»   » ನಾಗತಿಹಳ್ಳಿ ನಿರ್ದೇಶನದಲ್ಲಿ ಮತ್ತೊಮ್ಮೆ‘ಕಾರು’ಬಾರು

ನಾಗತಿಹಳ್ಳಿ ನಿರ್ದೇಶನದಲ್ಲಿ ಮತ್ತೊಮ್ಮೆ‘ಕಾರು’ಬಾರು

Subscribe to Filmibeat Kannada

ನನ್ನ ಪ್ರೀತಿಯ ಹುಡುಗಿಯ ಕಾರ್‌...ಕಾರ್‌... ಕಾರ್‌... ಎಲ್ನೋಡಿ ಕಾರ್‌ ನಂತರ ಈಗ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ 'ಕಾರು"ಬಾರು ಆರಂಭವಾಗಿದೆ. ಪ್ರಿನ್ಸ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಹನುಮಂತ ಇನಾಂದಾರ್‌ ನಿರ್ಮಿಸುತ್ತಿರುವ 'ಸೂಪರ್‌ಸ್ಟಾರ್‌" ಗೀತೆಯಾಂದರಲ್ಲಿ ನೂರು ಮಂದಿ ನೃತ್ಯಪಟುಗಳ ಜತೆ 300 ಕಾರುಗಳು ಕಾಣಿಸಿಕೊಳ್ಳುತ್ತಿವೆ.


ಅಂದಹಾಗೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವವರೂ ನಾಗತಿಹಳ್ಳಿ ಚಂದ್ರಶೇಖರ್‌ ಅವರೇ. ಚಂದ್ರಶೇಖರ್‌ ಪ್ರಕಾರ 'ಸೂಪರ್‌ಸ್ಟಾರ್‌" ಪ್ರೀತಿ-ಪ್ರೇಮದ ಸಹಜ ಅನುಭಾವಕ್ಕೆ ನವೀನ ಶೈಲಿಯ ವಿಶ್ಲೇಷಣೆಯಾಂದಿಗೆ ವಿನೂತನ ಅನುಭವ ನೀಡಲಿದೆ.

ಪ್ರೀತಿಗಾಗಿ ನೇಪಾಳ ರಾಜವಂಶದಲ್ಲಿ ನಡೆದ ಭೀಕರ ಸರಣಿ ಕೊಲೆ ಪ್ರಕರಣವೇ 'ಸೂಪರ್‌ಸ್ಟಾರ್‌"ಗೆ ಸ್ಫೂರ್ತಿ. ಯುವ ನಿರ್ಮಾಪಕ ಇನಾಂದಾರ್‌ ಚಿತ್ರಕ್ಕಾಗಿ ಯಥೇಚ್ಛವಾಗಿ ಹಣ ಸುರಿದಿದ್ದಾರೆ. ಚಿತ್ರದ ಅಂತಿಮ ಹಂತದಲ್ಲಿ ಬರುವ ಗೀತೆ ಪ್ರೇಕ್ಷಕರನ್ನು ಆಶ್ಚರ್ಯಚಕಿತಗೊಳಿಸುತ್ತದಂತೆ.

ಹಂಸಲೇಖ, ಹೇಮಂತ್‌ಕುಮಾರ್‌ ತಾಳಮೇಳದಲ್ಲಿ ಮೂಡಿಬಂದಿರುವ ಗೀತೆಗೆ ಕೋರಮಂಗಲದ ಕ್ರೀಡಾಸಮುಚ್ಚಯ, ಹೌಸಿಂಗ್‌ಬೋರ್ಡ್‌ ಕಾಂಪ್ಲೆಕ್ಸ್‌ ಸುತ್ತಮುತ್ತ ನಡೆದ ಸತತ ಚಿತ್ರೀಕರಣದ ಬಳಿಕ ಕುಂಬಳಕಾಯಿ ಒಡೆದು ಚಿತ್ರೀಕರಣಕ್ಕೆ ಮಂಗಳಹಾಡಲಾಗಿದೆ. ಅತಿ ಶೀಘ್ರದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಿಗೆ 'ಸೂಪರ್‌ಸ್ಟಾರ್‌" ಲಗ್ಗೆ ಹಾಕಲಿದ್ದಾನೆ

English summary
300 cars in Super Star
Please Wait while comments are loading...

Kannada Photos

Go to : More Photos