twitter
    For Quick Alerts
    ALLOW NOTIFICATIONS  
    For Daily Alerts

    'ಹೆಬ್ಬುಲಿ' ನೋಡೋಕು ಮುಂಚೆ, ನೀವು ತಿಳಿಯಬೇಕಾದ ಸಂಗತಿಗಳು

    By Bharath Kumar
    |

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರ ಇದೇ ವಾರ (ಫೆಬ್ರವರಿ 23) ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಆನ್ ಲೈನ್ ಬುಕ್ಕಿಂಗ್ ಶುರುವಾಗಿದ್ದು, ಫಸ್ಟ್ ಡೇ, ಫಸ್ಟ್ ಶೋ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ಕಾಯ್ತಿದ್ದಾರೆ.['ಹೆಬ್ಬುಲಿ' ಬೇಟೆ ಇದೇ ಗುರುವಾರದಿಂದಲೇ.. ಬದಲಾವಣೆ ಇಲ್ಲ..!]

    ಅಷ್ಟಕ್ಕೂ, ಬಿಡುಗಡೆಗೂ ಮುಂಚೆ 'ಹೆಬ್ಬುಲಿ' ಇಷ್ಟೊಂದು ಕ್ರೇಜ್ ಹುಟ್ಟುಹಾಕಲು ಕಾರಣವೇನು? ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯದಲ್ಲೂ 'ಹೆಬ್ಬುಲಿ' ಘರ್ಜಿಸುತ್ತಿರುವುದಕ್ಕೆ ಕಾರಣವೇನು?

    ಇಲ್ಲಿದೆ ನೋಡಿ 'ಹೆಬ್ಬುಲಿ'ಯ ಅಬ್ಬರ ಹೆಚ್ಚಾಗುವಂತೆ ಮಾಡಿದ ಇಂಟ್ರೆಸ್ಟಿಂಗ್ ವಿಚಾರಗಳು.

    ಕಿಚ್ಚ ಸುದೀಪ್ ನಾಯಕ

    ಕಿಚ್ಚ ಸುದೀಪ್ ನಾಯಕ

    'ಹೆಬ್ಬುಲಿ'.....ಕಿಚ್ಚ ಸುದೀಪ್ ಎಂಬ ಒಂದು ಹೆಸರು ಇಡೀ ಪ್ರೇಕ್ಷಕ ವರ್ಗವನ್ನ ಚಿತ್ರಮಂದಿರಕ್ಕೆ ಕರೆದುಕೊಂಡು ಬರುವ ಶಕ್ತಿ ಹೊಂದಿದೆ. ಹೀಗಾಗಿ 'ಹೆಬ್ಬುಲಿ' ಬಿಡುಗಡೆಗೂ ಮುಂಚೆ ಈ ಮಟ್ಟಿಗೆ ಘರ್ಜಿಸುವುದಕ್ಕೆ ಸುದೀಪ್ ಮೇನ್ ಅಟ್ರ್ಯಾಕ್ಷನ್.['ಹೆಬ್ಬುಲಿ' ಚಿತ್ರವನ್ನ ಎಲ್ಲರಿಗಿಂತ ಮೊದಲು ನೋಡುವ ಗೋಲ್ಡನ್ ಚಾನ್ಸ್ ಇಲ್ಲಿದೆ.! ]

    ಪ್ಯಾರಾ ಕಮಾಂಡೋ ಆಫೀಸರ್

    ಪ್ಯಾರಾ ಕಮಾಂಡೋ ಆಫೀಸರ್

    ಇದೇ ಮೊದಲ ಬಾರಿಗೆ ಸುದೀಪ್ 'ಪ್ಯಾರಾ ಕಮಾಂಡೋ ಆಫೀಸರ್' ಆಗಿ ಕಾಣಿಸಿಕೊಂಡಿರುವುದು ಚಿತ್ರ ಜಗತ್ತಿನಲ್ಲಿ ಇನ್ನಿಲ್ಲದ ನಿರೀಕ್ಷೆ ಹುಟ್ಟಿಸಿದೆ. ಇಷ್ಟು ದಿನ ಪೊಲೀಸ್ ಪಾತ್ರಗಳಲ್ಲಿ ನೋಡುತ್ತಿದ್ದ ಸುದೀಪ್ ಅವರನ್ನ ಹೆಬ್ಬುಲಿ ಚಿತ್ರದಲ್ಲಿ ಗಡಿಕಾಯೋ ಸಿಪಾಯಿ ಪಾತ್ರದಲ್ಲಿ ನೋಡಬಹುದು ಎಂಬುದು ವಿಶೇಷವಾಗಿದೆ.

