»   » ಚಿರಂಜೀವಿ ಸರ್ಜಾಗೆ ಪುನೀತ್ 'ಲವ್ ಟ್ರೇನಿಂಗ್'

ಚಿರಂಜೀವಿ ಸರ್ಜಾಗೆ ಪುನೀತ್ 'ಲವ್ ಟ್ರೇನಿಂಗ್'

Posted by:
Subscribe to Filmibeat Kannada

ಚಿರಂಜೀವಿ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಅಭಿನಯದ 'ರುದ್ರತಾಂಡವ' ಚಿತ್ರ ಹಲವಾರು ವಿಶೇಷತೆಗಳಿಂದ ಸದ್ದು ಮಾಡುತ್ತಲೇ ಇದೆ.

ಮೊನ್ನೆ ಮೊನ್ನೆಯಷ್ಟೇ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, 'ರುದ್ರತಾಂಡವ' ಚಿತ್ರಕ್ಕೋಸ್ಕರ ಒಂದು ಹಾಡು ಹಾಡಿರುವ ಸುದ್ದಿಯನ್ನ ನೀವು ನೋಡಿದ್ದೀರಾ.

Watch Rudrathandava

ಮಿಡಲ್ ಸ್ಕೂಲ್ ಟೀಚರ್ ರಾಧಿಕಾ ಕುಮಾರಸ್ವಾಮಿ ಹಿಂದೆ ಬೀಳುವ ಚಿರಂಜೀವಿ ಸರ್ಜಾ ರವರ ಲವ್ ಫೀವರ್ ಬಗ್ಗೆ ಮದರಂಗಿ ಕೃಷ್ಣ ಮತ್ತು ಚಿಕ್ಕಣ ಕಾಲೆಳೆಯುವ ಹಾಡಿಗೆ ಅಪ್ಪು ದನಿಯಾಗಿರುವ ಸಂಗತಿಯನ್ನ ನಾವೇ ನಿಮಗೆ ಹೇಳಿದ್ವಿ. ಆದ್ರೀಗ, ಅದೇ ಹಾಡನ್ನ ನೀವೀಗ ಕೇಳಿ ಆನಂದಿಸುವ ಸಮಯ ಬಂದುಬಿಟ್ಟಿದೆ. ['ರುದ್ರತಾಂಡವ'ದಲ್ಲಿ ಪವರ್ ಸ್ಟಾರ್ ಪುನೀತ್ ಗಾನಸುಧೆ]

''ಒಂದೂರಲ್ಲಿ ಒಬ್ಬ ಹುಡುಗ ಇದ್ದ'' ಅನ್ನುವ ಪಕ್ಕಾ ಲೋಕಲ್ ಲಿರಿಕ್ಸ್ ಇರುವ ಸಿಂಪಲ್ ಹಾಡಿಗೆ ಅಪ್ಪು ಹೇಗೆ ದನಿಯಾಗಿದ್ದಾರೆ ಅಂತ ಒಮ್ಮೆ ನೀವೇ ಕೇಳಿ.....

Watch Rudrathandava7

ಯುವ ನಿರ್ದೇಶಕ ಪುನೀತ್ ಬರೆದಿರುವ ಸಾಹಿತ್ಯ ಮತ್ತು ವಿ.ಹರಿಕೃಷ್ಣ ನೀಡಿರುವ ಸೊಗಸಾದ ಸಂಗೀತಕ್ಕೆ 'ಅಪ್ಪು ಗಾನ' ಮೋಡಿ ಮಾಡಿದೆ. ಮೊದ ಮೊದಲು ಚುಡಾಯಿಸುವಂತೆ, ಪ್ರೀತಿಯನ್ನ ಕಿಚಾಯಿಸುವಂತೆ ಸಾಹಿತ್ಯವಿರುವ ಹಾಡಲ್ಲಿ ಒಂದು ಇಂಟರ್ವೆಲ್ ಮತ್ತು ಟ್ವಿಸ್ಟ್ ಕೂಡ ಇದೆ.

''ಪ್ರೀತೀಲಿ ಗೆದ್ರೆ ಜಂಬೂ ಸವಾರಿ, ಸೋತರೆ ಬಂಬೂ ಸವಾರಿ'' ಅಂತೆಲ್ಲಾ ನೀತಿ ಪಾಠ ಹೇಳುವ ಮದರಂಗಿ ಕೃಷ್ಣ ಮತ್ತು ಚಿಕ್ಕಣ್ಣ, ಚಿರುಗೆ ರಾಧಿಕಾ ಮೇಡಂ ಕಡೆಯಿಂದ ಫೋನ್ ಕಾಲ್ ಬಂದ ತಕ್ಷಣ ಉಲ್ಟಾ ಹೊಡೆಯುತ್ತಾರೆ.

Watch Rudrathandava3

''ವೇದ ಸುಳ್ಳಾದರೂ, ಮಗಾ ಪ್ರೀತಿ ಸುಳ್ಳಾಗದು'' ಅಂತ ವೇದಾಂತ ಹೇಳುವ ಸೆಕೆಂಡ್ ಹಾಫ್ ಹಾಡಿಗೆ ಅಪ್ಪು ಕಂಠ ಇನ್ನಷ್ಟು ಮೆರುಗು ನೀಡಿದೆ. ಈಗಾಗಲೇ ಹಾಡಿನ ಚಿತ್ರೀಕರಣ ಕೂಡ ಸಂಪೂರ್ಣವಾಗಿದ್ದು, ಸಖತ್ ಕಲರ್ ಫುಲ್ಲಾಗಿ ಹಾಡು ಮೂಡಿಬಂದಿದೆ.

