»   » ಅರ್ಜುನ್ ಜನ್ಯ ತಂಬಾಕು, ಡ್ರಿಂಕ್ಸ್ ಬಿಟ್ಟಿದ್ಯಾಕೆ?

ಅರ್ಜುನ್ ಜನ್ಯ ತಂಬಾಕು, ಡ್ರಿಂಕ್ಸ್ ಬಿಟ್ಟಿದ್ಯಾಕೆ?

Written by: ಜೀವನರಸಿಕ
Subscribe to Filmibeat Kannada

ಇವತ್ತು ತಮ್ಮ ಸಂಗೀತದ ಮೂಲಕ ಮೋಡಿ ಮಾಡ್ತಿರೋ ಅರ್ಜುನ್ ಜನ್ಯ ಅನ್ನೋ ಕಾಮನ್ ಮ್ಯಾನ್ ಸಂಗೀತ ನಿರ್ದೇಶಕ ಅಗ್ಬೇಕು ಅಂದುಕೊಂಡಿದ್ದರ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ. ಅರ್ಜುನ್ ಜನ್ಯ ಮ್ಯಾಜಿಕಲ್ ಕಂಪೋಸರ್ ಆಗೋ ಮೊದ್ಲು ಮ್ಯೂಸಿಕ್ ಕಂಪೋಸರ್ ಆಗೋದಕ್ಕೆ ಪ್ರೇರಣೆಯೇ ಎ ಆರ್ ರೆಹಮಾನ್.

ಎ ಆರ್ ರೆಹಮಾನ್ ಇರದಿದ್ರೆ ನಾನು ಏನಾಗತ್ತಿದ್ದೆ ಅನ್ನೋದು ನಂಗೆ ಗೊತ್ತಿಲ್ಲ ಅಂತಾರೆ ಅರ್ಜುನ್. ಮೊದಲ ಬಾರಿ ಅರ್ಜುನ್ ಜನ್ಯ ಎ ಆರ್ ರೆಹಮಾನ್ ರನ್ನ ಭೇಟಿಯಾದಾಗ ತಮ್ಮನ್ನ ತಾವೇ ಮರೆತಿದ್ರಂತೆ. ತಮ್ಮ ಜೀವನದ ಬಹುದೊಡ್ಡ ಕನಸು ಈಡೇರಿದ ಸಂತಸ ಅವರಲ್ಲಿತ್ತು. ಆ ಸಂಗೀತ ಮಾಂತ್ರಿಕನನ್ನ ನೋಡಿದ ತಕ್ಷಣ ಭಾವಪರವಶರಾಗಿ ಪಾದಕ್ಕೆರಗಿಬಿಟ್ರಂತೆ. [ಗಿನ್ನಿಸ್ ದಾಖಲೆ ಕಡೆಗೆ ಅರ್ಜುನ್ ಜನ್ಯ ತ್ರಿವಿಕ್ರಮ ಹೆಜ್ಜೆ]

ರೆಹಮಾನ್ ಅರ್ಜುನ್ ರನ್ನ ಕೈ ಹಿಡಿದು ಮೆಲೆತ್ತಿದರಂತೆ. ಅದೇನೋ ದೇವರನ್ನ ಕಂಡ ಧನ್ಯತಾ ಭಾವದಲ್ಲಿ ಅರ್ಜುನ್ ಜನ್ಯ ಹೊರಗೆ ಬಂದವರೇ ಜೇಬಲ್ಲಿದ್ದ ತಂಬಾಕು ಪ್ಯಾಕೆಟ್ ಗಳನ್ನ ಅಲ್ಲಿದ್ದ ಚರಂಡಿಗೆ ಎಸೆದುಬಿಟ್ರಂತೆ. ಅವತ್ತಿನಿಂದ ಮದ್ಯ ಸೇವನೆಯನ್ನೂ ನಿಲ್ಲಿಸಿಬಿಟ್ರಂತೆ.

ಅರ್ಜುನ್ ಗೆ ರೆಹಮಾನ್ ಅಂತರಂಗದ ಗುರು
  

ಅರ್ಜುನ್ ಗೆ ರೆಹಮಾನ್ ಅಂತರಂಗದ ಗುರು

ರೆಹಮಾನ್ ರನ್ನ ತಮ್ಮ ಅಂತರಂಗದ ಗುರುವಾಗಿಸಿಕೊಂಡ ಅರ್ಜುನ್ ಅಂದಿನಿಂದ್ಲೇ ನಾನೊಬ್ಬ ದೊಡ್ಡ ಸಂಗೀತ ನಿರ್ದೇಶಕ ಆಗೀಯೇ ಆಗ್ತೀನಿ ಅನ್ನೋ ಪಣ ತೊಟ್ಟಿದ್ದು. ಆ ನಂತರ ಕನ್ನಡದಲ್ಲಿ 'ಯುಗ' ಸಿನಿಮಾದಿಂದ ಅರ್ಜುನ್ ರ ಮ್ಯೂಸಿಕ್ ಯುಗ ಶುರುವಾಯ್ತು.

