ಪತ್ನಿ ಪೀಡಕ ಪಟ್ಟದಿಂದ ಮುಕ್ತಿಪಡೆದ ಆನಂದ್

Posted by:

ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧ ಆರೋಪಗಳನ್ನು ಎದುರಿಸುತ್ತಿದ್ದ ನಿರೂಪಕ, ನಟ ಆನಂದ್, ಈಗ ಅವೆಲ್ಲವುಗಳಿಂದಲೂ ಮುಕ್ತಿಪಡೆದು ನಿರಾಳವಾಗಿದ್ದಾರೆ. ಅವರ ಮೇಲಿನ ಆರೋಪಗಳೆಲ್ಲವುಗಳಿಂದ ಅವರನ್ನು ಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

"ತನ್ನ ಗಂಡ ಅಥವಾ ಅವರ ಹೆತ್ತವರು ವರದಕ್ಷಿಣೆ ಕೇಳಿದ್ದಾಗಲೀ, ವರದಕ್ಷಿಣಿ ಕಿರುಕುಳ ನೀಡಿದ್ದಾಗಲೀ ಅಥವಾ ಯಾವುದೇ ರೀತಿಯ ದೌರ್ಜನ್ಯ ಮಾಡಿದ್ದಾಗಲೀ ಇಲ್ಲ. ಈ ಆರೋಪಗಳನ್ನು ನಾನು ಹಿಂದಕ್ಕೆ ಪಡೆಯುತ್ತಿದ್ದೇನೆ" ಎಂದು ಆನಂದ್ ಪತ್ನಿ ಭರಣಿ ಎರಡನೇ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿಗಳಲ್ಲಿ ಭಿನ್ನವಿಸಿಕೊಂಡಿದ್ದರು.

ಗಂಡನ ಮೇಲಿನ ಎಲ್ಲಾ ಆರೋಪಗಳನ್ನೂ ನಿರಾಕರಿಸುವ ಮೂಲಕ ಸ್ವತಃ ಆನಂದ್ ಪತ್ನಿ ಭರಣಿ, ಸಂಕಷ್ಟದಿಂದ ಪತಿಯನ್ನು ಪಾರುಮಾಡಿದ್ದಾರೆ. ಸಮಸ್ಯೆಗಳೆಲ್ಲವೂ ಪರಿಹಾರ ಆಗಿದೆಯೋ ಇಲ್ಲವೋ, ಆದರೆ ರಾಜಿ ಮಾಡಿಕೊಂಡು ಗಂಡನ ಮೇಲಿನ ಆರೋಪಗಳನ್ನು ಭರಣಿ ಹಿಂದಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲೀಗ ಎರಡೂ ಕುಟುಂಬಗಳೂ ನಿಟ್ಟುಸಿರುಬಿಟ್ಟಿವೆ. (ಒನ್ ಇಂಡಿಯಾ ಕನ್ನಡ)

Read more about: ಆನಂದ್, ರಮ್ಯಾ ಬಾರ್ನಾ, anand, ramya barna
English summary
Wife Abuser Kannada Actor Anand Acquitted from Dowry Harassment Case.
Please Wait while comments are loading...

Kannada Photos

Go to : More Photos