ಸೀರೆಯುಟ್ಟ ರಾಧಿಕಾ ಮೇಡಂ ಮುಂದೆ ನಡೆಯುತ್ತಿದ್ದರೆ, ಅವರನ್ನ ಫಾಲೋ ಮಾಡೋದ್ರಲ್ಲೇ ಚಿರು ಬಿಜಿ. 'ರಾಜಾಹುಲಿ' ಚಿತ್ರದ ನಂತ್ರ ಗುರುದೇಶಪಾಂಡೆ ನಿರ್ದೇಶಿಸಿರುವ 'ರುದ್ರತಾಂಡವ'ದ ಆಡಿಯೋ ಈಗಾಗಲೇ ರಿಲೀಸ್ ಆಗಿದೆ. ಅದನ್ನ ಶಿವಣ್ಣ ಕೂಡ ಮೆಚ್ಚಿಕೊಂಡಿದ್ದಾರೆ. [ಕರುನಾಡ ಚಕ್ರವರ್ತಿ 'ಶಿವ'ಣ್ಣ ಮೆಚ್ಚಿದ 'ರುದ್ರತಾಂಡವ']

puneeth4

ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಕಣ್ಮುಂದೆ 'ರುದ್ರತಾಂಡವ' ನಡೆಯಲಿದೆ. ಅಲ್ಲಿವರೆಗೂ 'ಒಂದೂರಲ್ಲಿದ್ದ ಒಬ್ಬ ಹುಡುಗ'ನ ಕಥೆ ಕೇಳಿ....

ಒಂದೂರಲ್ಲಿ ಒಬ್ಬ ಹುಡುಗ ಇದ್ದ...
ಅವನು ಮಿಡ್ಲಿ ಸ್ಕೂಲು ಮೇಡಂ ಹಿಂದೆ ಬಿದ್ದ...
ಅವ್ಳಿಗೆ ಹೇಳೋಕ್ಕಂತ ಹೋದ ಪ್ರೀತಿ ಪಾಠ...
ಅವ್ಳು ಎಡಗೈಯಲ್ಲಿ ಮಾಡಿ ಹೋದ್ಲು ಟಾಟಾ...
ಸಿಕ್ರೆ ಶಾದಿ ಭಾಗ್ಯ, ಇಲ್ಲಾಂದ್ರೆ ಬಾರು ಭಾಗ್ಯ...
ಇದೇ ಮಗಾ ಲವ್ವು, ಇದಕ್ಯಾಕೆ ಇಷ್ಟು ಡವ್ವು...

ಹೆಣ್ಣು ಪ್ರೀತಿ ವೇಷ, ಗಂಡು ದೇವದಾಸ...
ಹಿಂಗೆ ಮಗಾ ಲವ್ವು, ಲವ್ವಂದ್ರೆ ಸಾವು ನೋವು....
ಎದ್ರೆ ಜಂಬೂ ಸವಾರಿ, ಮಗಾ ಸೋತ್ರೆ ಬಂಬೂ ಸವಾರಿ....

Watch Rudrathandava2

ಒಂದೂರಲ್ಲಿ ಒಬ್ಬ ರಾಜಾ ಇದ್ದ....
ಅವನು ಮಿಡ್ಲಿ ಸ್ಕೂಲು ಮೇಡಂ ಹಿಂದೆ ಬಿದ್ದ...
ಅವ್ಳಿಗೆ ಹೇಳಿ ಕೊಟ್ಟ ಎಲ್ಲಾ ಪ್ರೀತಿ ಪಾಠ...
ಈಗ ಫಿಕ್ಸು ಆಯ್ತು ಅವರ ಮದುವೆ ಊಟ...
ಭಾನು ಭೂಮಿಯಾಣೆ ಪ್ರೀತಿ ಶಾಶ್ವತಾನೇ...
ಪ್ರೀತಿಯಂದ್ರೆ ಪ್ರಾಣ, ಪ್ರೀತ್ಸೋದೇ ಸಂವಿಧಾನ...
ಗೆದ್ದರೆ ಬೀಗರ ಊಟ, ಸೋತ್ರೆ ಲೈಫ್ ಪಾಠ...
ಪ್ರೀತಿಗೊಂದೇ ಆಸ್ತಿ, ಅದು ಪ್ರಾಣ ನೀಡೋ ದೋಸ್ತಿ...
ವೇದ ಸುಳ್ಳಾದರೂ, ಮಗಾ ಪ್ರೀತಿ ಸುಳ್ಳಾಗದು...

English summary
Power Star Puneeth Rajkumar has sung a song for Chiranjeevi Sarja starrer 'Rudrathandava'. V.Harikrishna has composed the music for Rudrathandava, which is directed by Guru Deshpande. Watch the making video here.
Please Wait while comments are loading...

Kannada Photos

Go to : More Photos