ಕನ್ನಡದ ಎಆರ್ ರೆಹಮಾನ್ ಅಂದ್ರೆ ಥ್ರಿಲ್
  

ಕನ್ನಡದ ಎಆರ್ ರೆಹಮಾನ್ ಅಂದ್ರೆ ಥ್ರಿಲ್

ಈಗ ಅರ್ಜುನ್ ಜನ್ಯರ ಗೆಟಪ್ ಮತ್ತು ಸಂಗೀತವನ್ನ ನೋಡಿ ಅಭಿಮಾನಿಗಳು ಮತ್ತು ಚಿತ್ರರಂಗದವರು ಕನ್ನಡದ ಎ ಅರ್ ರೆಹಮಾನ್ ಅಂತಾರೆ. ಇದನ್ನ ಕೇಳಿ ಥ್ರಿಲ್ಲಾಗ್ತಾರೆ ಅರ್ಜುನ್ ಜನ್ಯ.

ಮೊದಲ ಗುರು ವಿ ಮನೋಹರ್
  

ಮೊದಲ ಗುರು ವಿ ಮನೋಹರ್

ಇನ್ನು ತಮ್ಮ ಸಂಗೀತದ ಮೊದಲ ಗುರುಗಳು ವಿ ಮನೋಹರ್ ಅಂತ ಹೆಮ್ಮಯಿಂದ ಹೇಳೋ ಅರ್ಜುನ್ ಜನ್ಯ ತಾನು ಈ ಮಟ್ಟಿಗೆ ಬೆಳೆಯೋಕೆ ವಿ ಮನೋಹರ್ ಅವರೂ ಕಾರಣ ಅಂತಾರೆ.

ರೆಹಮಾನ್ ಗಾಡ್ ಸಿನಿಮಾದಲ್ಲಿ ಕಿಚ್ಚ ಗಾಡ್ ಫಾದರ್
  

ರೆಹಮಾನ್ ಗಾಡ್ ಸಿನಿಮಾದಲ್ಲಿ ಕಿಚ್ಚ ಗಾಡ್ ಫಾದರ್

ಅರ್ಜುನ್ ಜನ್ಯರ ಸಂಗೀತ ಆರಂಭದಲ್ಲಿ ಯಶಸ್ವಿಯಾಗಲಿಲ್ಲ. 12 ಸಿನಿಮಾ ಮುಗಿದ್ರೂ ಅರ್ಜುನ್ ಜನ್ಯ ಅನ್ನೋ ಮ್ಯೂಸಿಕ್ ಡೈರೆಕ್ಟರ್ ದೊಡ್ಡ ಹೆಸರನ್ನೇನೂ ಮಾಡಿರ್ಲಿಲ್ಲ. ಆದರೆ 13ನೇ ಸಿನಿಮಾಗೆ 'ಕೆಂಪೇಗೌಡ' ಸಿನಿಮಾದ ಮ್ಯೂಸಿಕ್ ಗೆ ಕಿಚ್ಚ ಅವಕಾಶ ಕೊಟ್ರು. ಅಲ್ಲಿಂದ ಅರ್ಜುನ್ ಲಕ್ಕೇ ಬದಲಾಯ್ತು. ಹಾಗಾಗೀನೇ ಕಿಚ್ಚನನ್ನ ಗಾಡ್ ಫಾದರ್ ಅಂತಾರೆ ಅರ್ಜುನ್.

ದುನಿಯಾ ವಿಜಯ್ ವೆಲ್ ವಿಶರ್
  

ದುನಿಯಾ ವಿಜಯ್ ವೆಲ್ ವಿಶರ್

ಮೊದಲ ಸಿನಿಮಾದಲ್ಲಿ ನನ್ನನ್ನೂ ಒಬ್ಬ ಸಂಗೀತ ನಿರ್ದೇಶಕ ಅಂತ ಕನ್ಸಿಡರ್ ಮಾಡಿ ಅವಕಾಶ ಕೊಟ್ಟ ದುನಿಯಾ ವಿಜಿಯವರನ್ನ ಕೂಡ ನನ್ನ ಉತ್ತಮ ಗೆಳೆಯ ವೆಲ್ ವಿಶರ್ ಅಂತ ನೆನೀತಾರೆ ಅರ್ಜುನ್.

ಐದು ವರ್ಷ ಮುಗಿಸಿದ ಮ್ಯೂಸಿಕ್ ಮೋಡಿಗಾರ
  

ಐದು ವರ್ಷ ಮುಗಿಸಿದ ಮ್ಯೂಸಿಕ್ ಮೋಡಿಗಾರ

ಒಟ್ಟಾರೆ ಅರ್ಜುನ್ ಜನ್ಯ ಅನ್ನೋ ಮ್ಯೂಸಿಕ್ ಮೋಡಿಗಾರ ಭರ್ಜರಿ ಸಿನಿ ಜೀವನದ ಐದು ವರ್ಷಗಳಲ್ಲಿ ಸಂಗೀತ ಪ್ರೇಮಿಗಳಿಗೆ ಹಬ್ಬ ನೀಡಿದ್ದಾರೆ. ಅರ್ಜುನ್ ಇಂತಹದ್ದೇ ನೂರಾರು ಯಶಸ್ವಿ ಸಿನಿಮಾ ನೀಡಲಿ.

English summary
Arjun Janya started his career by assisting composers such as V. Manohar and K. Kalyan. He worked as a keyboard player for around 30 films. Arjun Janya is one of the Magical composer of Kannada Film Industry. A meeting between Arjun and Oscar winning composer A. R. Rahman changed his fortunes in the music industry.
Please Wait while comments are loading...

Kannada Photos

Go to : More Photos