ಕನ್ನಡಕ್ಕೆ ತೆಲುಗಿನ ಹಾಸ್ಯ ನಟ ಅಲ್ಲರಿ ನರೇಶ್

Posted by:

ಇತ್ತೀಚೆಗೆ ಹಾಸ್ಯಪ್ರಧಾನ ಚಿತ್ರಗಳನ್ನು ಕನ್ನಡ ಚಿತ್ರರಸಿಕರು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಪರಿಶುದ್ಧ ಮನೋರಂಜನೆ ಅಪೇಕ್ಷಿಸುವ ಪ್ರೇಕ್ಷಕರಿಗಾಗಿ 'ಡಬ್ಬಲ್ ಧಮಕಾ' ಚಿತ್ರ ಆರಂಭವಾಗಿದೆ. "ಒನ್ ಗೆಟ್ ಒನ್ ಫ್ರೀ" ಎಂಬ ಅಡಿಬರಹ ಹೊಂದಿರುವ ಈ ಚಿತ್ರದ ಚಿತ್ರೀಕರಣಕ್ಕೆ ಕಳೆದ ವಾರ ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆದ ಸರಳ ಮುಹೂರ್ತ ಸಮಾರಂಭದಲ್ಲಿ ಚಾಲನೆ ನೀಡಲಾಯಿತು.

ತೆಲುಗು ಚಿತ್ರರಂಗದ ಬಲು ಬೇಡಿಕೆಯ ಯುವ ಹಾಸ್ಯನಟ ಅಲ್ಲರಿ ನರೇಶ್. ಇದೀಗ ಇವರು ಕನ್ನಡದ 'ಡಬ್ಬಲ್ ಧಮಕಾ' ಚಿತ್ರದ ಮೂಲಕ ಕನ್ನಡಕ್ಕೆ ಅತಿಥಿ ನಟನಾಗಿ ಅಡಿಯಿಡುತ್ತಿದ್ದಾರೆ. ತೆಲಗಿನ ಖ್ಯಾತ ನಿರ್ದೇಶಕ ಇ.ವಿ.ವಿ ಸತ್ಯನಾರಾಯಣ ಅವರ ಪುತ್ರ ಅಲ್ಲರಿ ನರೇಶ್. ಕನ್ನಡಕ್ಕೆ ಮತ್ತೊಂದು ಪಕ್ಕಾ ಹಾಸ್ಯ ಚಿತ್ರ 'ಡಬ್ಬಲ್ ಧಮಾಕಾ' ಮೂಲಕ ಲಭ್ಯವಾಗಲಿದೆ.

ಭಗವತಿ ಫಿಲಂಸ್‌ ಚೊಚ್ಚಲ ಕಾಣಿಕೆಯಾದ ಈ ಚಿತ್ರವನ್ನು ಕುಮಾರಿ ರೋಹಿಣಿ ನಿರ್ಮಿಸುತ್ತಿದ್ದಾರೆ. ಸತ್ಯ ವಾರಣಾಸಿ ಕಥೆ, ಚಿತ್ರಕಥೆ ಬರೆಯುವುದರೊಂದಿಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಕನ್ನಡ, ತಮಿಳು ಹಾಗೂ ತೆಲಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಾಯಿಕಾರ್ತಿಕ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಬೆಂಗಳೂರು, ಹೈದರಾಬಾದ್ ಹಾಗೂ ಕೊಡೈಕೆನಾಲ್‌ನಲ್ಲಿ ಚಿತ್ರಕ್ಕೆ 45ದಿನಗಳ ಚಿತ್ರೀಕರಣ ನಡೆಯಲಿದೆ. ಬಾಬಿ ಛಾಯಾಗ್ರಹಣ, ವಿಜಯಕುಮಾರ್ ನಿರ್ಮಾಣನಿರ್ವಹಣೆ ಹಾಗೂ ಮಧು ಅವರ ಸಂಕಲನವಿರುವ 'ಡಬ್ಬಲ್ ಧಮಕಾ' ಚಿತ್ರದ ನಾಯಕರಾಗಿ ವಿಜಯ್ ಮತ್ತು ಶ್ರೀನಿವಾಸ್ ಅಭಿನಯಿಸುತ್ತಿದ್ದಾರೆ, ಮುಂಬೈ ಮೂಲದ ಕರಿನಾ ಷಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Read more about: ಡಬ್ಬಲ್ ಧಮಾಕಾ, ಅಲ್ಲರಿ ನರೇಶ್, ಹಾಸ್ಯ ಚಿತ್ರ, ಅತಿಥಿ ಪಾತ್ರ, ಹೈದರಾಬಾದ್, ವಿಜಯ್, ರಾಮಾನಾಯ್ಡು ಸ್ಟುಡಿಯೋ, double dhamaka, allari naresh, guest role, vijay, ramanaidu studio, comedy film
Please Wait while comments are loading...

Kannada Photos

Go to : More Photos