ಮಾರ್ಚ್ ನಲ್ಲಿ 'ಐತಲಕಡಿ' ಕಾಮಿಡಿ ಬುಲೆಟ್ ಗಳು

ಬರೋಬ್ಬರಿ 108 ಕಲಾವಿದರನ್ನು ಬಳಸಿಕೊಂಡ ಮೊದಲ ಕನ್ನಡ ಚಿತ್ರ 'ಐತ್ತಲಕಡಿ'. ಬುಲೆಟ್ ಪ್ರಕಾಶ್ ರಷ್ಟೇ ದೈತ್ಯವಾದ ಚಿತ್ರತಂಡ 'ಐತಲಕಡಿ'ಗಿರುವುದು ವಿಶೇಷ.ಬೆಂಗಳೂರು ಮಿನರ್ವ ಮಿಲ್ಸ್ ನಲ್ಲಿ ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳುವ ಮೂಲಕ 'ಐತಲಕಡಿ' ಚಿತ್ರೀಕರಣ ಮುಕ್ತಾಯವಾಗಿದೆ.

ರಂಗಾಯಣ ರಘು ಮತ್ತು ಬುಲೆಟ್ ಪ್ರಕಾಶ್ ಚಿತ್ರದ ಮುಖ್ಯ ಪಾತ್ರಧಾರಿಗಳು. ಅತಿಥಿ ಪಾತ್ರವರ್ಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಸುದೀಪ್, ನವರಸ ನಾಯಕ ಜಗ್ಗೇಶ್, ಆಕ್ಷನ್ ಹೀರೋ ವಿಜಯ್, ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಪಕ್ಕಾ ಹಾಸ್ಯ ಚಿತ್ರವಾದ 'ಐತಲಕಡಿ' ಕತೆ ಮತ್ತು ನಿರ್ದೇಶನ ಜೆ ಜಿ ಕೃಷ್ಣ ಅವರದು.

ನಲವತ್ತೆರಡು ದಿನಗಳ ಕಾಲ ಬೆಂಗಳೂರಿನ ವಿವಿಧ ತಾಣಗಳಲ್ಲಿಚಿತ್ರೀಕರಣ ನಡೆಸಲಾಗಿದೆ. ಸಾಕಷ್ಟು ಕಡೆ ಮನಮೋಹಕ ಸೆಟ್ ಗಳನ್ನು ಹಾಕಿ ಚಿತ್ರೀಕರಿಸಿಕೊಳ್ಳಲಾಗಿದೆ. ಶೇಕಡಾ ನೂರರಷ್ಟು ಆರೋಗ್ಯಕರವಾದ ಹಾಸ್ಯ ಚಿತ್ರವಿದು. ಕುಟುಂಬ ಸಮೇತ ಬಂದು ನೋಡಿ ಆನಂದಿಸಬಹುದು ಎನ್ನುತ್ತಾರೆ ಜೆ ಜಿ ಕೃಷ್ಣ.

ಚಿತ್ರದ ಹಾಡೊಂದರಲ್ಲಿ 23 ಕಲಾವಿದರು ಜತೆಗೆ 72 ಜಾನಪದ ಕಲಾವಿದರನ್ನು ನೋಡಬಹುದು. ಟಿಕೆಟ್ ಬೆಲೆಯರ ಎರಡು ಪಟ್ಟು ಮನರಂಜನೆ ನೀಡುವ ವಿಶ್ವಾಸವನ್ನು ಚಿತ್ರದ ನಿರ್ಮಾಪಕರೂ ಆದ ಬುಲೆಟ್ ಪ್ರಕಾಶ್ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ವಿಜಯ್ ಚಿತ್ರದಲ್ಲಿ ಕಾಣಿಸುತ್ತಾರೆ. ಸಾಧುಕೋಕಿಲ ಸಂಗೀತ ನೀಡಿರುವ ಐತಲಕಡಿ ಚಿತ್ರ ಮಾರ್ಚ್ ನಲ್ಲಿ ತೆರೆಕಾಣಲಿದೆ.

Read more about: ಜಗ್ಗೇಶ್, jaggesh, ವಿಜಯ ರಾಘವೇಂದ್ರ, sudeep, ravichandran, ಸುದೀಪ್, ವಿಜಯ್, ರಂಗಾಯಣ ರಘು, rangayana raghu, ಬುಲೆಟ್ ಪ್ರಕಾಶ್, bullet prakash, ಐತಲಕಡಿ, aithalakkadi
Please Wait while comments are loading...

Kannada Photos

Go to : More Photos