"ಭದ್ರ"ಕೋಟೆಯಲ್ಲಿ ಮುರಳಿ ಮೀಟ್ಸ್ ಮೀರಾ!

Written by: * ಚಿತ್ರಗುಪ್ತ

ಒಬ್ಬ ನಾಯಕನ ಒಂದು ಚಿತ್ರ ಒಂದು ಹಂತಕ್ಕೆ ಓಕೆ ಆಗುವುದೇ ತಡ, ಆ ಹೀರೋ ಹಿಂದೆ ಮುಂದಿನ ಚಿತ್ರಗಳು ಆದಷ್ಟು ಬೇಗ ತೆರೆಗೆ ಬರಲು ಯತ್ನಿಸುತ್ತವೆ ಎನ್ನುವುದಕ್ಕೆ ತಾಜಾ ಉದಾಹರಣೆ ಪ್ರಜ್ವಲ್ ದೇವರಾಜ್.ಅವರ ಕೋಟೆ ಸಿನಿಮಾ ತೆರೆಕಂಡಿದ್ದೇ ತಡ, ಮುರಳಿ ಮೀಟ್ಸ್ ಮೀರಾ ಮತ್ತು ಭದ್ರ ಚಿತ್ರತಂಡ ಸಿಕ್ಕಾಪಟ್ಟೆ ಚುರುಕಾಗಿಬಿಟ್ಟಿವೆ.

ಮುರಳಿ... ಚಿತ್ರದ ನಿರ್ಮಾಪಕ ಯೋಗೀಶ್ ಹುಣಸೂರು ಫುಲ್‌ಖುಷ್ ಆಗಿದ್ದಾರೆ. ಆದಷ್ಟು ಬೇಗ ಚಿತ್ರಕ್ಕೆ ಒಂದು ಗತಿ ಕಾಣಿಸಿಬಿಟ್ಟರೆ "ಕೋಟೆ" ಬಿಸಿಯಲ್ಲೇ ಜನ ತಮ್ಮ ಚಿತ್ರವನ್ನೂ ನೋಡಿಬಿಡುತ್ತಾರೆ ಎನ್ನುವುದು ಅವರ ಅಲಿಖಿತ ನಂಬಿಕೆ. ಅದೇ ರೀತಿ ಇನ್ನೊಂದು ಕಡೆ ನಿರ್ಮಾಪಕ ಎಂ.ಎನ್.ಕುಮಾರ್ 'ಭದ್ರ' ಚಿತ್ರವನ್ನು 'ಕೋಟೆ' ಚಿತ್ರಮಂದಿರದಿಂದ "ಟೇಕಾಫ್" ಆಗುವ ಮುನ್ನವೇ ತೆರೆಕಾಣಿಸುವ ತರಾತುರಿಯಲ್ಲಿ ಮಾತಿನ ಜೋಡಣೆಯ ಕೆಲಸದಲ್ಲಿ ಮುಂದಾಗಿದ್ದಾರೆ.

ಆದರೆ, ಪ್ರಜ್ವಲ್‌ಗಿಂತ ಒಂದು ಕೈ ಹಿಂದೆ ನಿಂತಿರುವ ಲೂಸ್ ಮಾದ ಯೋಗೀಶನ ಒಂದಷ್ಟು ಚಿತ್ರಗಳು ತೆರೆಕಾಣದೇ ಡಬ್ಬದಲ್ಲೇ ಕೂತಿವೆ. ಒಬ್ಬರು 'ದೇವದಾಸ್' ಚಿತ್ರ ಮೊದಲು ಬರಲಿ ಎಂದು ಕೈ ಕಟ್ಟಿ ಕೂತಿದ್ದಾರೆ. ಇನ್ನೊಬ್ಬರು 'ಧೂಳ್' ಬಂದುಹೋಗಲಿ ಎಂದು ಸುಮ್ಮನಿದ್ದಾರೆ. ಹೀಗಾಗಲು "ರಾವಣ"ನ "ಯಕ್ಷ"ಗಿರಿಯೇ ಕಾರಣ. 'ದೇವದಾಸ್' ನಿರ್ಮಾಪಕ ಎಬಿಸಿಡಿ ಶಾಂತಕುಮಾರ್ ಸಿನಿಮಾ ಹೊರಹಾಕಲು ಹೆದರಿ ಬೆವರುತ್ತಿದ್ದಾರೆ!

Read more about: ಪ್ರಜ್ವಲ್ ದೇವರಾಜ್, ಕೋಟೆ, ಭದ್ರ, ಯೋಗೇಶ್, ಲೂಸ್ ಮಾದ, ರಾವಣ, ಯಕ್ಷ, ದೇವದಾಸ್, ಚಿತ್ರಗುಪ್ತ, prajwal devraj, kote, bhadra, yogesh, loose mada, ravana, yaksha, devadas, chitragupta

English summary
Aftere release of 'Kote' film Prajwal Devraj's seems to be getting busy in Kannada. Kote going on to become a hit. And post Kote, producers and directors seem to be making a bee-line for Prjwal Devraj. Murali Meets Meera and Bhadra shooting are in brisk progress.

Kannada Photos

Go to : More Photos