»   » 'ದೊಡ್ಮನೆ ಹುಡುಗ'ನಿಗೆ ಭಾಳ 'ಥ್ರಾಸ್ ಆಕ್ಕತಿ' ನೋಡಿ...

'ದೊಡ್ಮನೆ ಹುಡುಗ'ನಿಗೆ ಭಾಳ 'ಥ್ರಾಸ್ ಆಕ್ಕತಿ' ನೋಡಿ...

Posted by:
Subscribe to Filmibeat Kannada

ದುನಿಯಾ ಸೂರಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ 'ದೊಡ್ಮನೆ ಹುಡುಗ' ಚಿತ್ರದ ಹಾಡುಗಳ ಹಬ್ಬ ಈಗಾಗಲೇ ಶುರು ಆಗಿದೆ.

ಮೊದಲ ಹಾಡು 'ಅಭಿಮಾನಿಗಳೇ ನಮ್ಮನೆ ದೇವರು' ಈಗಾಗಲೇ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಮೃತ ಹಸ್ತದಲ್ಲಿ ಬಿಡುಗಡೆ ಆಗಿದ್ದೂ ಆಯ್ತು, ಅಭಿಮಾನಿಗಳ ಬಾಯಲ್ಲಿ ಅದು ಬಾಯಿ ಪಾಠ ಆಗಿದ್ದು ಆಯ್ತು.['ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇನ್ನೂ ಕೇಳಿಲ್ವಾ.?]


Watch 'Thraas Aakkathi' Song by Kannada Movie 'Dodmane Huduga'

ಇದೀಗ ಎರಡನೇ ಹಾಡು ಹೊರಬಿದ್ದಿದೆ. ಈ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಕಂಪೋಸ್ ಮಾಡಿರುವ ಎರಡನೇ ಹಾಡು, 'ಥ್ರಾಸ್ ಆಕ್ಕತಿ' ನಟ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಡ್ಯುಯೆಟ್ ನಲ್ಲಿ ತುಂಬಾ ಸುಂದರವಾಗಿ ಮೂಡಿಬಂದಿದೆ.['ದೊಡ್ಮನೆ ಹುಡ್ಗ' ಆಡಿಯೋ ಹಬ್ಬ ಇಂದಿನಿಂದ ಶುರು]


Watch 'Thraas Aakkathi' Song by Kannada Movie 'Dodmane Huduga'

ಪಕ್ಕಾ ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿಬಂದಿರುವ 'ಥ್ರಾಸ್ ಆಕ್ಕೆತಿ' ಲಿರಿಕಲ್ ಹಾಡು, ವಿಭಿನ್ನವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಯೋಗರಾಜ್ ಭಟ್ರು ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವಿ ಹರಿಕೃಷ್ಣ ಮತ್ತು ಇಂದು ನಾಗರಾಜ್ ಅವರು ಧ್ವನಿ ನೀಡಿದ್ದಾರೆ.


ಒಟ್ನಲ್ಲಿ ಹಾಡಿನಿಂದಲೇ ಭಾರಿ ಸೌಂಡ್ ಮಾಡುತ್ತಿರುವ 'ದೊಡ್ಮನೆ ಹುಡುಗ' ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಇದೀಗ ಚಿತ್ರದ ಎರಡನೇ ಹಾಡನ್ನು ನೋಡಿ ಎಂಜಾಯ್ ಮಾಡಿ....


English summary
Watch Thraas Aakkathi Full Song from Doddmane Hudga, starring Power Star Puneeth Rajkumar, Dr. Ambareesh, Radhika Pandith and others. Directed by Suri. Music Composed by V.Harikrishna.
Please Wait while comments are loading...

Kannada Photos

Go to : More Photos