ಸಾಯಿಕೃಷ್ಣ 'ಸಾಯಿ ಲೋಗೋ' ವಿನ್ಯಾಸ ಚೇಂಜ್

Posted by:

ಸಿನಿಮಾದ ಗೆಲುವು ಪ್ರಚಾರದ ಮೇಲೂ ನಿಂತಿದೆ. ವಿವಿಧ ಚಿತ್ರ-ವಿಚಿತ್ರ ಪೋಸ್ಟರ್ ಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುತ್ತವೆ. ಇದೂ ಒಂದು ಕಲೆ. ಪೋಸ್ಟರ್ ನೋಡಿದ ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟುಹಾಕುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಹೀಗೆ ಕಲೆಗೆ ತಲೆಬಾಗಿ ಪೋಸ್ಟರ್ ಡಿಸೈನ್ ಮಾಡುವವರಲ್ಲಿ ಕನ್ನಡದಲ್ಲಿ ಮಣಿ, ಭೂಷಣ್ ಗೀಚಿ, ಸಾಯಿಕೃಷ್ಣ ಮೊದಲಾದವರು ಮುಂಚೂಣಿಯಲ್ಲಿದ್ದಾರೆ.

ನಿರ್ದೇಶಕ ಸಾಯಿಪ್ರಕಾಶ್ರ ಮಗನಾದ ಸಾಯಿಕೃಷ್ಣ ಸುಮಾರು ಆರು ವರ್ಷಗಳಿಂದ ಉದ್ಯಮದಲ್ಲಿದ್ದಾರೆ. ತಾವು ಮಾಡುವ ಪೋಸ್ಟರ್ ಡಿಸೈನ್ ಗೆ ಸಾಯಿ ಬಳಸುತ್ತಿದ್ದ ಚಿಹ್ನೆಯನ್ನು ಈಗ ಬದಲಾಯಿಸಿದ್ದಾರೆ. ಹಿಂದೆ ಕೊಳಲಿನ ಮೇಲೆ 'ಸಾಯಿ' ಎಂಬ ಹೆಸರಿರುವ ಚಿಹ್ನೆಯನ್ನು ಬಳಸುತ್ತಿದ್ದರು. ಆದರೆ ಇನ್ಮುಂದೆ ಬರಲಿರುವ ಸಾಯಿ ಚಿಹ್ನೆ(ಲೋಗೋ)ವನ್ನು ಬದಲಾಗಲಿದೆ.

ಈಗಿರುವ ಹೊಸ ಲೋಗೋ ಸಾಯಿ ಎಂಬ ಹೆಸರು ಇಂಗ್ಲೀಷಿನಲ್ಲಿದ್ದು ಅದರ ಮೇಲೆ ನವಿಲು ಗರಿ ಆಕಾರದ ವಿನ್ಯಾಸವಿದೆ. ಭದ್ರ, ಪರಮಾತ್ಮ, ಜಾನಿ ಮೇರಾ ನಾಮ್, ಕಿರಾತಕ, ಜಾಲಿಬಾಯ್ ಹಾಗೂ ಕೆಳೆದವಾರ ಬಿಡುಗಡೆಗೊಂಡ ವಿಷ್ಣುವರ್ಧನ ಚಿತ್ರದಲ್ಲಿ ಹಳೆಯ ಲೋಗೋವನ್ನೇ ಸಾಯಿಕೃಷ್ಣ ಬಳಸಿದ್ದು. ಮುಂದಿನ ತಮ್ಮ ಚಿತ್ರಗಳ ಪೋಸ್ಟರ್ಗಳಲ್ಲಿ ಹೊಸ ಲೋಗೋವನ್ನು ಬಳಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)

Read more about: ಪರಮಾತ್ಮ, ವಿಷ್ಣುವರ್ಧನ, paramathma, kirataka

English summary
Poster Designer Saikrishna changed his old logo. In future, he will use his changed new logo. Changed Logo attached with this article.
Please Wait while comments are loading...

Kannada Photos

Go to : More Photos