ಶ್ರೇಷ್ಠ ಚಿತ್ರ ವಿಜೇತ 'ಸೂಪರ್' ಬಗ್ಗೆ ಭಾರೀ ಅಪಸ್ವರ!

Posted by:

ಕರ್ನಾಟಕ ರಾಜ್ಯದ ಶ್ರೇಷ್ಠ ಚಲನಚಿತ್ರ ಪ್ರಶಸ್ತಿ ಪಡೆದಿರುವ ಉಪೇಂದ್ರ ನಿರ್ದೇಶನ ಹಾಗೂ ನಟನೆ ಚಿತ್ರ 'ಸೂಪರ್', ಆಯ್ಕೆ ಸಮಿತಿಯಿಂದ ನೇರವಾಗಿ ಆಯ್ಕೆಯಾಗಿಲ್ಲ ಎಂಬ ಅಪಸ್ವರ ಇದೀಗ ಹರಿದಾಡತೊಡಗಿದೆ. ಆಯ್ಕೆ ಸಮಿತಿ ಮೂಲಗಳ ಪ್ರಕಾರ, ಭಾರತಿ ವಿಷ್ಣುವರ್ಧನ್ ನೇತೃತ್ವದ ಆಯ್ಕೆ ಸಮಿತಿ ಈ ಅಪಸ್ವರದಿಂದ ಭಾರೀ ವಿವಾದಕ್ಕೆ ಸಿಲುಕುವ ಸಂಭವವಿದೆ.

ನಿಯಮಾವಳಿಗಳ ಪ್ರಕಾರ, ಪ್ರಶಸ್ತಿ ಪಟ್ಟಿಯಲ್ಲಿರುವ ಚಿತ್ರಗಳ ಕಲಾವಿದರು ಅಥವಾ ತಂತ್ರಜ್ಞರು ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿರಬಾರದು. ಇದನ್ನು ಆರಂಭದಲ್ಲೇ ಉಲ್ಲಂಘಿಸಲಾಗಿತ್ತು. ಸಮಿತಿಗೆ 'ಸೂಪರ್' ಚಿತ್ರದ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಕಶ್ಯಪ್ ಸುಮ್ಮನೆ ಕೂರುವ ಬದಲು ಅವರಿವರಿಂದ ಒತ್ತಡ ತಂದು ಬೇರೆ ಚಿತ್ರಕ್ಕೆ ಬರಬೇಕಿದ್ದ ಪ್ರಶಸ್ತಿಯನ್ನು 'ಸೂಪರ್'ಗೆ ಕೊಡಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಸಿನಿಮಾ, ಕಲಾವಿದರು ಅಥವಾ ತಂತ್ರಜ್ಞರನ್ನು ಪ್ರಶಸ್ತಿಗೆ ಆಯ್ಕೆ ಮಾಡುವಾಗ, ಆಯ್ಕೆ ಸಮಿತಿ ಸದಸ್ಯರು ವೋಟಿಂಗ್ ವಿಧಾನವನ್ನು ಅನುಸರಿಸುವುದು ವಾಡಿಕೆ. ಅದರಂತೆ ಅತ್ಯುತ್ತಮ ಚಿತ್ರಕ್ಕಾಗಿ ನಡೆದ ವೋಟಿಂಗ್ ನಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದದ್ದು 'ಭಗವತಿ ಕಾಡು'. 'ತಮಸ್ಸು' ನಂತರದ ಸ್ಥಾನದಲ್ಲಿ ಮತ್ತು 'ಸೂಪರ್' ಕೊನೆಯ ಅಂದರೆ ಮೂರನೇ ಸ್ಥಾನದಲ್ಲಿತ್ತು.

ಇದೇ ಫಲಿತಾಂಶ ಘೋಷಣೆಯಾಗುತ್ತದೆ ಎಂದೇ ಸಮಿತಿಯ ಸದಸ್ಯರು ಅಂದುಕೊಂಡಿದ್ದರು. ಆದರೆ ಪ್ರಶಸ್ತಿ ಪ್ರಕಟವಾದಾಗ 'ಸೂಪರ್' ಚಿತ್ರಕ್ಕೆ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಘೋಷಿಸಿದ್ದರು. 'ಭಗವತಿ ಕಾಡು' ಎರಡನೇ ಸ್ಥಾನಕ್ಕೆ ಬಂದಿತ್ತು. 'ತಮಸ್ಸು' ಔಟ್ ಆಗಿ ಆ ಜಾಗವನ್ನು 'ಶಬ್ದಮಣಿ' ಆಕ್ರಮಿಸಿತ್ತು. ಆಯ್ಕೆ ಸಮಿತಿಯ ಸದಸ್ಯರು ಶಾಕ್ ಗೆ ಒಳಗಾಗಿದ್ದರು ಎನ್ನುತ್ತಿವೆ ಸುದ್ದಿ ಮೂಲಗಳು. ಮುಂದಿನ ಪುಟ ನೋಡಿ...

Read more about: ಭಾರತಿ ವಿಷ್ಣುವರ್ಧನ್, ಅಶೋಕ್ ಕಶ್ಯಪ್, ಉಪೇಂದ್ರ, bharathi vishnuvardhan, ashok kashyap, upendra

English summary
Upendra Movie Super won the Best Film State Award. But, now it became big Controversy. Everybody complaints Ashok Kashyap.
Please Wait while comments are loading...

Kannada Photos

Go to : More Photos