»   » ಕಿಚ್ಚ ಸುದೀಪ್ ಗೆ ಟೆಂಪರೇಚರ್ ರೈಸ್ ಆದಾಗ.....

ಕಿಚ್ಚ ಸುದೀಪ್ ಗೆ ಟೆಂಪರೇಚರ್ ರೈಸ್ ಆದಾಗ.....

Posted by:
Subscribe to Filmibeat Kannada

ಕಿಚ್ಚ ಸುದೀಪ್ ಗೆ ಹೆಸರಲ್ಲೇ ಕಿಚ್ಚಿದೆ. ಕೆಣಕಿದವರು ಯಾರೇ ಆದರೂ ಸರಿ, ಟೆಂಪರ್ ರೈಸ್ ಮಾಡಿಕೊಂಡು ತರಾಟೆ ತೆಗೆದುಕೊಳ್ಳುವವರೆಗೂ ಸುಮ್ನೆ ಬಿಡಲ್ಲ. ಇದನ್ನ ಹಲವಾರು ಸಿನಿಮಾಗಳಲ್ಲಿ ನೀವೆಲ್ಲಾ ನೋಡಿದ್ದೀರಾ.

ಆದ್ರೆ, ಈ ಬಾರಿ ಸುದೀಪ್ ಟೆಂಪರೇಚರ್ ರೈಸ್ ಮಾಡಿಕೊಂಡಿರೋದು ಖೇಡಿಗಳಿಂದಲ್ಲ. ಬದಲಾಗಿ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ನಿಂದ. ತೆಳುವಾದ ಸೀರೆಯುಟ್ಟು ರಚಿತಾ ರಾಮ್, ಸುದೀಪ್ ಮುಂದೆ ಬಂದು ನಿಂತಿದ್ದೇ ತಡ...ಸುದೀಪ್ ನಿಂತಲ್ಲಿ ನಿಲ್ಲಲೇ ಇಲ್ಲ. ['ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್]


ಹೀಗೆಲ್ಲಾ ಆಗುತ್ತೆ ಅನ್ನೋದನ್ನ ಸ್ಕೂಲಲ್ಲಿ ಟೀಚರ್ ಹೇಳಿಕೊಡಲಿಲ್ಲ ಅಂತ ಗೊಣಗುತ್ತಿರುವ ಸುದೀಪ್ ಪಾಡನ್ನ ನಾವ್ ಹೇಳುವುದಕ್ಕಿಂತ ನೀವು ನೋಡಿದ್ರೆ, ಅದರ ಮಜಾನೇ ಬೇರೆ....


Watch Kiccha Sudeep starrer 'Seere' song teaser from Ranna

'ರನ್ನ' ಚಿತ್ರದ ''ಸೀರೆಲಿ ಹುಡುಗೀರ ನೋಡಲೇ ಬಾರದು...'' ಹಾಡಿನ ಟೀಸರ್ ರಿಲೀಸ್ ಆಗಿದೆ. ಸುದೀಪ್ ಒದ್ದಾಟ, ರಚಿತಾ ರಾಮ್ ಬಿಂಕ-ಬಿನ್ನಾಣ ಇರುವ ಈ ಹಾಡು ನೋಡುವುದಕ್ಕೂ ತಂಪು, ಕೇಳುವುದಕ್ಕೂ ಇಂಪು. ಅಷ್ಟು ಸೊಗಸಾದ ಸಂಗೀತ ನೀಡಿದ್ದಾರೆ ವಿ.ಹರಿಕೃಷ್ಣ. ['ರನ್ನ' ಚಿತ್ರದ ರಂಗೀನ್ ಬುಲ್ ಬುಲ್ ಚಿತ್ರಗಳು]


ಬೊಂಬಾಟ್ ಲೊಕೇಷನ್ಸ್ ನಲ್ಲಿ 'ರನ್ನ' ಚಿತ್ರವನ್ನ ಅದ್ಧೂರಿಯಾಗಿ ರೆಡಿ ಮಾಡಿದ್ದಾರೆ ನಿರ್ದೇಶಕ ನಂದಕಿಶೋರ್. ಸಿನಿಮಾದಲ್ಲಿನ ರಿಚ್ನೆಸ್ ಗೆ ಈಗಾಗಲೇ ರಿಲೀಸ್ ಆಗಿರುವ ಹಾಡುಗಳ ಟೀಸರ್ ಸಾಕ್ಷಿ. ಇನ್ನು ಕೆಲವೇ ದಿನಗಳಲ್ಲಿ 'ರನ್ನ' ಆಡಿಯೋ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅಲ್ಲಿವರೆಗೂ, ಸೀರೆ ತೊಟ್ಟ 'ಬುಲ್ ಬುಲ್' ನೋಡ್ತಾಯಿರಿ....


ಸೀರೆಲಿ ಹುಡುಗೀರ ನೋಡಲೇ ಬಾರದು....ನಿಲ್ಲಲ್ಲ ಟೆಂಪರೇಚರ್ರು....
ಸ್ಕೂಲಲಿ ಹೇಳಿಕೊಡಬಹುದಿತ್ತು....ಹೇಳ್ಲಿಲ್ಲ ನಮ್ ಟೀಚರ್ರು....
ನಂಗೆ ಆನ್ಸರೊಂದು ಬೇಕಿದೆ...
ಸೀರೆ ಟ್ರಾನ್ಸ್ ಪೆರೆಂಟು ಯಾಕಿದೆ...
ಅದೆಷ್ಟೇ ಬೇಡ ಅಂದ್ರು ಕಣ್ಣು ಕದ್ಕದ್ದು ನೋಡ್ತದೆ...
ಅದ್ಯಾಕೋ ಮನಸ್ಸು ಮೊನೆಯಿಂದ ಮುದ್ದು ಮುದ್ದು ಮಾತಾಡ್ತದೆ...

English summary
Kiccha Sudeep starrer 'Ranna' movie audio is all set to hit the market soon. V.Harikrishna musical 'Seere' song teaser is out. Watch the video here.
Please Wait while comments are loading...

Kannada Photos

Go to : More Photos