಿಡಿ...

'ಮಾಸ್ಟರ್ ಪೀಸ್' ಚಿತ್ರದ ಸೂಪರ್ ಹಾಡು ಕೇಳಿ...ಒಂದ್ ಸ್ಟೆಪ್ ಹಾಕ್ಬಿಡಿ...

Posted by:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಾಸ್ಟರ್ ಪೀಸ್' ಸಿನಿಮಾ ಬಿಡುಗಡೆ ಆಗಿ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಬಿಗ್ ಓಪನಿಂಗ್ ಕಂಡಿರುವ ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ಮೊದಲ ದಿನವೇ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದೆ.

ಯಶ್ ಮತ್ತು ಶಾನ್ವಿ ಅಭಿನಯದ 'ಮಾಸ್ಟರ್ ಪೀಸ್' ಹವಾ ಹೇಗಿದೆ ಅಂತ ನೋಡುವುದಕ್ಕೆ ಯಶ್ ಅಭಿಮಾನಿಗಳಂತೂ ಥಿಯೇಟರ್ ಗಳಿಗೆ ಮುಗಿಬೀಳ್ತಿದ್ದಾರೆ. ಹಾಡು, ಡ್ಯಾನ್ಸ್, ಫೈಟ್, ಕಾಮಿಡಿ, ಸೆಂಟಿಮೆಂಟ್, ಎಲ್ಲಕ್ಕಿಂತ ಹೆಚ್ಚಾಗಿ ದೇಶಭಕ್ತಿ...ಇವೆಲ್ಲಾ ಮಿಕ್ಸ್ ಆಗಿರುವ 'ಮಾಸ್ಟರ್ ಪೀಸ್' ಮಾಸ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರ.


ಚಿತ್ರದಲ್ಲಿ ಮೊದಲು ಕೇಡಿ ಆಗಿ ಕಾಣಿಸಿಕೊಳ್ಳುವ ಯಶ್ ಸೂಪರ್ ಸ್ಟೆಪ್ ಹಾಕಿರುವ 'ಕೇಡಿ ನಂ.1' ಹಾಡು ಈಗಷ್ಟೆ ರಿಲೀಸ್ ಆಗಿದೆ.


KD No.1 Full Song in HD

KD No.1 Full Song of Masterpiece movie.


Posted by Masterpiece on Saturday, December 26, 2015

ವಿ.ಹರಿಕೃಷ್ಣ ಸಂಗೀತ ನಿರ್ದೇಶನದ 'ಕೇಡಿ ನಂ.1' ಹಾಡನ್ನ ಕೇಳಿ ಥಿಯೇಟರ್ ನಲ್ಲಿ ನೀವು ಸ್ಟೆಪ್ ಹಾಕಿರ್ತೀರಾ. ಒಂದ್ವೇಳೆ ಥಿಯೇಟರ್ ನಲ್ಲಿ ಮಿಸ್ ಆಗಿದ್ರೆ, ಈಗಷ್ಟೆ ಚಿತ್ರತಂಡದಿಂದ ಬಿಡುಗಡೆ ಆಗಿರುವ 'ಕೇಡಿ ನಂ.1' ಹಾಡು ಕೇಳಿ ಒಂದ್ ಸ್ಟೆಪ್ ಹಾಕ್ಬಿಡಿ.....

English summary
Kannada Actor Yash starrer 'Masterpiece' video song is out. Watch 'KD No.1' video song here
Please Wait while comments are loading...
Best of 2016

Kannada Photos

Go to : More Photos