ಹರ ಇವ್ನೊಂಥರಾ ಎನ್ನುತ್ತಿದ್ದಾರೆ ನಟಿ ಪ್ರಜ್ಞಾ!

ಮೊದಲ ಪ್ರಯತ್ನದಲ್ಲೇ ಎಸ್ಸೆಸ್ಸೆಲ್ಸಿಯನ್ನು ಪೂರೈಸಿರುವ ನಟಿ ಪ್ರಜ್ಞಾರನ್ನು ಮತ್ತೊಂದು ಚಿತ್ರ ಹುಡುಕಿಕೊಂಡು ಬಂದಿದೆ! ಚಿತ್ರದ ಶೀರ್ಷಿಕೆ 'ಹರ', ಅಡಿಬರಹ 'ಇವ್ನೊಂಥರಾ'! ಈ ಚಿತ್ರವನ್ನು ದೇವರಾಜ್ ಪಾಲನ್ ನಿರ್ದೇಶಿಸುತ್ತಿದ್ದು ವಸಂತ್ ಎಂಬ ಹೊಸಬ ಚಿತ್ರದ ನಾಯಕ.

ಜೂ.18ರಂದು ಸೆಟ್ಟೇರಲಿರುವ ಈ ಚಿತ್ರವನ್ನು ಜಾನಕಿ ತುಳಸೀರಾಮ್ ಮತ್ತು ಕೆ ವಿ ಮುನಿಹನುಮಪ್ಪ ನಿರ್ಮಿಸುತ್ತಿದ್ದಾರೆ. ಕೆಂಪ, ಗಣೇಶ ಮತ್ತೆ ಬಂದ ಮುಂತಾದವು ಪ್ರಜ್ಞಾ ಅಭಿನಯದ ಚಿತ್ರಗಳು. ಈ ಚಿತ್ರಗಳಲ್ಲಿ ಪ್ರಜ್ಞಾ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು.

ಪ್ರಜ್ಞಾ ಮುಖ್ಯ ಭೂಮಿಕೆಯಲ್ಲಿರುವ 'ಬಾಬಾ', 'ಮಳೆಬಿಲ್ಲೇ', 'ಕೆಂಚ', 'ಪ್ರೀತ್ಸೆ ಪ್ರೀತ್ಸೆ' ತೆರೆಕಾಣಬೇಕಾಗಿವೆ. ಅಷ್ಟರಲ್ಲೇ ಮತ್ತೊಂದು ಚಿತ್ರ ಪ್ರಜ್ಞಾರನ್ನು ಹುಡುಕಿಕೊಂಡು ಬಂದಿರುವುದು ವಿಶೇಷ. ಒಟ್ಟಿನಲ್ಲಿ ಚಿಕ್ಕ ವಯಸ್ಸಿಗೆ ಸಾಕಷ್ಟು ಅವಕಾಶಗಳನ್ನು ಪ್ರಜ್ಞಾ ಬಾಚಿಕೊಳ್ಳುತ್ತಿದ್ದಾರೆ. ವಿಜಯ್ ಅಭಿನಯಿಸುತ್ತಿರುವ ದೇವ್ರು ಚಿತ್ರದಲ್ಲೂ ಪ್ರಜ್ಞಾ ನಟಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Read more about: ಕನ್ನಡ ನಟಿ, kannada actress, ಕೆಂಪ, ದೇವ್ರು, ಪ್ರಜ್ಞಾ, ಕೆಂಚ, kencha, ಹರ, ಗಣೇಶ ಮತ್ತೆ ಬಂದ, hara, pragna, ganesha mathe banda
Please Wait while comments are loading...

Kannada Photos

Go to : More Photos