    'ಹೆಬ್ಬುಲಿ' ಹೇರ್ ಸ್ಟೈಲ್

    'ಹೆಬ್ಬುಲಿ' ಹೇರ್ ಸ್ಟೈಲ್

    'ಹೆಬ್ಬುಲಿ' ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಸುದೀಪ್ ಹೇರ್ ಸ್ಟೈಲ್. ತನ್ನ ಸ್ಟೈಲಿಶ್ ಹೇರ್ ಮೂಲಕ ಗಮನ ಸೆಳೆಯುತ್ತಿದ್ದ ಅಭಿನಯ ಚಕ್ರವರ್ತಿ, 'ಹೆಬ್ಬುಲಿ' ಚಿತ್ರದಲ್ಲಿ ಹೇರ್ ಕಟ್ ಮಾಡಿಸಿ, ಹೊಸದೊಂದು ರೂಪ ಕೊಟ್ಟಿದ್ದರು. ಸದ್ಯ, ಈ ಹೇರ್ ಸ್ಟೈಲ್ 'ಹೆಬ್ಬುಲಿ' ಹೇರ್ ಸ್ಟೈಲ್ ಅಂತಾನೇ ಫೇಮಸ್ ಆಗಿದೆ. ಹಾಗಾಗಿ, ಚಿತ್ರಮಂದಿರದಲ್ಲಿ ಈ ಹೇರ್ ಸ್ಟೈಲ್ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.[ಕಿಚ್ಚ ಬಿಚ್ಚಿಟ್ಟ 'ಹೆಬ್ಬುಲಿ' ಹೇರ್ ಸ್ಟೈಲ್ ಕಹಾನಿ..!]

    'ಹೆಬ್ಬುಲಿ' ಕಥೆ ಏನು?

    'ಹೆಬ್ಬುಲಿ' ಕಥೆ ಏನು?

    ಭಾರತ ಹಾಗೂ ಪಾಕಿಸ್ತಾನ ನಡುವಿನ ಉಗ್ರರ ದಮನದ ಕಥೆಯೇ 'ಹೆಬ್ಬುಲಿ' ಕಥೆ ಎಂದು ಹೇಳಲಾಗಿದೆ. ಪ್ರಪಂಚಕ್ಕೆ ಕಂಟಕವಾಗಿರುವ ಉಗ್ರರನ್ನ, ಅವರಿಗೆ ರಕ್ಷಣೆ ನೀಡುತ್ತಿರುವ ದೇಶಕ್ಕೆ ನುಗ್ಗಿ ಹೊಡೆಯುವ ಧೀರ ಪರಾಕ್ರಮಶಾಲಿ ಕಮಾಂಡರ್ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರಂತೆ. ಹೀಗಾಗಿ ಚಿತ್ರದ ಕಥೆ ಬಗ್ಗೆ ಬಾರಿ ಕುತೂಹಲವಿದೆ.['ಹೆಬ್ಬುಲಿ' ಚಿತ್ರ ನೋಡೋಕು ಮುನ್ನ ಈ ವಿಷ್ಯಾ ತಿಳಿದುಕೊಳ್ಳಿ..!]

    ರವಿಚಂದ್ರನ್-ಸುದೀಪ್ ಜೋಡಿ

    ರವಿಚಂದ್ರನ್-ಸುದೀಪ್ ಜೋಡಿ

    'ಹೆಬ್ಬುಲಿ' ಶುರುವಾದಗನಿಂದಲೂ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುದೀಪ್ ಕಾಂಬಿನೇಷನ್ ನಿರೀಕ್ಷೆ ಹೆಚ್ಚಿಸಿದೆ. 'ಮಾಣಿಕ್ಯ' ಚಿತ್ರದಲ್ಲಿ ತಂದೆ-ಮಗನಾಗಿ ಕಾಣಿಸಿಕೊಂಡಿದ್ದ ಈ ಜೋಡಿ, 'ಹೆಬ್ಬುಲಿ' ಚಿತ್ರದಲ್ಲಿ ಅಣ್ಣ-ತಮ್ಮನಾಗಿ ಅಭಿನಯಿಸಿದ್ದಾರೆ. ಹೀಗಾಗಿ, ಸ್ಯಾಂಡಲ್ ವುಡ್ ನ ಅತ್ಯುತ್ತಮ ಜೋಡಿಯನ್ನ ಮತ್ತೊಮ್ಮೆ ಒಟ್ಟಿಗೆ ನೋಡುವ ಸಂಭ್ರಮದಲ್ಲಿದ್ದಾರೆ ಅಭಿಮಾನಿಗಳು.[ಸುದೀಪ್ ಬದುಕಿನ ಮೊದಲ ಅತ್ಯಂತ ದೊಡ್ಡ ಸಾಧನೆ ಇದು..!]

