ಚಿತ್ರಮಂದಿರಕ್ಕಾಗಿ ಕಿಚ್ಚ ಹುಚ್ಚ, ಜಾಕಿ ನಡುವೆ ಜಟಾಪಟಿ

Posted by:

ಕನ್ನಡ ಚಿತ್ರೋದ್ಯಮದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಎರಡು ಚಿತ್ರಗಳು ಮುಂದಿನ ವಾರ ತೆರೆಗೆ ಅಪ್ಪಳಿಸಲಿವೆ. ಒಂದು ಸುದೀಪ್ ಅಭಿನಯದ 'ಕಿಚ್ಚ ಹುಚ್ಚ' ಹಾಗೂ ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ'. ಈ ಎರಡು ಚಿತ್ರಗಳು ಒಂದೇ ಚಿತ್ರಮಂದಿರದಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿರುವುದು ವಿಶೇಷ!

ಕಿಚ್ಚ ಹುಚ್ಚ ಚಿತ್ರ ನಿರ್ಮಾಪಕ ಕೆ ಮಂಜು ಮತ್ತ್ತು 'ಜಾಕಿ' ಚಿತ್ರದ ವಿತರಕ ಜಯಣ್ಣ ಕೆ ಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕು ಎಂದು ಪಟ್ಟು ಹಿಡಿದ್ದಾರೆ. ಚಿತ್ರಮಂದಿರಕ್ಕಾಗಿ ಇಬರಿಬ್ಬರ ನಡುವೆ ಜಟಾಪಟಿ ಶುರುವಾಗಿದೆ. ಚಿತ್ರಮಂದಿರವನ್ನು ತಮಗೆ ಬಿಟ್ಟುಕೊಡುವುದಾಗಿ ಜಯಣ್ಣ ಹೇಳಿದ್ದರು. ಆದರೆ ಕೊನೆ ಗಳಿಕೆಯಲ್ಲಿ ಕೈಕೊಟ್ಟಿದ್ದಾರೆ ಎಂಬುದು ಕೆ ಮಂಜು ಆರೋಪ.

ಪತ್ರಿಕೆಯ ಜಾಹೀರಾತುಗಳಲ್ಲಿ 'ಜಾಕಿ' ಹಾಗೂ 'ಕಿಚ್ಚ ಹುಚ್ಚ' ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಲಾಗಿದೆ. ಸದ್ಯಕ್ಕೆ ಎರಡಲ್ಲಿ ಯಾವ ಚಿತ್ರ ಸಂತೋಷ್ ಚಿತ್ರಮಂದಿರದಲ್ಲಿ ತೆರೆಕಾಣುತ್ತದೋ ಎಂಬುದು ನಿಗೂಢವಾಗಿದೆ.

Topics: ಜಾಕಿ, ಕಿಚ್ಚ ಹುಚ್ಚ, ಪುನೀತ್ ರಾಜ್ ಕುಮಾರ್, ಸುದೀಪ್, ಕೆ ಮಂಜು, ಸಂತೋಷ್, ಭಾವನಾ, ರಮ್ಯಾ, jackie, kiccha huccha, puneeth rajkumar, bhavana, k manju, sudeep, ramya

Kannada Photos

Go to : More Photos