» 

ಕನ್ನಡಕ್ಕೆ ಹೊಸ ಲೇಡಿ ವಿಲನ್ 'ಐಟಂ' ಮುಮೈತ್ ಖಾನ್

Posted by:
 
Share this on your social network:
   Facebook Twitter Google+    Comments Mail

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಶೌರ್ಯ' ಚಿತ್ರದಲ್ಲಿ ಕುಣಿದು ಪಡ್ಡೆಗಳ ನಿದ್ದೆಗೆಡಿಸಿದ್ದ ಐಟಂ ರಾಣಿ ಮುಮೈತ್ ಖಾನ್ ಮತ್ತೊಂದು ಕನ್ನಡ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಐಟಂ ಪಾತ್ರಗಳಿಗಷ್ಟೇ ಸೀಮಿತವಾಗಿದ್ದ ಈಕೆ ಈಗ ನೆಗಟೀವ್ ಪಾತ್ರವನ್ನು ಒಪ್ಪಿಕೊಂಡಿರುವುದು ವಿಶೇಷ.

ಮುಮೈತ್ ಖಾನ್ ನೋಟ, ಬಾಡಿ ಲಾಗ್ವೇಂಜ್ ಎಲ್ಲವೂ ಲೇಡಿ ವಿಲನ್ ಪಾತ್ರಕ್ಕೆ ಒಪ್ಪುವಂತಿದ್ದು ಆಕೆ ನೆಗಟೀವ್ ಪಾತ್ರವನ್ನು ಸೈ ಎಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಲೇಡಿ ವಿಲನ್‌ಗಳ ಕೊರತೆ ಇದ್ದು ಮುಮೈತ್ ಖಾನ್ ಆ ಸ್ಥಾನವನ್ನು ತುಂಬಲಿದ್ದಾರೆ. ಅಂದಹಾಗೆ ಆಕೆ ಒಪ್ಪಿಕೊಂಡಿರುವ ಚಿತ್ರವ ವಿವರಗಳು ಇನ್ನಷ್ಟೆ ಹೊರಬೀಳಬೇಕಾಗಿದೆ.

ಸದ್ಯಕ್ಕೆ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಮುಮೈತ್ ಖಾನ್ ಬಿಡುವಿಲ್ಲದ ನಟಿ. "ಈ ಹಿಂದೆಯೂ ನನಗೆ ನೆಗಟೀವ್ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ಬಂದಿತ್ತು. ಆದರೆ ನಾನೇ ಬೇಡ ಎಂದಿದ್ದೆ. ಆದರೆ ಈಗ ಕನ್ನಡ ಚಿತ್ರದಲ್ಲಿ ಅಭಿನಯಿಸಲು ಮನಸ್ಸು ಮಾಡಿದ್ದೇನೆ" ಎನ್ನುತ್ತಾರೆ ಮುಮೈತ್.

Topics: ಮುಮೈತ್ ಖಾನ್, ವಿಲನ್, ಖಳನಟ, ಶೌರ್ಯ, ದರ್ಶನ್, ಐಟಂ, mumaith khan, villain, shourya, darshan, item song
English summary
Item actress Mumaith Khan enters as Lady Villain to Kannada film. She accept to do a negative role in Kannada film. Previously she is acted in Darshan lead movie Shourya. This film will be going on floors soon.Details about this Kannada film are awaited.

Kannada Photos

Go to : More Photos