    ಅಮಲಾ ಪೌಲ್ ನಾಯಕಿ

    ಅಮಲಾ ಪೌಲ್ ನಾಯಕಿ

    'ಹೆಬ್ಬುಲಿ' ಚಿತ್ರದ ಮೂಲಕ ದಕ್ಷಿಣ ಭಾರತದ ಬಹುಭಾಷಾ ನಟಿ ಅಮಲಾ ಪೌಲ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅಲ್ಲು ಅರ್ಜುನ್, ಧನುಶ್, ಅಂತಹ ಸ್ಟಾರ್ ನಟರ ಚಿತ್ರಗಳಲ್ಲಿ ಅಭಿನಯಿಸರುವ ಅಮಲಾ ಅವರನ್ನ ಚಂದನವನದ ತೆರೆಯ ಮೇಲೆ ನೋಡಲು ಕಾಯುವಂತಾಗಿದೆ.

    ರವಿಶಂಕರ್-ಸುದೀಪ್

    ರವಿಶಂಕರ್-ಸುದೀಪ್

    ಸುದೀಪ್ ಚಿತ್ರದಲ್ಲಿ ರವಿಶಂಕರ್ ಇದ್ದರೇ ಅದಕ್ಕೆ ಖದರ್ ಎಂಬ ಮಾತು ಗಾಂಧಿನಗರದಲ್ಲಿ ಹುಟ್ಟಿಕೊಂಡಿದೆ. 'ಕೆಂಪೆಗೌಡ' ಚಿತ್ರದಿಂದ ಒಟ್ಟೊಟ್ಟಿಗೆ ಸಾಗುತ್ತಿರುವ ರವಿಶಂಕರ್ ಮತ್ತು ಸುದೀಪ್, 'ಹೆಬ್ಬುಲಿ'ಯಲ್ಲೂ ಮುಂದುವರೆದಿದ್ದಾರೆ. ಅಂದ್ಹಾಗೆ, ಹೆಬ್ಬುಲಿ ಇವರಿಬ್ಬರ ಕಾಂಬಿನೇಷನ್ 7 ಏಳನೇ ಸಿನಿಮಾ. ಸೋ, ಈ ಚಿತ್ರದಲ್ಲು ರವಿಶಂಕರ್ ಮತ್ತು ಸುದೀಪ್ ನಡುವಿನ ದೃಶ್ಯಗಳು ಥ್ರಿಲ್ ಎನಿಸುವುದ್ರಲ್ಲಿ ಯಾವುದೇ ಅನುಮಾನವಿಲ್ಲ.[ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!]

    ಖಡಕ್ ಖಳನಾಯಕರು

    ಖಡಕ್ ಖಳನಾಯಕರು

    'ಹೆಬ್ಬುಲಿ' ಚಿತ್ರದಲ್ಲಿ ನಾಲ್ಕು ಜನ ಖಳನಾಯಕರಿದ್ದಾರೆ. ಕನ್ನಡದ ಆರಮುಗಂ ರವಿಶಂಕರ್, ಬಹುಬಾಷಾ ನಟ ರವಿಕಿಶನ್, ಜೊತೆಗೆ ಕಬೀರ್ ದುಹಾನ್ ಸಿಂಗ್ ಮತ್ತು ಸಂಪತ್ ರಾಜ್ ಅಭಿನಯಿಸಿದ್ದಾರೆ. ಈ ನಾಲ್ವರ ಜುಗಲ್ ಬಂದಿ 'ಹೆಬ್ಬುಲಿ'ಯಲ್ಲಿ ನೋಡಲೇಬೇಕು.

