»   »  'ಸಮಯದ ತಿರುವು ಹಾಡು..' ಕದ್ದದ್ದಲ್ಲ ಮಾರಾಯ್ರೆ!

'ಸಮಯದ ತಿರುವು ಹಾಡು..' ಕದ್ದದ್ದಲ್ಲ ಮಾರಾಯ್ರೆ!

Posted by:
Subscribe to Filmibeat Kannada

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ ಚಿತ್ರದ ಎರಡನೇ ಹಾಡಿನ ವಿಡಿಯೋ ಅಭಿಮಾನಿಗಳಿಗೆ ಈಗ ಲಭ್ಯವಿದೆ. ಹೊರ ಪ್ರಣಯರಾಜ ಕಿಶೋರ್ ಹಾಗೂ ಯಜ್ಞಾ ಅವರಿರುವ 'ಘಾಟಿಯ ಇಳಿದು..' ಹಾಡಿನ ವಿಡಿಯೋ ನೋಡಿ ಥ್ರಿಲ್ ಆದ ಸಿನಿರಸಿಕರು 'ಸಮಯದ ತಿರುವು ಹಾಡು .. Knock Knock ಹಾಡನ್ನು ಸ್ವಾಗತಿಸಿದ್ದಾರೆ.

ಹಾಡಿನಲ್ಲಿ ಬಳಸಲಾದ ದೃಶ್ಯಗಳು ಒಮ್ಮೆಗೆ ಸೆಳೆದು ಬಿಡುತ್ತದೆ. ಇಬ್ಬರು ಬಾಲ ಕಲಾವಿದರು, ಹಳೆ ಅಂಬಾಸಿಡರ್ ಕಾರು, ಚರ್ಚ್ ಪಾದ್ರಿ ಪಾತ್ರಧಾರಿ ಚಿತ್ರಕರ್ಮಿ ಬಿ . ಸುರೇಶ, ಬಾಲ ಕಲಾವಿದೆ ಕೈಯಲ್ಲಿರುವ ಹಳೆಕಾಲದ ಕೆಮೆರಾ ಎಲ್ಲವೂ ದೃಶ್ಯಕಾವ್ಯ ಎನಿಸುತ್ತದೆ.

ಈ ನಡುವೆ ಈ ಹಾಡಿನ ಟ್ಯೂನ್ ಬಗ್ಗೆ ಅನೇಕ ಜನ ಅಪಸ್ವರ ಎತ್ತಿದ್ದು ಇದೆ. ಈಗಾಗಲೇ ಈ ಬಗ್ಗೆ ಸಂಗೀತಗಾರ ಅಜನೀಶ್ ಲೋಕನಾಥ್ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ. ಆದರೆ, ಮತ್ತೊಮ್ಮೆ ಫೇಸ್ ಬುಕ್ ಪುಟದಲ್ಲಿ ಈ ಬಗ್ಗೆ ರಕ್ಷಿತ್ ವಿವರಣೆ ನೀಡಿದ್ದು ಇಲ್ಲಿದೆ:

ಸುನಿ ಸಿನಿಮಾಸ್ ನಿರ್ಮಾಣದ ಆನಂದ್ ಆಡಿಯೋ ಹೊರ ತಂದಿರುವ ಉಳಿದವರು ಕಂಡಂತೆ ಚಿತ್ರದ ಆಡಿಯೋಗಳ ಕಾಲರ್ ಟ್ಯೂನ್ UKAN ಎಂದು ಎಸ್ಎಂಎಸ್ ಮಾಡಿ 54646ಗೆ ಕಳಿಸಿ. ಹಾಡಿನ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ.. ತಪ್ಪದೇ ಹಾಡಿನ ವಿಡಿಯೋ ನೋಡಿ..

Post by Rakshit Shetty.

