ರಕ್ಷಿತಾ ತರಹದ ಜೋಡಿ ನನಗೆ ಮತ್ತೆ ಸಿಗಲಿಲ್ಲ; ದರ್ಶನ್

Posted by:

'ಶೌರ್ಯ' ಚಿತ್ರ ನಿರೀಕ್ಷಿಸಿದ ಮಟ್ಟ ತಲುಪದೆ ಇರುವುದಕ್ಕೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಬೇಸರಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಬೇಕಾಗಿರುವುದು ಮಾಸ್, ಕ್ಲಾಸ್, ಕಲಾತ್ಮಕ ಚಿತ್ರಗಳಲ್ಲ ಮನರಂಜನಾತ್ಮಕ ಚಿತ್ರಗಳು ಎಂಬ ಜ್ಞಾನೋದಯ ದರ್ಶನ್‌ಗೆ ತಡವಾಗಿ ಆದಂತಿದೆ.

ಅದು ಯಾವುದೇ ಕ್ಯಾಟಗರಿ ಚಿತ್ರ ಆಗಿರಬಹುದು ಒಟ್ಟಾರೆಯಾಗಿ ಮನರಂಜನಾತ್ಮಕ ಚಿತ್ರವಾಗಿರಬೇಕು ಎಂಬುದು ದರ್ಶನ್ ಅವರ ಅಭಿಪ್ರಾಯ. ತಮ್ಮ ಚಿತ್ರಗಳಿಗೆ ಈಕೆಯೇ ನಾಯಕಿ ಆಗಬೇಕೆಂದು ನಿರ್ಮಾಪಕರಿಗೆ ದರ್ಶನ್ ಗಂಟುಬಿದ್ದವರಲ್ಲ. ಚಿತ್ರದ ನಾಯಕಿಯ ಆಯ್ಕೆ ನಿರ್ಮಾಪಕರಿಗೆ ಬಿಟ್ಟ ವಿಚಾರ ಎನ್ನುತ್ತಾರೆ ದರ್ಶನ್. ಆದರೆ ರಕ್ಷಿತಾ ಇಲ್ಲದೆ ಇರುವ ಕೊರಗು ಸ್ವಲ್ಪ ಮಟ್ಟಿಗೆ ದರ್ಶನ್‌ರನ್ನು ಕಾಡುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ರಕ್ಷಿತಾ, ದರ್ಶನ್ ಜೋಡಿ ಯಶಸ್ವಿ ಜೋಡಿ ಅನ್ನಿಸಿಕೊಂಡಿತ್ತು. ಈ ಮಾತನ್ನು ದರ್ಶನ್ ಸಹ ಒಪ್ಪುತ್ತಾರೆ. ಚಿತ್ರ ನಿರ್ದೇಶಕ ಪ್ರೇಮ್‌ರನ್ನು ಮದುವೆಯಾದ ಬಳಿಕ ಆಕೆಯ ಸ್ಥಾನ ಬರಿದಾಗಿದೆ ಎಂದಿದ್ದಾರೆ ಪ್ರೇಮ್. ಚಿತ್ರರಂಗದಿಂದ ರಕ್ಷಿತಾ ದೂರ ಸರಿದಮೇಲೆ ದರ್ಶನ್ ಆ ರೀತಿಯ ಒಳ್ಳೆಯ ಜೋಡಿ ಮತ್ತೆ ಸಿಗಲಿಲ್ಲ.

ಸುಂಟರಗಾಳಿ, ಮಂಡ್ಯ, ಅಯ್ಯ, ಕಲಾಸಿಪಾಳ್ಯ ದಂತಹ ಚಿತ್ರಗಳಲ್ಲಿ ನಟಿಸುವ ಮೂಲಕ ದರ್ಶನ್ ಅವರಿಗೆ ಸಾಥ್ ನೀಡಿದ್ದ ರಕ್ಷಿತಾ ದೂರ ಸರಿದ ಮೇಲೆ ದರ್ಶನ್ ಚಿತ್ರಗಳು ಬಿರುಗಾಳಿಗೆ ಸಿಕ್ಕಂತಾದವು ಎಂಬುದು ಗಾಂಧಿನಗರದ ಪಂಡಿತರ ಅಭಿಪ್ರಾಯ. ದರ್ಶನ್ ಚಿತ್ರಗಳ ಸೋಲಿಗೆ ಪರೋಕ್ಷವಾಗಿ ರಕ್ಷಿತಾ ಸಹ ಕಾರಣ ಎಂಬ ಮಾತಿನಲ್ಲಿ ಹುರುಳಿಲ್ಲ ಎನ್ನಲಾಗದು?

Read more about: ರಕ್ಷಿತಾ, ದರ್ಶನ್, ಶೌರ್ಯ, ಸುಂಟರಗಾಳಿ, ಕಲಾಸಿಪಾಳ್ಯ, ಅಯ್ಯ, rakshitha, shourya, darshan, suntaragaali, mandya, kalasipalya

Kannada Photos

Go to : More Photos