twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಕಲಾ ಪರಿಷತ್ ನಲ್ಲಿ 'ರಾ ರಾ' ಎಂದ ನಾಗವಲ್ಲಿ

    |

    Soudharya
    ಆಪ್ತಮಿತ್ರ ಚಿತ್ರ ಶೂಟಿಂಗ್ ಪ್ರಾರಂಭದಿಂದಲೂ ನಾಗವಲ್ಲಿ ಕಾಟ ವಕ್ಕರಿಸಿದೆ ಎಂದು ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾಗುತ್ತಲೇ ಇದೆ. ಆಪ್ತಮಿತ್ರ ನಾಯಕ ವಿಷ್ಣುವರ್ಧನ್, ನಾಗವಲ್ಲಿ ಕಾಟಕ್ಕೆ ತುತ್ತಾಗಿದ್ದಾರೆ ಎಂಬಲ್ಲಿಂದ ಹಿಡಿದು ಕೊನೆಗೆ ಆಪ್ತರಕ್ಷಕದ ಮೂಲಕ ವಿಷ್ಣು ಸಾವಿಗೂ ಈ ನಾಗವಲ್ಲಿಯೇ ಕಾರಣ ಎಂದು ನಂಬಿದವರು ಇನ್ನೂ ಇದ್ದಾರೆ. ನಾಗವಲ್ಲಿ ದೇಶದ ತುಂಬಾ ಏನೋ ಒಂದು ಕಾರಣಕ್ಕೆ ಸುದ್ದಿಯಾಗುತ್ತಿರುವುದಂತೂ ಸತ್ಯ.

    ಈಗ ನಾಗವಲ್ಲಿ ಕಾಟ ಕೊಡುತ್ತಿರುವುದು ವಿಷ್ಣುವರ್ಧನ್ ಗೆ ಅಲ್ಲವೇ. ಯಾಕಂದ್ರೆ ವಿಷ್ಣು ಈಗಿಲ್ಲ. ಆದರೆ ಆ ಚಿತ್ರದಲ್ಲಿ ಬಳಸಿಕೊಂಡಿದ್ದ ನಾಗವಲ್ಲಿ ಕಲಾಕೃತಿ ರಚಿಸಿರುವ ಕಲಾವಿದ ಮಂಜುನಾಥ ಜಿ ಹೆಗಡೆಗೆ ಅದರ ಸಂಭಾವನೆ ಸಂದಾಯವಾಗಿಲ್ಲ ಎಂಬ ಹೊಸ ಬಾಂಬ್ ಗೆ ನಾಗವಲ್ಲಿ 7 ವರ್ಷಗಳ ನಂತರ ಕಾರಣಳಾಗಿದ್ದಾಳೆ. ಅದನ್ನು ಮಂಜುನಾಥ ಹೆಗಡೆ, ಚಿತ್ರಕಲಾ ಪರಿಷತ್ ನಲ್ಲಿ ಅವರ ಏಕವ್ಯಕ್ತಿ ಕಲಾ ಪ್ರದರ್ಶನದ ವೇಳೆ ಹೇಳಿಕೊಂಡಿದ್ದಾರೆ.

    "ಚಲಪತಿ ಎಂಬವರು ನಾಗವಲ್ಲಿ ಕಲಾಕೃತಿ ರಚನೆಗಾಗಿ ಒಂದು ಬೋರ್ಡ್ ಹಾಗೂ ಒಂದು ಸಾವಿರ ರು. ಮಾತ್ರ ಕೊಟ್ಟಿದ್ದಾರೆ. ಆಮೇಲೆ ಕೊಡುತ್ತೇನೆಂದವರು ಕೊಟ್ಟಿಲ್ಲ" ಎಂದಿದ್ದಾರೆ ಮಂಜುನಾಥ ಹೆಗಡೆ. ಆದರೆ ಚಲಪತಿ, "ನಾಗವಲ್ಲಿ ನನ್ನ ಸ್ವಂತ ಕೃತಿ. ಅದಕ್ಕೆ ಮಂಜುನಾಥ ಸಹಾಯಕರಷ್ಟೇ. ಅವರಿಗೆ ಕೊಡಬೇಕಾದದ್ದನ್ನು ಕೊಟ್ಟಿದ್ದೇನೆ. ಆಗ ಸುಮ್ಮನಿದ್ದು ಈಗ ಪ್ರಚಾರದ ಆಸೆಯಿಂದ ಗಲಾಟೆ ಎಬ್ಬಿಸಿದ್ದಾರೆ" ಎಂದಿದ್ದಾರೆ. ನಿಜವನ್ನು ನಾಗವಲ್ಲಿಯೇ ಹೇಳಬೇಕು (ಒನ್ ಇಂಡಿಯಾ ಕನ್ನಡ)

    English summary
    Manjunath Hegde, who is the maker of apthamitra nagavalli painting did not get his Remuneration for that. In this way again nagavalli came in to news.
 
 
    Wednesday, November 16, 2011, 11:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X