ನಾಕ್ ನಾಕ್ ಹಾಗೂ ಬ್ಯಾಂಗ್ ಬ್ಯಾಂಗ್ ಬಗ್ಗೆ ರಕ್ಷಿತ್

ನಾಕ್ ನಾಕ್ ಹಾಗೂ ಬ್ಯಾಂಗ್ ಬ್ಯಾಂಗ್ ಬಗ್ಗೆ ರಕ್ಷಿತ್

Knock Knock ಹಾಡನ್ನು ಕಿಲ್ ಬಿಲ್ ಸರಣಿ ಚಿತ್ರಗಳ ಬ್ಯಾಂಗ್ ಬ್ಯಾಂಗ್ ನಿಂದ ಯಥಾವತ್ತು ಕಾಪಿ ಪೇಸ್ಟ್ ಮಾಡಿಲ್ಲ. ನಾಕ್ ನಾಕ್ ಹಾಡಿನ ಚಿತ್ರೀಕರಣ ಮಾಡುವಾಗ ಟ್ರ್ಯಾಕ್ ಇನ್ನೂ ರೆಡಿ ಇರಲಿಲ್ಲ. ಆಗ ನನ್ನ ಮನಸ್ಸಿನಲ್ಲಿ ಕಿಲ್ ಬಿಲ್ ನ್ಯಾನ್ಸಿ ಸಿನಾಟ್ರಾ ಅವರ ಬ್ಯಾಂಗ್ ಬ್ಯಾಂಗ್ ಟ್ಯೂನ್ ಓಡುತ್ತಿತ್ತು.ಅಂಥ ಅದ್ಭುತ ಸಂಯೋಜನೆಗೆ ಗೌರವ ಸೂಚಕವಾಗಿ ನಾಕ್ ನಾಕ್ ಹಾಡನ್ನು ವಿನ್ಯಾಸಗೊಳಿಸಲಾಗಿದೆ ಎಂದು ರಕ್ಷಿತ್ ಹೇಳಿದ್ದಾರೆ.

ನಾಕ್ ನಾಕ್ ಹಾಡಿನ ಬಗ್ಗೆ ಇನ್ನಷ್ಟು ಮಾಹಿತಿ

ನಾಕ್ ನಾಕ್ ಹಾಡಿನ ಬಗ್ಗೆ ಇನ್ನಷ್ಟು ಮಾಹಿತಿ

ಸಿ. ಅರ್.ಬಾಬಿಯವರ ಮಾದಕ ಧ್ವನಿಯಲ್ಲಿ ಮೂಡಿ ಬಂದಿರುವ ಈ ಗೀತೆಯ ಹಿನ್ನಲೆಯಲ್ಲಿ ಬರುವ ವಾದ್ಯ ಸಂಗೀತವೂ ಅಷ್ಟೇ ಮಾದಕವಾಗಿದೆ. ಗೀತೆಗೆ ಸಾಹಿತ್ಯ ಒದಗಿಸಿರುವಾರು: ಮನೋಜವ ಗಲಗಲಿ, ವಿಘ್ನೇಶ್ವರ್ ವಿಶ್ವ

Knock Knock ಎನ್ನುತ್ತ ಹೃದಯದ ಬಾಗಿಲನ್ನು ತಟ್ಟುತ್ತಲೇ ಮುಗಿದು ಹೋಗುವ ಸುಂದರ ಗೀತೆಗೆ ಮನೋಜವ ಗಲಗಲಿ, ವಿಘ್ನೇಶ್ವರ ವಿಶ್ವರ ಸಾಹಿತ್ಯ ಇದ್ದೂ ಇಲ್ಲದಂತಿದೆ. ಆದರೆ, ದೃಶ್ಯಗಳು ಮನಸ್ಸಿನ ಉಳಿಯುತ್ತಾ ಯಾವುದೋ ಫ್ಲಾಶ್ ಬ್ಯಾಕ್ ಕಥೆ ಹೇಳುತ್ತವೆ.[ಎಲ್ಲಾ ಹಾಡುಗಳ ವಿಮರ್ಶೆ ಓದಿ]

ನಿರ್ದೇಶಕ ರಕ್ಷಿತ್ ಶೆಟ್ಟಿ ಪ್ರಾಮಾಣಿಕತೆಗೆ ಜೈ

ನಿರ್ದೇಶಕ ರಕ್ಷಿತ್ ಶೆಟ್ಟಿ ಪ್ರಾಮಾಣಿಕತೆಗೆ ಜೈ

ಕನ್ನಡ ಚಿತ್ರರಂಗದಲ್ಲಿ ಹಲವು ಹೊಸತನಗಳನ್ನು ನೀಡುವ ಉತ್ಸಾಹ ಹೊಂದಿರುವ ರಕ್ಷಿತ್ ಶೆಟ್ಟಿ ಹಾಗೂ ಸುನಿ ಅವರ ತಂಡ ಮತ್ತೊಂದು ಮಹತ್ವದ ಮೆಟ್ಟಿಲೇರಿದೆ.