    ಕಾಶ್ಮೀರದಲ್ಲಿ ಚಿತ್ರೀಕರಣ

    ಕಾಶ್ಮೀರದಲ್ಲಿ ಚಿತ್ರೀಕರಣ

    ಪಾಕಿಸ್ತಾನ ಹಾಗೂ ಭಾರತದ ನಡುವಿನ ಪ್ರಸ್ತುತ ವಿದ್ಯಮಾನಗಳೇ 'ಹೆಬ್ಬುಲಿ' ಚಿತ್ರದ ಕಥಾಹಂದರ ಆಗಿರುವುದರಿಂದ, ಚಿತ್ರದ ಬಹುತೇಕ ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ. ಸುದೀಪ್, ಅಮಲಾ ಪೌಲ್, ಚಿಕ್ಕಣ್ಣ ಸೇರಿದಂತೆ ಐವತ್ತು ಮಂದಿ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿದ್ದರು. ಆಗ ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು. ಶೂಟಿಂಗ್ ಮಾಡಲು ಪರ್ಮಿಷನ್ ಸಿಗದೆ, ಸರ್ಕಸ್ ಮಾಡಿ ಪೊಲೀಸ್ ಬಂದೋಬಸ್ತ್ ನಲ್ಲಿ, ರಕ್ಷಣಾ ಪಡೆಗಳ ಬಂದೂಕಿನ ಕಾವಲಿನಲ್ಲಿ 'ಹೆಬ್ಬುಲಿ' ಚಿತ್ರದ ಚಿತ್ರೀಕರಣ ಮಾಡಿದ್ದಾರೆ. ಹೀಗಾಗಿ, ಕಾಶ್ಮೀರದ ಖದರ್ ತೆರೆಮೇಲೆ ಹೇಗೆ ಬಂದಿದೆ ಎಂಬುದು ಜನರನ್ನ ಕಾಡುತ್ತಿದೆ.

    ಕೃಷ್ಣ ನಿರ್ದೇಶನ

    ಕೃಷ್ಣ ನಿರ್ದೇಶನ

    'ಹೆಬ್ಬುಲಿ' ಎಂದಾಕ್ಷಣ ಒಂದು ಕಡೆ ಸುದೀಪ್ ಕಾಣಿಸಿಕೊಂಡ್ರೆ, ಮತ್ತೊಂದೆಡೆ ನಿರ್ದೇಶಕ ಕೃಷ್ಣ ಅವರ ಪರಿಚಯವಾಗುತ್ತೆ. ಚಿತ್ರದ ಟೈಟಲ್ ನಿಂದ ಹಿಡಿದು ಇಲ್ಲಿಯವರೆಗೂ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ, ಕಾತುರ, ಆಸಕ್ತಿ ಕಾಪಾಡಿಕೊಂಡು ಬಂದಿದ್ದಾರೆ. ಹೀಗಾಗಿ ಅವರ ನಿರ್ದೇಶನ ಹೇಗಿರಲಿದೆ ಎಂಬುದು ಬಹಳ ಮುಖ್ಯವಾಗಿದೆ.['ಹೆಬ್ಬುಲಿ' ಚಿತ್ರದ ಬಗ್ಗೆ ನಿರ್ದೇಶಕ ಕೃಷ್ಣ ಹೇಳಿದಿಷ್ಟು.. ]

    ನಿಮ್ಮ ನಿರೀಕ್ಷೆ ಏನು?

    ನಿಮ್ಮ ನಿರೀಕ್ಷೆ ಏನು?

    ಈ ಎಲ್ಲಾ ನಿರೀಕ್ಷೆಗಳಿಗೆ ಈ ವಾರ ತೆರೆ ಬೀಳಲಿದೆ. ಫೆಬ್ರವರಿ 23 ರಂದು ತಾರೀಖು ಮುಂಜಾನೆಯೇ ಶೋಗಳು ಆರಂಭವಾಗಲಿದ್ದು, 'ಹೆಬ್ಬುಲಿ'ಯ ಭೇಟೆ ಹೇಗಿರುತ್ತೆ ಎಂಬುದು ರಿವಿಲ್ ಆಗಿದೆ. ಇವುಗಳ ಮಧ್ಯೆ ಸುದೀಪ್ ಹೆಬ್ಬುಲಿಯಿಂದ ನೀವೇನೂ ನಿರೀಕ್ಷೀಸುತ್ತಿದ್ದೀರಾ ಎಂದು ಕೆಳಗೆ ನೀಡಿರುಬವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.....

    English summary
    Kannada Actor Kiccha Sudeep starrer 'Hebbuli' is releasing on Thursday (February 23) all over Karnataka. The movie also features Ravichandran, Ravishanker and Amal Pual. Here Are 10 Reasons As to why you should watch 'Hebbuli'.
    Wednesday, February 22, 2017, 16:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X