ಬೆಳ್ಳಿತೆರೆಗೆ ಶಂಕರನಾಗ್ ಕನಸು ಬೆಂಗಳೂರು ಮೆಟ್ರೋ

Posted by:

'ಆ ದಿನಗಳು' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ರಂಗಭೂಮಿ ಕಲಾವಿದ ಸತ್ಯ ಎಲ್ಲಿ ಹೋದರು? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಅವರು ಶಂಕರನಾಗ್ ಹಿಂದೆ ಬಿದ್ದಿರುವ ಮಹತ್ವದ ಸಂಗತಿ ತಿಳಿಯುತ್ತದೆ. 'ಗುಂಡ್ರಗೋವಿ' ಚಿತ್ರದ ಬಳಿಕ ಸತ್ಯ ಬಹುತೇಕ ನಾಪತ್ತೆಯಾಗಿಬಿಟ್ಟಿದ್ದರು.

ಸತ್ಯ ಅವರು ಕೆಲವು ತಮಿಳು ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ಅವರ ನಾಪತ್ತೆಗೆ ಇದೂ ಒಂದು ಕಾರಣ ಎನ್ನಬಹುದು. ಸದ್ಯಕ್ಕೆ ಶಂಕರನಾಗ್ ಜೀವನದಲ್ಲಿ ನಡೆದ ಮಹತ್ವದ ಘಟನೆಗಳ ಆಧಾರದ ಮೇಲೆ ನಿರ್ಮಿಸುತ್ತಿರುವ ಚಿತ್ರದಲ್ಲಿ ಸತ್ಯ ಹೀರೋ ಆಗಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೆ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲದಿದ್ದರೂ 'ಬೆಂಗಳೂರು ಮೆಟ್ರೋ' ಎಂದು ಹೆಸರಿಡಲು ಚಿಂತಿಸಲಾಗಿದೆ. 'ಶಂಕರ್ ಕನಸು' ಎಂಬುದು ಚಿತ್ರದ ಅಡಿಬರಹ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಉಳಿದ ಪಾತ್ರವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

'ಗುಂಡ್ರಗೋವಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ತಾರೇಶ್‌ರಾಜ್ ನಿರ್ದೇಶನ ಚಿತ್ರಕ್ಕಿರುತ್ತದೆ. ಶಿವಕುಮಾರ್ ಸಜ್ಜನ್ ಎಂಬ ಸಾಫ್ಟ್‌ವೇರ್ ಕಂಪನಿ ಉದ್ಯಮಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಟ್ಟಿನಲ್ಲಿ ಸತ್ಯ ಅವರಿಗೆ ಮತ್ತೊಮ್ಮೆ ಪ್ರತಿಭೆಗೆ ಸವಾಲೊಡ್ಡುವಂತಹ ಪಾತ್ರ ಸಿಕ್ಕಿದೆ. (ಒನ್‌ಇಂಡಿಯಾ ಕನ್ನಡ)

Read more about: ಶಂಕರನಾಗ್, ಬೆಂಗಳೂರು ಮೆಟ್ರೋ, ಸತ್ಯ, ಆ ದಿನಗಳು, shankar nag, bangalore metro, satya, aa dinagalu

English summary
Aa Dinagalu fame actor Satya new Kannada movie titled as Bangalore Metro. The film be produced by Shivakumar Sajjan. which will be directed by Taresh Raj of Gundragovi.
Please Wait while comments are loading...

Kannada Photos

Go to : More Photos