ಸಾಮಾನ್ಯವಾಗಿ ಬೇರೆ ಭಾಷೆಯ ಜನಪ್ರಿಯ ಹಾಡುಗಳನ್ನು ಅದರಲ್ಲೂ ಟ್ಯೂನ್ BGMಗಳನ್ನು ಕನ್ನಡಕ್ಕೆ ಭಟ್ಟಿ ಇಳಿಸಿ ನಮ್ಮದೇ ಸ್ವಂತ ಗೀತೆ ಎನ್ನುವ ಕಾಲದಲ್ಲಿ ರಕ್ಷಿತ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳ ಕಣ್ಣಲ್ಲಿ ಇನ್ನಷ್ಟು ಎತ್ತರಕ್ಕೇರಿದ್ದಾರೆ.

ನಾಕ್ ನಾಕ್ ಗೀತೆಯ ದೃಶ್ಯ ಹಾಗೂ ಹಾಡು ಇಲ್ಲಿದೆ

ಉಳಿದವರು ಕಂಡಂತೆ ಚಿತ್ರದ ನಾಕ್ ನಾಕ್ ಗೀತೆಯ ದೃಶ್ಯ ಹಾಗೂ ಹಾಡಿನ ತುಣುಕು ಇಲ್ಲಿದೆ ನೋಡಿ

ರಕ್ಷಿತ್ ಶೆಟ್ಟಿ ಅವರ ಚಿತ್ರದ ಮೇಲೆ ಯಾರ ಪ್ರಭಾವ

ರಕ್ಷಿತ್ ಶೆಟ್ಟಿ ಅವರ ಚಿತ್ರದ ಮೇಲೆ ಕ್ವಿಂಟಿನ್ ಟಾರಾಟಿನೋ(Quentin Tarantino) ಪ್ರಭಾವ ಇದ್ದರೆ ಅದು ಗೌರವಪೂರ್ವಕ ಸ್ಪೂರ್ತಿ ಅಷ್ಟೆ ತಿಳಿಯಬಹುದು. ಕೆಲ ಸಿನಿರಸಿಕರು ರಾಬರ್ಟ್ ರೋಡ್ರಿಗ್ರೇಜ್ ಮುಂತಾದವರ ಟ್ರ್ಯಾಕ್ ಗಳಿಗೂ ಈ ಚಿತ್ರದ ಟ್ಯಾಕ್ ಗೂ ಹೋಲಿಕೆ ಇದೆ ಎಂದಿದ್ದಾರೆ.

ಅಂಟಾನಿಯೋ ಮಂಟಾನೋ 'ರಿಚ್ಚಿ' ಯಾರಿದು?

ಅಂಟಾನಿಯೋ ಮಂಟಾನೋ 'ರಿಚ್ಚಿ' ಯಾರಿದು?

ಉಳಿದವರು ಕಂಡಂತೆ ಟ್ರೇಲರ್ ನಲ್ಲಿ ರಕ್ಷಿತ್ ಅವರ ರಿಚ್ಚಿ ಪಾತ್ರವನ್ನು ಗಮನಿಸಿದರೆ ಎಲ್ಲೋ ನೋಡಿದ ನೆನಪು ಕೆಲವರಿಗೆ ಬರುತ್ತದೆ. ಪಾತ್ರಧಾರಿ Antonio Montana ಎನ್ನುವ ಮೂಲಕ ಪಾತ್ರದ ಮೂಲ ಸ್ಪೂರ್ತಿಯ ಬಗ್ಗೆ ತಕ್ಷಣವೆ ಸುಳಿವು ನೀಡುತ್ತಾನೆ

Antonio Montana Raimundo ಅಲಿಯಾಸ್ "Tony" Montana 1983ರ ಸ್ಕಾರ್ ಫೇಸ್ ಚಿತ್ರದ ಪಾತ್ರ. ಆಲಿವರ್ ಸ್ಟೋನ್ ಕಥೆಯುಳ್ಳ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಟೋನಿಯಾಗಿ ಕ್ಯೂಬಾ ದೇಶದ ನಿರಾಶ್ರ್ರಿತನ ಪಾತ್ರಧಾರಿಯಾಗಿ ಆಲ್ ಪಾಸಿನೋ ನೀಡಿರುವ ಅದ್ಭುತ ಅಭಿನಯ ಮರೆಯಲು ಸಾಧ್ಯವಿಲ್ಲ

English summary
Watch the Second Full Video Song KNOCK KNOCK from the film 'Ulidavaru Kandante' upcoming movie acted and directed by Rakshith Shetty. Rakshith Shetty has given clarification about similarity of this song with Kill Bill's -Nancy Sinatra- Bang Bang
Please Wait while comments are loading...

Kannada Photos

Go to : More Photos